IPL 2022 Mega Auction: RCB ಹಿಟ್​ ಲೀಸ್ಟ್​ನಲ್ಲಿರುವ ಸ್ಪಿನ್ನರ್​ಗಳು ಇವರೇ..!

| Updated By: ಝಾಹಿರ್ ಯೂಸುಫ್

Updated on: Feb 10, 2022 | 3:32 PM

IPL 2022 Rcb Target Players: ಆರ್​ಸಿಬಿ ತಂಡವು ಕೂಡ ಕೆಲ ಸ್ಟಾರ್​ ಸ್ಪಿನ್ನರ್​ಗಳ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಇದನ್ನು ಪುಷ್ಠೀಕರಿಸುವಂತೆ ಇದೀಗ ಆರ್​ಸಿಬಿ ಕೆಲ ಸ ಸ್ಪಿನ್ನರ್​ಗಳ ಪಟ್ಟಿಯ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

1 / 7
ಐಪಿಎಲ್ ಮೆಗಾ ಹರಾಜಿಗೆ ಇನ್ನು ದಿನಗಳು ಮಾತ್ರ ಉಳಿದಿವೆ. ಈಗಾಗಲೇ ಎಲ್ಲಾ ತಂಡಗಳು ಮೆಗಾ ಹರಾಜಿಗಾಗಿ ಸಿದ್ದತೆಗಳು ಶುರು ಮಾಡಿಕೊಂಡಿದೆ. ಅದರಲ್ಲೂ ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯುವುದರಿಂದ ಅತ್ಯುತ್ತಮ ಸ್ಪಿನ್ನರ್​ಗಳನ್ನು ಖರೀದಿಸಲು ಫ್ರಾಂಚೈಸಿಗಳು ಮುಗಿಬೀಳಲಿವೆ.

2 / 7
ಇತ್ತ ಆರ್​ಸಿಬಿ ತಂಡವು ಕೂಡ ಕೆಲ ಸ್ಟಾರ್​ ಸ್ಪಿನ್ನರ್​ಗಳ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಇದನ್ನು ಪುಷ್ಠೀಕರಿಸುವಂತೆ ಇದೀಗ ಆರ್​ಸಿಬಿ ಕೆಲ ಸ ಸ್ಪಿನ್ನರ್​ಗಳ ಪಟ್ಟಿಯ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ ಕೆಲ ಆಟಗಾರರ ಖರೀದಿಗೆ ಆರ್​ಸಿಬಿ ಭರ್ಜರಿ ಪೈಪೋಟಿ ನಡೆಸಲಿದಂತು ದಿಟ. ಅದರಂತೆ ಆರ್​ಸಿಬಿ ಲೀಸ್ಟ್​ನಲ್ಲಿರುವ ಸ್ಪಿನ್ನರ್​ಗಳಾರು ಎಂದು ನೋಡೋಣ...

3 / 7
ಯುಜುವೇಂದ್ರ ಚಹಲ್: ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದ ಚಹಲ್ ಈ ಬಾರಿ ಮೆಗಾ ಹರಾಜಿನಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿರುವ ಚಹಲ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ. ಅದರಂತೆ ಆರ್​ಸಿಬಿ ಕೂಡ ತನ್ನ ಹಳೆಯ ಆಟಗಾರರನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಲಿದೆ.

4 / 7
ಕುಲ್ದೀಪ್ ಯಾದವ್: ಟೀಮ್ ಇಂಡಿಯಾದ ಮತ್ತೋರ್ವ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಕಳೆದ ಬಾರಿ ಕೆಕೆಆರ್​ ತಂಡದಲ್ಲಿದ್ದ  ಕುಲ್ದೀಪ್ ಅವರ ಖರೀದಿಗೂ ಈ ಬಾರಿ ಆರ್​ಸಿಬಿ ಪೈಪೋಟಿ ನಡೆಸಲಿದೆ.

5 / 7
ಆದಿಲ್ ರಶೀದ್: ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್​ ತಂಡದಲ್ಲಿದ್ದರು. ಈ ಬಾರಿ ಆದಿಲ್ ರಶೀದ್ ಅವರ ಖರೀದಿಗೆ ಕೆಲ ಫ್ರಾಂಚೈಸಿಗಳು ಮುಂದಾಗಲಿದೆ. ಅದರಂತೆ ಆರ್​ಸಿಬಿ ಹಿಟ್​ ಲೀಸ್ಟ್​ನಲ್ಲೂ ಇಂಗ್ಲೆಂಡ್ ಸ್ಪಿನ್ನರ್ ಇದ್ದಾರೆ.

6 / 7
ರಾಹುಲ್ ಚಹರ್: ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ರಾಹುಲ್ ಚಹರ್ ಅವರ ಖರೀದಿಗೂ ಈ ಬಾರಿ ಪೈಪೋಟಿ ಕಂಡು ಬರಲಿದೆ. ಅದರಂತೆ ಚಹರ್ ಅವರಿಗಾಗಿ ಆರ್​ಸಿಬಿ ಕೂಡ ಬಿಡ್ಡಿಂಗ್ ನಡೆಸಲಿದೆ.

7 / 7
ರವಿಚಂದ್ರನ್ ಅಶ್ವಿನ್: ಐಪಿಎಲ್​ನ ಯಶಸ್ವಿ ಸ್ಪಿನ್ನರ್​ಗಳಲ್ಲಿ ಒಬ್ಬರಾಗಿರುವ ರವಿಚಂದ್ರನ್ ಅಶ್ವಿನ್ ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಇದೀಗ ಮೆಗಾ ಹರಾಜಿನಲ್ಲಿರುವ ಅನುಭವಿ ಸ್ಪಿನ್ನರ್​ಗಳಲ್ಲಿ ಅಗ್ರಸ್ಥಾನದಲ್ಲಿರುವ ಅಶ್ವಿನ್ ಅವರ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಲಿದೆ.