ನಂತರ ಪಿಯೂಷ್ ಚಾವ್ಲಾ ಅವರ ಸರದಿ ಬಂದಿತು, ಅವರು ಗುಜರಾತ್‌ನ ಕಳಪೆ ಬ್ಯಾಟಿಂಗ್ ನಂತರ ತನ್ನ ಹೆಗಲ ಮೇಲೆ ರನ್ ಗಳಿಸುವ ಜವಾಬ್ದಾರಿಯನ್ನು ಹೊರಬೇಕಾಯಿತು. ಕೇವಲ 50 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಗುಜರಾತ್ ತಂಡದ ಪರ ಪಿಯೂಷ್ ಚಾವ್ಲಾ 61 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡ 65 ರನ್ ಗಳಿಸಿದರು. ಆದರೆ, ಅವರ ಇನ್ನಿಂಗ್ಸ್ ಕೂಡ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಹಿಮಾಚಲ ಪರ ರಿಷಿ ಧವನ್ 52 ರನ್ ನೀಡಿ 2 ವಿಕೆಟ್ ಕಬಳಿಸಿದರು. ಗುಜರಾತ್ ತಂಡ ಕೇವಲ 213 ರನ್ ಗಳಿಸಲಷ್ಟೇ ಶಕ್ತವಾಗಿ 97 ರನ್ ಗಳಿಂದ ಸೋಲನುಭವಿಸಿತು.