IPL 2022: ಮೆಗಾ ಹರಾಜಿಗೂ ಮುನ್ನವೇ ಐಪಿಎಲ್ನಿಂದ ಸ್ಟಾರ್ ಬೌಲರ್ ಔಟ್..!
TV9 Web | Updated By: ಝಾಹಿರ್ ಯೂಸುಫ್
Updated on:
Jan 11, 2022 | 8:30 PM
IPL 2022 Mega Auction: ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂಬುದನ್ನು ಐಪಿಎಲ್ ಆಡಳಿತ ಮಂಡಳಿಯು ದೃಢಪಡಿಸಿದೆ. ಅದರಂತೆ ಮುಂದಿನ ತಿಂಗಳ 2ನೇ ವಾರದ ಶನಿವಾರ ಮತ್ತು ಭಾನುವಾರ ಐಪಿಎಲ್ ಮೆಗಾ ಹರಾಜು ನಡೆಯಲಿದೆ.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆದರೆ ಈ ಹರಾಜಿನಲ್ಲಿ ಐಪಿಎಲ್ನ ಸ್ಟಾರ್ ಬೌಲರುಗಳಲ್ಲಿ ಒಬ್ಬರಾಗಿರುವ ಜೋಫ್ರಾ ಆರ್ಚರ್ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
2 / 7
ಕಳೆದ ಸೀಸನ್ ಐಪಿಎಲ್ನ ದ್ವಿತಿಯಾರ್ಧದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನಾಗಿದ್ದ ಜೋಫ್ರಾ ಆರ್ಚರ್ ಹೊರಗುಳಿದಿದ್ದರು. ಮೊಣಕೈಗೆ ಗಾಯದ ಕಾರಣ ಆರ್ಚರ್ ಐಪಿಎಲ್ ಆಡಿರಲಿಲ್ಲ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ನಲ್ಲೂ ಕಾಣಿಸಿಕೊಂಡಿರಲಿಲ್ಲ.
3 / 7
ಕಳೆದ ಸೀಸನ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನಾಗಿದ್ದ ಜೋಫ್ರಾ ಆರ್ಚರ್ ಐಪಿಎಲ್ ದ್ವಿತಿಯಾರ್ಧದ ವೇಳೆ ಹೊರಗುಳಿದಿದ್ದರು. ಮೊಣಕೈಗೆ ಗಾಯದ ಕಾರಣ ಆರ್ಚರ್ ಐಪಿಎಲ್ ಆಡಿರಲಿಲ್ಲ. ಅಷ್ಟೇ ಅಲ್ಲದೆ ಟಿ20 ವಿಶ್ವಕಪ್ನಲ್ಲೂ ಕಾಣಿಸಿಕೊಂಡಿರಲಿಲ್ಲ.
4 / 7
ಇದೀಗ ಆ್ಯಶಸ್ ಸರಣಿಯಿಂದ ಕೂಡ ಜೋಫ್ರಾ ಆರ್ಚರ್ ಹೊರುಗಳಿದಿದ್ದು, ಮೊಣಕೈಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಗಾಯದ ಕಾರಣ ಕಳೆದ ಐದಾರು ತಿಂಗಳಿಂದ ಮೈದಾನದಿಂದ ಹೊರಗಿರುವ ಆರ್ಚರ್ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ.
5 / 7
ಪ್ರಸ್ತುತ ಮಾಹಿತಿ ಪ್ರಕಾರ, ಜೋಫ್ರಾ ಆರ್ಚರ್ ಅವರು ಕೈಗೆ ಸರ್ಜರಿ ಮಾಡಿಕೊಂಡಿದ್ದು, ಸಂಪೂರ್ಣ ಗುಣಮುಖರಾಗಿ ಮೈದಾನಕ್ಕಿಳಿಯಲು ಇನ್ನೊಂದಷ್ಟು ತಿಂಗಳು ಬೇಕಾಗಬಹುದು. ಅಲ್ಲದೆ ಜೂನ್ 2022 ರವರೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಕೂಡ ಸೂಚನೆ ನೀಡಿದ್ದಾರೆ. ಆದರೆ ಇತ್ತ ಐಪಿಎಲ್ ಸೀಸನ್ 15 ಏಪ್ರಿಲ್ನಲ್ಲಿ ಆರಂಭವಾಗಲಿದ್ದು, ಈ ವೇಳೆಗೆ ಜೋಫ್ರಾ ಆರ್ಚರ್ ಗುಣಮುಖರಾಗುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಈ ಬಾರಿ ಮೆಗಾ ಹರಾಜಿನಲ್ಲಿ ಆರ್ಚರ್ ಹೆಸರು ಕಾಣಿಸಿಕೊಳ್ಳುವುದಿಲ್ಲ.
6 / 7
ಈ ಬಾರಿ ರಾಜಸ್ಥಾನ್ ರಾಯಲ್ಸ್ ಜೋಫ್ರಾ ಆರ್ಚರ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದು, ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರೆ ದೊಡ್ಡ ಮೊತ್ತಕ್ಕೆ ಬಿಡ್ ಆಗುವ ಸಾಧ್ಯತೆಯಿತ್ತು. ಆದರೆ ಇದೀಗ ಮೊಣಕೈ ಗಾಯವು ಜೋಫ್ರಾ ಆರ್ಚರ್ ಅವರ ಕ್ರಿಕೆಟ್ ಕೆರಿಯರ್ಗೆ ಹೊಸ ಸವಾಲಾಗಿ ಮಾರ್ಪಟ್ಟಿದೆ.
7 / 7
ಐಪಿಎಲ್ನಲ್ಲಿ 35 ಪಂದ್ಯಗಳನ್ನು ಆಡಿರುವ ಜೋಫ್ರಾ ಆರ್ಚರ್ 7.13 ರ ಎಕಾನಮಿಯಲ್ಲಿ 46 ವಿಕೆಟ್ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಐಪಿಎಲ್ನ ಅತ್ಯಂತ ಯಶಸ್ವಿ ಬೌಲರುಗಳಲ್ಲಿ ಒಬ್ಬರಾಗಿ ಆರ್ಚರ್ ಗುರುತಿಸಿಕೊಂಡಿದ್ದರು.