IPL 2022 Mega Auction: ಮತ್ತೆ ಬದಲಾದ ಐಪಿಎಲ್ ಮೆಗಾ ಹರಾಜು ದಿನಾಂಕ: ಯಾವಾಗ ಆಟಗಾರರ ಬಿಡ್ಡಿಂಗ್?
TV9 Web | Updated By: ಝಾಹಿರ್ ಯೂಸುಫ್
Updated on:
Dec 12, 2021 | 3:36 PM
IPL 2022 Mega Auction: ಮೆಗಾ ಹರಾಜಿಗೂ ಮುನ್ನ ಹೊಸ ಎರಡು ಫ್ರಾಂಚೈಸಿಗಳು ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು. ಅಂದರೆ ಈಗಾಗಲೇ ಹಳೆಯ ಫ್ರಾಂಚೈಸಿಗಳು ರಿಲೀಸ್ ಮಾಡಿರುವ ಆಟಗಾರರನ್ನು ಸಂಪರ್ಕಿಸಿ ತಮ್ಮ ತಂಡಕ್ಕೆ ಆರಿಸಿಕೊಳ್ಳಬಹುದು.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ದವಾಗಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಹೊಸ ಎರಡು ಫ್ರಾಂಚೈಸಿಗಳು ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇದಾದ ಬಳಿಕ ಬಿಸಿಸಿಐ ಮೆಗಾ ಹರಾಜು ನಡೆಸಲು ನಿರ್ಧರಿಸಿದೆ.
2 / 5
ಆದರೆ ಇದೀಗ ಹೊಸ ಫ್ರಾಂಚೈಸಿಗಳಿಗೆ ನೀಡಲಾದ ವಿಶೇಷ ಆಯ್ಕೆಯ ಗಡುವು ದಿನಾಂಕವನ್ನು ಮುಂದೂಡಲಾಗಿದೆ. ಈ ಹಿಂದೆ ಬಿಸಿಸಿಐ ಹೊಸ ಫ್ರಾಂಚೈಸಿಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಲು ಡಿಸೆಂಬರ್ 25 ರವರೆಗೆ ಗಡುವು ನೀಡಿತ್ತು. ಇದೀಗ ಈ ತಿಂಗಳಾಂತ್ಯದವರೆಗೆ ಸಮಯವಕಾಶ ನೀಡಿದೆ ಎಂದು ವರದಿಯಾಗಿದೆ.
3 / 5
ಅದರಂತೆ ಜನವರಿ ಮೊದಲ ವಾರದಲ್ಲಿ ನಡೆಯಬೇಕಿದ್ದ ಮೆಗಾ ಹರಾಜನ್ನೂ ಕೂಡ ಒಂದು ವಾರ ಮುಂದೂಡಲಾಗಿದ್ದು, ಜನವರಿ 2ನೇ ವಾರದಲ್ಲಿ ಮೆಗಾ ಹರಾಜಿಗಾಗಿ ವೇದಿಕೆ ಸಿದ್ದಪಡಿಸಲು ತೀರ್ಮಾನಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
4 / 5
ಮೆಗಾ ಹರಾಜಿಗೂ ಮುನ್ನ ಹೊಸ ಎರಡು ಫ್ರಾಂಚೈಸಿಗಳು ತಲಾ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು. ಅಂದರೆ ಈಗಾಗಲೇ ಹಳೆಯ ಫ್ರಾಂಚೈಸಿಗಳು ರಿಲೀಸ್ ಮಾಡಿರುವ ಆಟಗಾರರನ್ನು ಸಂಪರ್ಕಿಸಿ ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆದರೆ ಈ ಆಯ್ಕೆಗೆ ಬಿಸಿಸಿಐ ಕೆಲ ಷರತ್ತುಗಳನ್ನು ವಿಧಿಸಿದೆ.
5 / 5
ಅಂದರೆ 33 ಕೋಟಿಯೊಳಗೆ ಮೂರು ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ. ಅದರಂತೆ ಹೊಸ ಫ್ರಾಂಚೈಸಿ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 8 ಕೋಟಿ ವ್ಯಯಿಸಬೇಕಾಗುತ್ತದೆ. ಈ ಮೂಲಕ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಳ್ಳಬಹುದು. ಆ ಬಳಿಕವಷ್ಟೇ ಮೆಗಾ ಹರಾಜು ನಡೆಯಲಿದೆ.