AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shane Warne Funeral: ವಾರ್ನ್‌ಗೆ ಅಂತಿಮ ವಿದಾಯ; ಕುಟುಂಬಸ್ಥರು, ಗೆಳೆಯರು ಸೇರಿದಂತೆ 80 ಅತಿಥಿಗಳು ಉಪಸ್ಥಿತಿ

Shane Warne Funeral: ಮೆಲ್ಬೋರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರ ಕುಟುಂಬ ಮತ್ತು ಸ್ನೇಹಿತರು ಅಗಲಿದೆ ಲೆಜೆಂಡ್​ಗೆ ವಿದಾಯ ಹೇಳಿದರು. ಈ ಸಮಯದಲ್ಲಿ ಶೇನ್ ವಾರ್ನ್ ಅವರ ಜಾಕ್ಸನ್, ಬ್ರೂಕ್ ಮತ್ತು ಸಮ್ಮರ್ ಅವರ ಎಲ್ಲಾ ಮೂವರು ಮಕ್ಕಳು ಉಪಸ್ಥಿತರಿದ್ದರು.

ಪೃಥ್ವಿಶಂಕರ
|

Updated on:Mar 20, 2022 | 3:19 PM

Share
ಮೆಲ್ಬೋರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರ ಕುಟುಂಬ ಮತ್ತು ಸ್ನೇಹಿತರು ಅಗಲಿದೆ ಲೆಜೆಂಡ್​ಗೆ ವಿದಾಯ ಹೇಳಿದರು. ಈ ಸಮಯದಲ್ಲಿ ಶೇನ್ ವಾರ್ನ್ ಅವರ ಜಾಕ್ಸನ್, ಬ್ರೂಕ್ ಮತ್ತು ಸಮ್ಮರ್ ಅವರ ಎಲ್ಲಾ ಮೂವರು ಮಕ್ಕಳು ಉಪಸ್ಥಿತರಿದ್ದರು. ಅವರ ಹೆತ್ತವರಾದ ಕೀತ್ ಮತ್ತು ಬ್ರಿಗಿಟ್ಟೆ ಕೂಡ ಉಪಸ್ಥಿತರಿದ್ದರು. ಇವರನ್ನು ಹೊರತುಪಡಿಸಿ, ಕೊನೆಯ ವಿದಾಯಕ್ಕಾಗಿ 80 ಅತಿಥಿಗಳು ಹಾಜರಿದ್ದರು. ಶೇನ್ ವಾರ್ನ್ ಕೆಲ ದಿನಗಳ ಹಿಂದೆ ಥಾಯ್ಲೆಂಡ್ ನಲ್ಲಿ ಸಾವನ್ನಪ್ಪಿದ್ದರು.

1 / 5
ಶೇನ್ ವಾರ್ನ್ ಅವರ ಆಪ್ತ ಸ್ನೇಹಿತ ಎಡ್ಡಿ ಮ್ಯಾಗೈರ್ ಸ್ತೋತ್ರವನ್ನು ಓದಿದರು. ಈ ಸಮಾರಂಭವು ಮೂರಾಬಿನಲ್ಲಿ ನಡೆಯಿತು. ಅಂತಿಮ ವಿದಾಯಕ್ಕೆ ಆಹ್ವಾನಿಸಿದ ಅತಿಥಿಗಳು ಸೇಂಟ್ ಕಿಲ್ಡಾ ಶಿರೋವಸ್ತ್ರಗಳನ್ನು ಧರಿಸಿದ್ದರು. ಜೊತೆಗೆ ವಾರ್ನ್ ಶವಪೆಟ್ಟಿಗೆಯ ಮೇಲೂ ಈ ಬಟ್ಟೆಯನ್ನು ಸುತ್ತಲಾಗಿತ್ತು.

2 / 5
Shane Warne Funeral: ವಾರ್ನ್‌ಗೆ ಅಂತಿಮ ವಿದಾಯ; ಕುಟುಂಬಸ್ಥರು, ಗೆಳೆಯರು ಸೇರಿದಂತೆ 80 ಅತಿಥಿಗಳು ಉಪಸ್ಥಿತಿ

ಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರ ಅಂತಿಮ ವಿದಾಯದಲ್ಲಿ ಕ್ರಿಕೆಟ್ ಜಗತ್ತಿನ ಅನೇಕ ದೊಡ್ಡ ಹೆಸರುಗಳು ಉಪಸ್ಥಿತರಿದ್ದರು. ಇವರಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಮಾರ್ಕ್ ಟೇಲರ್, ಅಲನ್ ಬಾರ್ಡರ್, ಮೈಕಲ್ ಕ್ಲಾರ್ಕ್, ಮಾಜಿ ಇಂಗ್ಲೆಂಡ್ ನಾಯಕ ಮೈಕಲ್ ವಾನ್, ಆಸ್ಟ್ರೇಲಿಯಾದ ಆಟಗಾರರಾದ ಮೆರ್ವ್ ಹ್ಯೂಸ್, ಗ್ಲೆನ್ ಮೆಕ್‌ಗ್ರಾತ್, ಮಾರ್ಕ್ ವಾ ಮತ್ತು ಇಯಾನ್ ಹೀಲಿ ಸೇರಿದ್ದರು.

3 / 5
Shane Warne Funeral: ವಾರ್ನ್‌ಗೆ ಅಂತಿಮ ವಿದಾಯ; ಕುಟುಂಬಸ್ಥರು, ಗೆಳೆಯರು ಸೇರಿದಂತೆ 80 ಅತಿಥಿಗಳು ಉಪಸ್ಥಿತಿ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಶೇನ್ ವಾರ್ನ್ ಅವರ ಅಂತಿಮ ವಿದಾಯದಲ್ಲಿ ಮೈಕೆಲ್ ವಾನ್ ಅವರೊಂದಿಗೆ ಕಾಣಿಸಿಕೊಂಡರು. ಮಾರ್ಚ್ 30 ರಂದು ಸರ್ಕಾರಿ ಗೌರವಗಳೊಂದಿಗೆ ವಾರ್ನ್ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರು ಸಹ ಇದರಲ್ಲಿ ಭಾಗವಹಿಸಬಹುದು. ಈ ಅಂತ್ಯಕ್ರಿಯೆಯು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಜೊತೆಗೆ MCG ಯ ಗ್ರೇಟ್ ಸದರ್ನ್ ಸ್ಟ್ಯಾಂಡ್‌ಗೆ ಶೇನ್ ವಾರ್ನ್ ಹೆಸರಿಡಲು ಚಿಂತಿಸಲಾಗಿದೆ.

4 / 5
Shane Warne Funeral: ವಾರ್ನ್‌ಗೆ ಅಂತಿಮ ವಿದಾಯ; ಕುಟುಂಬಸ್ಥರು, ಗೆಳೆಯರು ಸೇರಿದಂತೆ 80 ಅತಿಥಿಗಳು ಉಪಸ್ಥಿತಿ

ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಶೇನ್ ವಾರ್ನ್ ಮಾರ್ಚ್ 4 ರಂದು ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರವನ್ನು ವಾರದ ಹಿಂದೆ ಥಾಯ್ಲೆಂಡ್‌ನಿಂದ ವಿಮಾನದ ಮೂಲಕ ಆಸ್ಟ್ರೇಲಿಯಾಕ್ಕೆ ತರಲಾಗಿತ್ತು. ವಾರ್ನ್ ಸಾವಿಗೆ ವಿಶ್ವವೇ ಸಂತಾಪ ಸೂಚಿಸಿದೆ.

5 / 5

Published On - 1:57 pm, Sun, 20 March 22