- Kannada News Photo gallery Cricket photos ICC T20I Rankings: Suryakumar Yadav And Venkatesh Iyer Make Massive Gains
T20I Rankings: ರ್ಯಾಂಕಿಂಗ್ನಲ್ಲಿ ಮೇಲೇರಿದ ಸೂರ್ಯ-ವೆಂಕಿ: ಟಾಪ್ 10 ನಲ್ಲಿ ಇಬ್ಬರು ಭಾರತೀಯರು
ICC T20I Rankings: ಐಸಿಸಿ ನೂತನ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಟಾಪ್ 10 ರ‍್ಯಾಂಕಿಂಗ್ ಪಟ್ಟಿಯಲ್ಲಿರುವ ಆಟಗಾರರು ಯಾರೆಲ್ಲಾ ನೋಡೋಣ..
Updated on: Feb 23, 2022 | 3:52 PM

ಐಸಿಸಿ ನೂತನ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ನಾಯಕ ಬಾಬರ್ ಆಜಂ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇನ್ನು ಟಾಪ್ 10 ನಲ್ಲಿ ಈ ಬಾರಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ.

ಹಾಗೆಯೇ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ಭಾರೀ ಜಿಗಿತ ಕಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ T20I ಸರಣಿಯಲ್ಲಿ ಇಬ್ಬರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಸೂರ್ಯಕುಮಾರ್ ಯಾದವ್ ಶ್ರೇಯಾಂಕದಲ್ಲಿ 35 ಸ್ಥಾನ ಮೇಲೇರಿ 21ನೇ ಸ್ಥಾನಕ್ಕೆ ತಲುಪಿದ್ದಾರೆ. ಮತ್ತೊಂದೆಡೆ, ವೆಂಕಟೇಶ್ 203 ಸ್ಥಾನಗಳನ್ನು ಜಿಗಿದು 115ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಹಾಗಿದ್ರೆ ನೂತನ ಟಾಪ್ 10 ರ‍್ಯಾಂಕಿಂಗ್ ಪಟ್ಟಿಯಲ್ಲಿರುವ ಆಟಗಾರರು ಯಾರೆಲ್ಲಾ ನೋಡೋಣ..

1- ಬಾಬರ್ ಆಜಂ (ಪಾಕಿಸ್ತಾನ್)

2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್)

3- ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ)

4- ಡೇವಿಡ್ ಮಲಾನ್ (ಇಂಗ್ಲೆಂಡ್)

5- ಡೆವೊನ್ ಕಾನ್ವೇ (ನ್ಯೂಜಿಲೆಂಡ್)

6- ಕೆಎಲ್ ರಾಹುಲ್ (ಭಾರತ)

7- ಆರೋನ್ ಫಿಂಚ್ (ಆಸ್ಟ್ರೇಲಿಯಾ)

8- ರಸ್ಸಿ ವಂಡರ್ ಡುಸ್ಸೆನ್ (ದಕ್ಷಿಣ ಆಫ್ರಿಕಾ)

9- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)

10- ವಿರಾಟ್ ಕೊಹ್ಲಿ (ಭಾರತ)



















