IPL 2022: ವಿರಾಟ್ ಕೊಹ್ಲಿ, ವಾರ್ನರ್ನ ಹಿಂದಿಕ್ಕಿದ ಕೆಎಲ್ ರಾಹುಲ್
TV9 Web | Updated By: ಝಾಹಿರ್ ಯೂಸುಫ್
Updated on:
Apr 05, 2022 | 3:13 PM
IPL 2022: ಟಿ20 ಕ್ರಿಕೆಟ್ನಲ್ಲಿ 50 ಅರ್ಧಶತಕಗಳನ್ನು ಬಾರಿಸಿದ ಐದನೇ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಕೂಡ ಕೆಎಲ್ ರಾಹುಲ್ ಬರೆದಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ ಈ ಸಾಧನೆ ಮಾಡಿದ್ದರು.
1 / 5
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅದ್ಭುತ ಅರ್ಧಶತಕ ಬಾರಿಸಿದರು. 50 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಂತೆ 68 ರನ್ ಗಳಿಸಿದರು. ಈ ಅರ್ಧಶತಕದೊಂದಿಗೆ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮುರಿದಿರುವುದು ವಿಶೇಷ. ಕಳೆದ 6 ವರ್ಷಗಳಲ್ಲಿ ಐಪಿಎಲ್ ಪಿಚ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಇದೀಗ ರಾಹುಲ್ ಪಾತ್ರರಾಗಿದ್ದಾರೆ.
2 / 5
ಕೆಎಲ್ ರಾಹುಲ್ ಕಳೆದ 6 ವರ್ಷಗಳಲ್ಲಿ ಅಂದರೆ ಐಪಿಎಲ್ 2016 ರಿಂದ ಇದುವರೆಗೆ 30 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಸನ್ ರೈಸರ್ಸ್ ವಿರುದ್ಧ ಅವರು ಗಳಿಸಿದ ಅರ್ಧಶತಕ ಅವರ 30ನೇ ಅರ್ಧಶತಕವಾಗಿತ್ತು. ಇದಕ್ಕೂ ಮುನ್ನ ರಾಹುಲ್ ಮತ್ತು ಡೇವಿಡ್ ವಾರ್ನರ್ 29 ಅರ್ಧಶತಕಗಳೊಂದಿಗೆ ಸಮಬಲ ಹೊಂದಿದ್ದರು.
3 / 5
ಅಲ್ಲದೆ ವಿರಾಟ್ ಕೊಹ್ಲಿ ಕಳೆದ 6 ಸೀಸನ್ಗಳಲ್ಲಿ 28 ಅರ್ಧಶತಕಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಎಬಿ ಡಿವಿಲಿಯರ್ಸ್ 26 ಅರ್ಧಶತಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
4 / 5
ಶಿಖರ್ ಧವನ್ ಕಳೆದ 6 ವರ್ಷಗಳಲ್ಲಿ ಇದುವರೆಗೆ 25 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ ಈ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ. ಇದೀಗ ಕಳೆದ 6 ಐಪಿಎಲ್ ಸೀಸನ್ಗಳ ದಾಖಲೆಯಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರನಾಗಿ ಕೆಎಲ್ ರಾಹುಲ್ ಅಗ್ರಸ್ಥಾನ ಪಡೆದಿದ್ದಾರೆ.
5 / 5
ಅಷ್ಟೇ ಅಲ್ಲದೆ ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ 50 ಅರ್ಧಶತಕಗಳನ್ನು ಬಾರಿಸಿದ ಐದನೇ ಭಾರತೀಯ ಆಟಗಾರ ಎಂಬ ದಾಖಲೆಯನ್ನೂ ಕೂಡ ಕೆಎಲ್ ರಾಹುಲ್ ಬರೆದಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ ಈ ಸಾಧನೆ ಮಾಡಿದ್ದರು.