ಅಂದಹಾಗೆ, ವಾಷಿಂಗ್ಟನ್ ಸುಂದರ್ ಮಾರ್ಚ್ 2021 ರಿಂದ ಟೀಮ್ ಇಂಡಿಯಾದಿಂದ ಹೊರಗಿದ್ದಾರೆ. ಇಂಜುರಿಯಿಂದಾಗಿ ಅವರು ಸಾಕಷ್ಟು ಸಮಯ ತಂಡದಿಂದ ದೂರವಿದ್ದರು. ನಂತರ ಅವರು ವಿಜಯ್ ಹಜಾರೆ ಟ್ರೋಫಿಯಿಂದ ಮೈದಾನಕ್ಕೆ ಮರಳಿದರು. ಆಯ್ಕೆ ಸಮಿತಿಯು ಅವರನ್ನು ದಕ್ಷಿಣ ಆಫ್ರಿಕಾದ ಏಕದಿನ ಸರಣಿಗೆ ಆಯ್ಕೆ ಮಾಡಿದೆ. ಆದರೆ ಈಗ ಅವರು ಕೋವಿಡ್‌ನಿಂದಾಗಿ ಮತ್ತೊಮ್ಮೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಜನವರಿ 19 ರಿಂದ ಆರಂಭವಾಗಲಿದೆ.