IPL Auction 2022: ಈ ಐವರು ಆಲ್ರೌಂಡರ್ಗಳನ್ನು ಖರೀದಿಸಲು ಜಿದ್ದಿಗೆ ಬೀಳಲಿವೆ ಎಲ್ಲಾ ಫ್ರಾಂಚೈಸಿಗಳು
IPL Auction 2022: ಬೆಂಗಳೂರಿನಲ್ಲಿ ಫೆ.12 ಮತ್ತು 13ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಆಲ್ ರೌಂಡರ್ಗಳು ಒಳ್ಳೇಯ ಮೊತ್ತ ಪಡೆಯಬಹುದು. ಎಲ್ಲಾ 10 ತಂಡಗಳು ಖರೀದಿಸಲು ನೋಡುವ ಐದು ಆಲ್ ರೌಂಡರ್‌ಗಳ ಪಟ್ಟಿ ಇಲ್ಲಿದೆ.
Updated on: Feb 10, 2022 | 10:43 PM

ಐಪಿಎಲ್ ಹರಾಜಿನ ಇತಿಹಾಸವನ್ನು ನೋಡಿದರೆ ಚೆಂಡು ಮತ್ತು ಬ್ಯಾಟ್ ಎರಡರಿಂದಲೂ ಕೊಡುಗೆ ನೀಡುವ ಆಟಗಾರರನ್ನು ಖರೀದಿಸಲು ಯಾವಾಗಲೂ ಸ್ಪರ್ಧೆ ಇರುತ್ತದೆ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಆಲ್ ರೌಂಡರ್ ಕ್ರಿಸ್ ಮಾರಿಸ್ ಅವರನ್ನು ದಾಖಲೆಯ 16.25 ಕೋಟಿ ರೂ.ಗೆ ಖರೀದಿಸಿತ್ತು. ಈ ವರ್ಷವೂ ಅಂಥದ್ದೇನಾದರೂ ಆಗಬಹುದು. ಬೆಂಗಳೂರಿನಲ್ಲಿ ಫೆ.12 ಮತ್ತು 13ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಆಲ್ ರೌಂಡರ್ಗಳು ಒಳ್ಳೇಯ ಮೊತ್ತ ಪಡೆಯಬಹುದು. ಎಲ್ಲಾ 10 ತಂಡಗಳು ಖರೀದಿಸಲು ನೋಡುವ ಐದು ಆಲ್ ರೌಂಡರ್‌ಗಳ ಪಟ್ಟಿ ಇಲ್ಲಿದೆ.

ವೆಸ್ಟ್ ಇಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಐಪಿಎಲ್ ಮೆಗಾ ಹರಾಜಿನಲ್ಲಿ ಸಾಕಷ್ಟು ಹಣ ಪಡೆಯಬಹುದು. ಹೋಲ್ಡರ್ ಮೂಲ ಬೆಲೆ ರೂ 1.5 ಕೋಟಿ ಇದೆ. ಕಳೆದ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ 8 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದರು. ಹೋಲ್ಡರ್ ಅವರು ಬ್ಯಾಟ್‌ನಿಂದ ಉತ್ತಮ ಹೊಡೆತಕ್ಕೆ ಹೆಸರುವಾಸಿಯಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, ಟಿ20 ಮಾದರಿಯಲ್ಲಿ ಹೋಲ್ಡರ್ ತನ್ನ ಹಿಟ್‌ಗಳ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಅವರು ಅತ್ಯುತ್ತಮ ಮ್ಯಾಚ್ ಫಿನಿಶರ್ ಕೂಡ.

ಐಪಿಎಲ್ ಹರಾಜಿನಲ್ಲಿ ಹಣ ನೀರಿನಂತೆ ಹರಿಯುವ ಆಲ್‌ರೌಂಡರ್‌ಗಳಲ್ಲಿ ಶಾರ್ದೂಲ್ ಠಾಕೂರ್ ಕೂಡ ಒಬ್ಬರು. ಠಾಕೂರ್ ಮೂಲ ಬೆಲೆ 2 ಕೋಟಿ ರೂ.ಗಳಾಗಿದ್ದು, ಕಳೆದ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಋತುವಿನಲ್ಲಿ ಠಾಕೂರ್ 16 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದರು. ಅದೇ ಸಮಯದಲ್ಲಿ, ಶಾರ್ದೂಲ್ ಠಾಕೂರ್ 7 ಮತ್ತು 8 ನೇ ಸ್ಥಾನದಲ್ಲಿ ಬರುವ ಮೂಲಕ ವೇಗವಾಗಿ ಸ್ಕೋರ್ ಮಾಡುವ ಶಕ್ತಿಯನ್ನು ಹೊಂದಿದ್ದಾರೆ.

ಖರೀದಿಸಲು ಪೈಪೋಟಿ ಎದುರಾಗುವ ಆಲ್‌ರೌಂಡರ್‌ಗಳಲ್ಲಿ ದೀಪಕ್ ಚಹಾರ್ ಅವರ ಹೆಸರೂ ಸೇರಿದೆ. ಚಹರ್ ಪವರ್‌ಪ್ಲೇಯಲ್ಲಿ ಹೊಸ ಚೆಂಡಿನೊಂದಿಗೆ ವಿಕೆಟ್‌ಗಳನ್ನು ಪಡೆಯುವಲ್ಲಿ ಹೆಸರುವಾಸಿಯಾಗಿದ್ದಾರೆ ಮತ್ತು ಇತ್ತೀಚೆಗೆ ತಮ್ಮ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಅವರ ಚುರುಕಿನ ಅರ್ಧಶತಕ ಎಲ್ಲರ ಗಮನ ಸೆಳೆದಿತ್ತು. ಚಹರ್ ಅವರನ್ನು ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಅವರ ಮೂಲ ಬೆಲೆ 2 ಕೋಟಿ ರೂ.

ಐಪಿಎಲ್ 2022 ಮೆಗಾ ಹರಾಜಿನಲ್ಲಿ ವಾಷಿಂಗ್ಟನ್ ಸುಂದರ್ ಕೂಡ ದೊಡ್ಡ ಮೊತ್ತವನ್ನು ಪಡೆಯಬಹುದು. ಸುಂದರ್ ಅವರ ಮೂಲ ಬೆಲೆ ರೂ 1.5 ಕೋಟಿ. ಅವರು ಅತ್ಯುತ್ತಮ ಆಫ್-ಸ್ಪಿನ್ನರ್ ಆಗಿದ್ದು, ಉತ್ತಮವಾಗಿ ಬ್ಯಾಟ್ ಕೂಡ ಮಾಡುತ್ತಾರೆ. ಐದನೇ-ಆರನೇ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಯಾವುದೇ ತಂಡಕ್ಕೆ ಉಪಯುಕ್ತವಾಗಿದೆ.

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ನಮೀಬಿಯಾದ ಆಲ್ ರೌಂಡರ್ ಡೇವಿಡ್ ವೀಸಾ ಕೂಡ ದೊಡ್ಡ ಮೊತ್ತವನ್ನು ಪಡೆಯಬಹುದು. ವೀಸಾ ಮೂಲ ಬೆಲೆ ಕೇವಲ 50 ಲಕ್ಷ ರೂ. ಆಗಿದೆ. ವೀಸಾ ಅವರು ವಿಶ್ವದಾದ್ಯಂತ ಕ್ರಿಕೆಟ್ ಲೀಗ್‌ಗಳಲ್ಲಿ ಆಡುತ್ತಾರೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಅವರು ಚೆಂಡು ಮತ್ತು ಬ್ಯಾಟ್‌ನಲ್ಲಿ ಅದ್ಭುತಗಳನ್ನು ಮಾಡಿದ್ದಾರೆ. ಡೇವಿಡ್ ವೀಸಾ ಅವರು 281 ಟಿ20 ಪಂದ್ಯಗಳ ಅನುಭವ ಹೊಂದಿದ್ದಾರೆ ಮತ್ತು 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಲ್ಲದೆ 200 ಕ್ಕೂ ಹೆಚ್ಚು ಟಿ20 ವಿಕೆಟ್‌ಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.



















