ಐಪಿಎಲ್ 2022 ರ ಮೆಗಾ ಹರಾಜು ಶನಿವಾರ ಹಾಗೂ ಭಾನುವಾರ ನಡೆಯಲಿದೆ. ಆಟಗಾರರ ಈ ದೊಡ್ಡ ಹರಾಜಿಗೂ ಮುನ್ನ ಕೆಎಲ್ ರಾಹುಲ್ 17 ಕೋಟಿ ರೂ. ಮೊತ್ತದೊಂದಿಗೆ, ಲೀಗ್‌ನ ಹೊಸ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ ಸೇರಿಕೊಂಡಿದ್ದಾರೆ ಮತ್ತು ಅವರನ್ನು ನಾಯಕನನ್ನಾಗಿ ಮಾಡಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ರಾಹುಲ್ ಅವರ ಈ ದಾಖಲೆ ಮುರಿಯುತ್ತದೋ ಇಲ್ಲವೋ ಎಂಬುದು ಮೆಗಾ ಹರಾಜಿನ ಬಳಿಕವಷ್ಟೇ ತಿಳಿಯಲಿದೆ. ಆದರೆ, ಅದಕ್ಕೂ ಮುನ್ನ ಹಿಂದಿನ ಐಪಿಎಲ್ ಹರಾಜಿನಿಂದ ಶ್ರೀಮಂತರಾದ ಆಟಗಾರರನ್ನು ಒಮ್ಮೆ ನೋಡಬೇಕಿದೆ.