IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Mar 19, 2022 | 9:57 PM
IPL Records: ಕಳೆದ 14 ಸೀಸನ್ ಐಪಿಎಲ್ನಲ್ಲಿ 9 ಆಟಗಾರರು ಒಂದೇ ಇನಿಂಗ್ಸ್ನಲ್ಲಿ 10 ಕ್ಕೂ ಅಧಿಕ ಸಿಕ್ಸ್ ಬಾರಿಸಿದ್ದಾರೆ. ಹೀಗೆ ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ ಸಿಕ್ಸ್ಗಳ ಸುರಿಮಳೆಗೈದ 10 ಬ್ಯಾಟ್ಸ್ಮನ್ಗಳ ಪರಿಚಯ ಇಲ್ಲಿದೆ.
1 / 11
ಐಪಿಎಲ್ ಸೀಸನ್ 15 ಶುರುವಾಗಲು ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಭರ್ಜರಿ ಸಿದ್ದತೆಯಲ್ಲಿದೆ. ಅದರಂತೆ ಈ ಬಾರಿ 10 ತಂಡಗಳು ಕಣಕ್ಕಿಳಿಯಲಿದ್ದು, ಎಲ್ಲಾ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಅದರಲ್ಲೂ ಕೆಲ ತಂಡಗಳಲ್ಲಿ ಸ್ಟಾರ್ ಆಟಗಾರರಿದ್ದು, ಭರ್ಜರಿ ಸಿಕ್ಸರ್ಗಳನ್ನು ನಿರೀಕ್ಷಿಸಬಹುದು. ಇನ್ನು ಕಳೆದ 14 ಸೀಸನ್ ಐಪಿಎಲ್ನಲ್ಲಿ 9 ಆಟಗಾರರು ಒಂದೇ ಇನಿಂಗ್ಸ್ನಲ್ಲಿ 10 ಕ್ಕೂ ಅಧಿಕ ಸಿಕ್ಸ್ ಬಾರಿಸಿದ್ದಾರೆ. ಹೀಗೆ ಐಪಿಎಲ್ನಲ್ಲಿ ಒಂದೇ ಪಂದ್ಯದಲ್ಲಿ ಸಿಕ್ಸ್ಗಳ ಸುರಿಮಳೆಗೈದ 10 ಬ್ಯಾಟ್ಸ್ಮನ್ಗಳ ಪರಿಚಯ ಇಲ್ಲಿದೆ.
2 / 11
10- ಕೀರನ್ ಪೊಲಾರ್ಡ್: 2019 ರಲ್ಲಿ ಪೊಲಾರ್ಡ್ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ 10 ಸಿಕ್ಸ್ ಸಿಡಿಸುವ ಮೂಲಕ ಕೇವಲ 31 ಎಸೆತಗಳಲ್ಲಿ 83 ರನ್ ಬಾರಿಸಿದ್ದರು.
3 / 11
9- ಕ್ರಿಸ್ ಗೇಲ್: 2018 ರಲ್ಲಿ ಗೇಲ್ ಎಸ್ಆರ್ಹೆಚ್ ವಿರುದ್ದ 11 ಸಿಕ್ಸ್ ಬಾರಿಸಿದ್ದರು. ಈ ವೇಳೆ ಕ್ರಿಸ್ ಗೇಲ್ 63 ಎಸೆತಗಳಲ್ಲಿ 104 ರನ್ ಸಿಡಿಸಿದ್ದರು.
4 / 11
8- ಮುರಳಿ ವಿಜಯ್: 2010 ರಲ್ಲಿ ಮುರಳಿ ವಿಜಯ್ ರಾಜಸ್ಥಾನ್ ರಾಯಲ್ಸ್ ವಿರುದ್ದ 11 ಸಿಕ್ಸ್ ಸಿಡಿಸುವ ಮೂಲಕ ಕೇವಲ 56 ಎಸೆತಗಳಲ್ಲಿ 127 ರನ್ ಬಾರಿಸಿದ್ದರು.
5 / 11
7- ಸನತ್ ಜಯಸೂರ್ಯ: 2008 ರಲ್ಲಿ ಸನತ್ ಜಯಸೂರ್ಯ ಸಿಎಸ್ಕೆ ವಿರುದ್ದ 48 ಎಸೆತಗಳಲ್ಲಿ 114 ರನ್ ಬಾರಿಸಿದ್ದರು. ಈ ವೇಳೆ 11 ಭರ್ಜರಿ ಸಿಕ್ಸರ್ ಸಿಡಿಸಿದ್ದರು.
6 / 11
6- ಆಂಡ್ರೆ ರಸೆಲ್: 2018 ರಲ್ಲಿ ರಸೆಲ್ ಸಿಎಸ್ಕೆ ವಿರುದ್ದ 48 ಎಸೆತಗಳಲ್ಲಿ 114 ರನ್ ಬಾರಿಸಿದ್ದರು. ಈ ಭರ್ಜರಿ ಇನಿಂಗ್ಸ್ನಲ್ಲಿ ರಸೆಲ್ ಬ್ಯಾಟ್ನಿಂದ 11 ಸಿಕ್ಸರ್ಗಳು ಸಿಡಿದಿದ್ದವು.
7 / 11
5- ಕ್ರಿಸ್ ಗೇಲ್: 2015 ರಲ್ಲಿ ಗೇಲ್ ಪಂಜಾಬ್ ಕಿಂಗ್ಸ್ 12 ಸಿಕ್ಸ್ ಬಾರಿಸುವ ಮೂಲಕ 57 ಎಸೆತಗಳಲ್ಲಿ 117 ರನ್ ಬಾರಿಸಿ ಅಬ್ಬರಿಸಿದ್ದರು.
8 / 11
4- ಎಬಿ ಡಿವಿಲಿಯರ್ಸ್: 2016 ರಲ್ಲಿ ಎಬಿಡಿ ಗುಜರಾತ್ ಲಯನ್ಸ್ ವಿರುದ್ದ 52 ಎಸೆತಗಳಲ್ಲಿ 129 ರನ್ ಬಾರಿಸಿದ್ದರು. ಈ ವೇಳೆ ಎಬಿಡಿ ಸಿಡಿಸಿದ್ದು ಬರೋಬ್ಬರಿ 12 ಸಿಕ್ಸ್ಗಳು.
9 / 11
3- ಕ್ರಿಸ್ ಗೇಲ್: 2012 ರಲ್ಲಿ ಕ್ರಿಸ್ ಗೇಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 62 ಎಸೆತಗಳಲ್ಲಿ 128 ರನ್ ಚಚ್ಚಿದ್ದರು. ಈ ವೇಳೆ ಗೇಲ್ 13 ಸಿಕ್ಸರ್ ಬಾರಿಸಿದ್ದರು.
10 / 11
2- ಬ್ರೆಂಡನ್ ಮೆಕಲಂ: 2008 ರಲ್ಲಿ ಆರ್ಸಿಬಿ ವಿರುದ್ದ ಮೆಕಲಂ 13 ಸಿಕ್ಸ್ ಸಿಡಿಸುವ ಮೂಲಕ 73 ಎಸೆತಗಳಲ್ಲಿ 158 ರನ್ ಬಾರಿಸಿದ್ದರು. ಇದು ಐಪಿಎಲ್ನ ಮೊದಲ ಶತಕ ಎಂಬುದು ವಿಶೇಷ.
11 / 11
1- ಕ್ರಿಸ್ ಗೇಲ್: 2013 ರಲ್ಲಿ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ದ 66 ಎಸೆತಗಳಲ್ಲಿ 175 ರನ್ ಬಾರಿಸಿದ್ದರು. ಈ ವೇಳೆ ಗೇಲ್ ಬ್ಯಾಟ್ನಿಂದ ಮೂಡಿಬಂದಿದ್ದು ಬರೋಬ್ಬರಿ 17 ಭರ್ಜರಿ ಸಿಕ್ಸರ್ಗಳು. ಇದು ಐಪಿಎಲ್ನ ದಾಖಲೆಯಾಗಿ ಉಳಿದಿದೆ.