
ಐಪಿಎಲ್ 2022 ಮೆಗಾ ಹರಾಜಿಗಾಗಿ ಅಭಿಮಾನಿಗಳು ತುಂಬಾ ಉತ್ಸುಕರಾಗಿ ಕಾಯುತ್ತಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಎಂಟು ತಂಡಗಳಲ್ಲ, ಹತ್ತು ತಂಡಗಳಿವೆ. ಹಾಗಾಗಿ ಮೆಗಾ ಹರಾಜು ರೋಚಕವಾಗುವ ಸಾಧ್ಯತೆ ಇದೆ. ಈ ವರ್ಷ ಫೆಬ್ರವರಿ 12-13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ನಡೆಯಲಿದೆ.

ಐಪಿಎಲ್‌ನಲ್ಲಿ ಆಡುವ ಕ್ರಿಕೆಟಿಗರ ಪ್ರದರ್ಶನವು ಜಾಗತಿಕವಾಗಿ ಪ್ರಸಿದ್ಧವಾಗಿದೆ. ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಆದರೆ ಇದು ಆಟಗಾರರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಐಪಿಎಲ್ ಸ್ಪರ್ಧೆಯಿಂದ ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದ ಕ್ರಿಕೆಟಿಗರು ಅನೇಕರಿದ್ದಾರೆ. ಈ ಕೆಲವು ಆಟಗಾರರ ಬಗ್ಗೆ ತಿಳಿಯೋಣ

ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಪ್ರಯಾಣವು ತುಂಬಾ ಆಸಕ್ತಿದಾಯಕವಾಗಿದೆ. ಅವರ ತಂದೆ ರಿಕ್ಷಾ ಚಾಲಕರಾಗಿದ್ದರು. ಕಠಿಣ ಪರಿಸ್ಥಿತಿಯ ಹೊರತಾಗಿಯೂ, ಅವರು ಮಗನನ್ನು ಯಶಸ್ವಿ ಕ್ರಿಕೆಟಿಗನನ್ನಾಗಿ ಮಾಡಲು ಎಂದಿಗೂ ಹಿಂದೆ ಸರಿಯಲಿಲ್ಲ. ಸಿರಾಜ್ ಕೂಡ ಶ್ರಮಪಟ್ಟಿದ್ದಾರೆ. ಅಂತಿಮವಾಗಿ 2017ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸಿರಾಜ್ ಅವರನ್ನು 2.6 ಕೋಟಿ ರೂ. ಖರೀದಿಸಿತ್ತು. ನಂತರ ಐಪಿಎಲ್ 2022 ರಲ್ಲಿ, ಆರ್‌ಸಿಬಿ ಸಿರಾಜ್ ಅವರನ್ನು 7 ಕೋಟಿ ರೂ.ಗೆ ಉಳಿಸಿಕೊಂಡಿದೆ.

ಭಾರತದ ವೇಗದ ಬೌಲರ್ ಟಿ.ನಟರಾಜನ್ ಕೂಡ ಬಡ ಕುಟುಂಬದಿಂದ ಬಂದವರು. ನನ್ನ ತಂದೆ ಕೂಲಿ ಕೆಲಸ ಮಾಡುತ್ತಿದ್ದರೆ, ನನ್ನ ತಾಯಿ ರಸ್ತೆ ಬದಿಯಲ್ಲಿ ಅಂಗಡಿ ಹಾಕುತ್ತಿದ್ದರು ಎಂದು ನಟರಾಜನ್ ಅವರೆ ಹೇಳಿಕೊಂಡಿದ್ದಾರೆ. 2017 ರಲ್ಲಿ ಪಂಜಾಬ್ ತಂಡವು ನಟರಾಜನ್ ಅವರನ್ನು 3 ಕೋಟಿ ರೂ. ಗೆ ಖರೀದಿಸಿತ್ತು. ಅದರ ನಂತರ ನಟರಾಜನ ಜೀವನವೇ ಬದಲಾಯಿತು. ಅವರು ಭಾರತ ತಂಡದ ಪರವಾಗಿಯೂ ಆಡಿದ್ದಾರೆ.

ಚೇತನ್ ಸಕರಿಯಾ ಅವರ ಕ್ರಿಕೆಟ್ ಪಯಣ ಸುಲಭವಾಗಿರಲಿಲ್ಲ. ಸಕರಿಯಾ ಅವರ ಮನೆಯ ಸ್ಥಿತಿ ಶೋಚನೀಯವಾಗಿತ್ತು. ಅವರ ತಂದೆ ರಿಕ್ಷಾ ಚಾಲಕರಾಗಿದ್ದರು. ಐಪಿಎಲ್ 2021 ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಚೇತನ್ ಸಕಾರಿಯಾ ಅವರನ್ನು 1.2 ಕೋಟಿ ರೂಪಾಯಿಗೆ ಖರೀದಿಸಿತು. ಚೇತನ್ ಸಕಾರಿಯಾ 2021 ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

ಯುವ ಬ್ಯಾಟ್ಸ್‌ಮನ್ ಯಸ್ವಿ ಜೈಸ್ವಾಲ್ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದ ಭದೋಹಿಯಲ್ಲಿ ಜನಿಸಿದ ಅವರು ಯಶಸ್ವಿ ಕ್ರಿಕೆಟಿಗರಾಗಲು 11 ನೇ ವಯಸ್ಸಿನಲ್ಲಿ ಮುಂಬೈಗೆ ಬಂದರು. ವಸತಿ ಇಲ್ಲದ ಕಾರಣ ಟೆಂಟ್ ಹಾಕಿಕೊಂಡು ವಾಸವಾಗಿದ್ದರು. ಅಲ್ಲಿ ವಿದ್ಯುತ್, ಕುಡಿಯುವ ನೀರು ಇರಲಿಲ್ಲ. ಅಭ್ಯಾಸದ ನಂತರ, ತಮ್ಮ ಖರ್ಚುಗಳನ್ನು ಬರಿಸಲು ಅವರು ತಂದೆಯೊಂದಿಗೆ ಆಜಾದ್ ಮೈದಾನದ ಬಳಿ ಪಾನಿಪುರಿ ಸ್ಟಾಲ್ ಹಾಕಿ ವ್ಯಾಪಾರ ಮಾಡಲಾರಂಬಿಸಿದ್ದರು.

ಉಮ್ರಾನ್ ಮಲಿಕ್ ಕಾಶ್ಮೀರದ ಉದಯೋನ್ಮುಖ ವೇಗದ ಬೌಲರ್. ಉಮ್ರಾನ್ ಅವರ ತಂದೆ ಅಬ್ದುಲ್ ಮಲಿಕ್ ಹಣ್ಣು ಮತ್ತು ತರಕಾರಿ ಅಂಗಡಿ ಹೊಂದಿದ್ದಾರೆ. ಮೆಗಾ ಹರಾಜಿನ ಮೊದಲು, ಉಮ್ರಾನ್ ಮಲಿಕ್ ಅವರನ್ನು ಎಸ್‌ಆರ್‌ಹೆಚ್ 4 ಕೋಟಿ ರೂ.ಗೆ ಉಳಿಸಿಕೊಂಡಿದೆ.