ಇತ್ತ ಐಪಿಎಲ್ ಫ್ರಾಂಚೈಸಿಗಳು ಟೂರ್ನಿಯ ಸಿದ್ದತೆಯಲ್ಲಿದ್ದರೆ, ಅತ್ತ ಕ್ರಿಕೆಟ್ ಆಸ್ಟ್ರೇಲಿಯಾ ಸರಣಿಗಾಗಿ ತಂಡವನ್ನು ಪಕಟಿಸಿದೆ. ಅದರಂತೆ ಐಪಿಎಲ್ ಆರಂಭದ ವೇಳೆ ಆಸ್ಟ್ರೇಲಿಯಾ ಪಾಕಿಸ್ತಾನ್ ವಿರುದ್ದ ಸರಣಿ ಆಡಲಿದೆ. ಈಗಾಗಲೇ ಈ ಸರಣಿಗಾಗಿ ತಂಡವನ್ನು ಪ್ರಕಟಿಸಲಾಗಿದ್ದು, ಐಪಿಎಲ್ ತಂಡಗಳಲ್ಲಿರುವ 5 ಆಟಗಾರರು ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿರುವ 5 ಆಟಗಾರರು ಏಪ್ರಿಲ್ 11 ರ ಬಳಿಕವಷ್ಟೇ ಐಪಿಎಲ್ ತಂಡಗಳನ್ನು ಕೂಡಿಕೊಳ್ಳಬಹುದು. ಏಕೆಂದರೆ ಪಾಕ್ ವಿರುದ್ದದ ಸರಣಿ ಏಪ್ರಿಲ್ 6 ಕ್ಕೆ ಮುಗಿಯಲಿದೆ. ಈ ಸರಣಿಯ ಬಳಿಕ ಆಟಗಾರರು ಭಾರತಕ್ಕೆ ಆಗಮಿಸಿದರೂ 5 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ. ಹೀಗಾಗಿ ಆಸ್ಟ್ರೇಲಿಯಾ ತಂಡದಲ್ಲಿರುವ 5 ಆಟಗಾರರು ಆರಂಭಿಕ ಹಂತದ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಹಾಗಿದ್ರೆ ಮೊದಲ ಹಂತದ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಆಟಗಾರರು ಯಾರೆಲ್ಲಾ ನೋಡೋಣ...
ಮಾರ್ಕಸ್ ಸ್ಟೊಯಿನಿಸ್ (ಲಕ್ನೋ ಸೂಪರ್ ಜೈಂಟ್ಸ್)
ಸೀನ್ ಅಬೋಟ್ (ಸನ್ ರೈಸರ್ಸ್ ಹೈದರಾಬಾದ್)
ಜೇಸನ್ ಬೆಹ್ರೆನ್ಡ್ರಾರ್ಫ್ ( ಆರ್ಸಿಬಿ)
ನಾಥನ್ ಎಲ್ಲಿಸ್ (ಪಂಜಾಬ್ ಕಿಂಗ್ಸ್)
ಮಿಚೆಲ್ ಮಾರ್ಷ್ (ಡೆಲ್ಲಿ ಕ್ಯಾಪಿಟಲ್ಸ್)
ಇನ್ನು ಡೇವಿಡ್ ವಾರ್ನರ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಝಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ಪಾಕ್ ವಿರುದ್ದದ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆದಾಗ್ಯೂ, ಮಾರ್ಚ್ 26 ರಂದು ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನ ಆರಂಭಿಕ ಹಂತದ ಪಂದ್ಯಗಳಿಗೆ ವಿಶ್ರಾಂತಿ ಪಡೆದಿರುವ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಅನುಮತಿ ನೀಡಲಿದೆಯಾ ಕಾದು ನೋಡಬೇಕಿದೆ.