IPL 2022 Auction: ಮೆಗಾ ಹರಾಜಿನಿಂದ ಹೊರಗುಳಿದಿರುವ 9 ಆಟಗಾರರು ಇವರೇ

| Updated By: ಝಾಹಿರ್ ಯೂಸುಫ್

Updated on: Feb 09, 2022 | 4:40 PM

IPL 2022 mega auction: ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಹರಾಜಿನ ನೇರ ಪ್ರಸಾರ ಬೆಳಿಗ್ಗೆ 11 ಗಂಟೆಯಿಂದ ಸ್ಟಾರ್ ಸ್ಪೋರ್ಟ್ಸ್​ ಚಾನೆಲ್​ನಲ್ಲಿ ಇರಲಿದೆ.

1 / 10
IPL 2022 ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಈ ಬಾರಿ 10 ತಂಡಗಳು ಹರಾಜಿನಲ್ಲಿ ಇರಲಿದ್ದು, ಹೀಗಾಗಿ ಆಟಗಾರರ ಖರೀದಿಗೆ ಭರ್ಜರಿ ಪೈಪೋಟಿ ಕಂಡು ಬರಲಿದೆ. ಇದಾಗ್ಯೂ ಈ ಹಿಂದೆ ಐಪಿಎಲ್​ನಲ್ಲಿ ಕಾಣಿಸಿಕೊಂಡ ಕೆಲ ಸ್ಟಾರ್ ಆಟಗಾರರು ಈ ಬಾರಿಯ ಐಪಿಎಲ್​ ಮೆಗಾ ಹರಾಜಿನಿಂದ ಹೊರಗುಳಿದಿದ್ದಾರೆ. ಆ 9 ಆಟಗಾರರು ಯಾರೆಲ್ಲಾ ನೋಡೋಣ...

2 / 10
6- ಕ್ರಿಸ್ ಗೇಲ್: 2013 ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ದ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.

3 / 10
ಜೋ ರೂಟ್: ಇಂಗ್ಲೆಂಡ್‌ನ ಟೆಸ್ಟ್ ತಂಡದ ನಾಯಕ ಜೋ ರೂಟ್ ಕಳೆದ ವರ್ಷ ಐಪಿಎಲ್‌ನಲ್ಲಿ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಈ ಬಾರಿ ಹೆಸರು ನೀಡಲಿದ್ದೇನೆ ಎಂದು ತಿಳಿಸಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ದ ಆಶಸ್‌ ಟೆಸ್ಟ್ ಸರಣಿ ಸೋಲಿನ ನಂತರ, ರೂಟ್ ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಲು ಬಯಸಿದ್ದಾರೆ. ಹೀಗಾಗಿ ಈ ಬಾರಿ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೀಡಲಿಲ್ಲ.

4 / 10
ಬೆನ್​ ಸ್ಟೋಕ್ಸ್​: ಇಂಗ್ಲೆಂಡ್​ ಟೆಸ್ಟ್ ತಂಡದ ಉಪನಾಯಕ ಸ್ಟೋಕ್ಸ್ ಈ ಬಾರಿಯ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಲ್ಲ. ರೂಟ್‌ನಂತೆ ಸ್ಟೋಕ್ಸ್ ಕೂಡ ಟೆಸ್ಟ್ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಲು ಬಯಸಿದ್ದಾರೆ. ಹೀಗಾಗಿ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

5 / 10
ಮಿಚೆಲ್ ಸ್ಟಾರ್ಕ್​: ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ಐಪಿಎಲ್‌ಗಿಂತ ತಮ್ಮ ರಾಷ್ಟ್ರೀಯ ತಂಡಕ್ಕೆ ಆದ್ಯತೆ ನೀಡಿದ್ದಾರೆ. ಅವರು 22 ವಾರಗಳ ಕಾಲ ಬಯೋ ಬಬಲ್‌ನಲ್ಲಿ ಕಳೆಯಲು ಸಾಧ್ಯವಿಲ್ಲ. ಹೀಗಾಗಿ ಈ ಬಾರಿ ಐಪಿಎಲ್‌ನಲ್ಲಿ ಆಡುವುದಿಲ್ಲ ಎಂದು ತಿಳಿಸಿದ್ದಾರೆ.

6 / 10
ಕೈಲ್ ಜೇಮಿಸನ್: ನ್ಯೂಜಿಲೆಂಡ್ ಬೌಲರ್ ಕೈಲ್ ಜೇಮಿಸನ್ ಕೂಡ ಐಪಿಎಲ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಐಪಿಎಲ್ 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ 9 ಪಂದ್ಯಗಳನ್ನು ಆಡಿರುವ ಜೇಮಿಸನ್ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ರಾಷ್ಟ್ರೀಯ ತಂಡದ ಪ್ರದರ್ಶನದ ಬಗ್ಗೆ ಮತ್ತಷ್ಟು ಗಮನ ಕೇಂದ್ರೀಕರಿಸಲು ಈ ಬಾರಿ ಐಪಿಎಲ್​ನಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ.

7 / 10
ಸ್ಯಾಮ್ ಕರನ್: ಇಂಗ್ಲೆಂಡ್‌ನ ಯುವ ಸ್ಟಾರ್ ಆಟಗಾರ ಸ್ಯಾಮ್ ಕರನ್ ಕೂಡ ಈ ಬಾರಿ ಹರಾಜಿನಲ್ಲಿ ಭಾಗವಹಿಸುವುದಿಲ್ಲ. ಸ್ಯಾಮ್ ಕರನ್ ಅವರಿಗೆ ಬೆನ್ನುನೋವಿನ ಸಮಸ್ಯೆ ಇದ್ದು, ಹೀಗಾಗಿ ಐಪಿಎಲ್​ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

8 / 10
ಕ್ರಿಸ್ ವೋಕ್ಸ್​: ಈ ಬಾರಿಯ ಐಪಿಎಲ್‌ನಲ್ಲಿ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ಕೂಡ ಕಾಣಿಸಿಕೊಳ್ಳುವುದಿಲ್ಲ. ಬಯೋ ಬಬಲ್ ಕಾರಣದಿಂದ ಐಪಿಎಲ್​ನಿಂದ ಹಿಂದೆ ಸರಿಯಲು ಕ್ರಿಸ್ ವೋಕ್ಸ್ ನಿರ್ಧರಿಸಿದ್ದಾರೆ.

9 / 10
ಟಾಮ್ ಕರನ್: ಸ್ಯಾಮ್ ಕರನ್ ಸಹೋದರ ಟಾಮ್ ಕರನ್ ಕೂಡ ಈ ವರ್ಷ ಮೆಗಾ ಹರಾಜಿನಲ್ಲಿ ಭಾಗವಹಿಸುವುದಿಲ್ಲ. ಟಾಮ್ ಕರನ್ ಬೆನ್ನಿನ ಕೆಳಭಾಗದ ಮೂಳೆ ಮುರಿತಕ್ಕೆ ಒಳಗಾಗಿದ್ದು, ಹೀಗಾಗಿ ಈ ಬಾರಿ ಹರಾಜಿಗೆ ಹೆಸರು ನೀಡಿಲ್ಲ.

10 / 10
ಜೈ ರಿಚರ್ಡ್ಸನ್: ಕಳೆದ ಸೀಸನ್​ನಲ್ಲಿ 14 ಕೋಟಿಗೆ ಮಾರಾಟವಾಗಿದ್ದ ಜೈ ರಿಚರ್ಡ್ಸನ್ ಈ ಬಾರಿ ಐಪಿಎಲ್​ಗೆ ಹೆಸರು ನೀಡಿಲ್ಲ. ಆಡಿದ ಚೊಚ್ಚಲ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಜೈ ಈ ಬಾರಿ ಐಪಿಎಲ್​ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.