- Kannada News Photo gallery Cricket photos ICC Test Rankings: Virat Kohli and Rohit Sharma retain places in top 10
ICC Test Rankings: ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಅಗ್ರ ಹತ್ತರಲ್ಲಿ ಇಬ್ಬರು ಭಾರತೀಯರು
ICC Test Rankings: ಜೋಹಾನ್ಸ್‌ಬರ್ಗ್ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಅಜೇಯ 96 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಟಾಪ್ 10ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಕೇಪ್ ಟೌನ್‌ನಲ್ಲಿ ನಡೆದ 3 ನೇ ಟೆಸ್ಟ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 79 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮಿಂಚಿದ್ದರು.
Updated on:Jan 12, 2022 | 5:34 PM

ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಉಪನಾಯಕ ಸ್ಟೀವ್ ಸ್ಮಿತ್ ಜಿಗಿತ ಕಂಡಿದ್ದರೆ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ಸ್ಥಾನ ಪಲ್ಲಟವಾಗಿದೆ. ಇನ್ನು ಈ ಟಾಪ್ 10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಕೂಡ ಇರುವುದು ವಿಶೇಷ.

ಇನ್ನು ಜೋಹಾನ್ಸ್‌ಬರ್ಗ್ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಅಜೇಯ 96 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಟಾಪ್ 10ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಕೇಪ್ ಟೌನ್‌ನಲ್ಲಿ ನಡೆದ 3 ನೇ ಟೆಸ್ಟ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 79 ರನ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮಿಂಚಿದ್ದರು. ಈ ಭರ್ಜರಿ ಇನಿಂಗ್ಸ್ನೊಂದಿಗೆ ಇದೀಗ ಕೊಹ್ಲಿ ಮತ್ತೆ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಿದ್ರೆ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಯಾರು ಯಾವ ಸ್ಥಾನದಲ್ಲಿದ್ದಾರೆ ನೋಡೋಣ.

5- ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ)- 826 ಪಾಯಿಂಟ್ಸ್

2- ಜೋ ರೂಟ್ (ಇಂಗ್ಲೆಂಡ್)- 859 ಪಾಯಿಂಟ್ಸ್

3- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ)- 842 ಪಾಯಿಂಟ್ಸ್

1- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)- 883 ಪಾಯಿಂಟ್ಸ್

5- ರೋಹಿತ್ ಶರ್ಮಾ (ಭಾರತ)

9- ದಿಮುತ್ ಕರುಣರತ್ನೆ (ಶ್ರೀಲಂಕಾ)- 759 ಪಾಯಿಂಟ್ಸ್

7- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

4- ಬಾಬರ್ ಆಝಂ (ಪಾಕಿಸ್ತಾನ್)- 829 ಪಾಯಿಂಟ್ಸ್

9- ವಿರಾಟ್ ಕೊಹ್ಲಿ (ಭಾರತ)

10- ಡೀನ್ ಎಲ್ಗರ್ (ದಕ್ಷಿಣ ಆಫ್ರಿಕಾ)
Published On - 4:36 pm, Wed, 12 January 22
