- Kannada News Photo gallery Cricket photos Ind vs Wi 2nd Odi: Suryakumar Yadav Create New World Record
Suryakumar Yadav: ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೂರ್ಯಕುಮಾರ್ ಯಾದವ್
Ind vs Wi 2nd Odi: ಇಂಗ್ಲೆಂಡ್‌ನ ಜೋ ರೂಟ್, ಪಾಕಿಸ್ತಾನದ ಫಖರ್ ಜಮಾನ್, ನೆದರ್‌ಲ್ಯಾಂಡ್‌ನ ರಿಯಾನ್ ಡಸ್ ಕೇಟ್ ಮತ್ತು ಆಸ್ಟ್ರೇಲಿಯಾದ ಟಾಮ್ ಕೂಪರ್ ತಮ್ಮ ಮೊದಲ ಐದು ಇನಿಂಗ್ಸ್ಗಳಲ್ಲಿ 30+ ರನ್ಗಳಿಸುವ ಮೂಲಕ ದಾಖಲೆ ಬರೆದಿದ್ದರು.
Updated on: Feb 09, 2022 | 5:07 PM

ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ 30 ರನ್ ದಾಟುತ್ತಿದ್ದಂತೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಡಿದ ಮೊದಲ 6 ಇನಿಂಗ್ಸ್ಗಳಲ್ಲಿ 30 ಪ್ಲಸ್ ರನ್ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಸೂರ್ಯಕುಮಾರ್ ತಮ್ಮದಾಗಿಸಿಕೊಂಡರು.

ಇದಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ವಿಂಡೀಸ್ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 34 ರನ್ ಬಾರಿಸಿ ಮಿಂಚಿದ್ದರು. ಇದೀಗ 2ನೇ ಏಕದಿನ ಪಂದ್ಯದಲ್ಲಿ 83 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡಂತೆ 64 ರನ್ ಬಾರಿಸಿದ್ದಾರೆ. ಈ ಮೂಲಕ ಆಡಿದ ಮೊದಲ 6 ಇನಿಂಗ್ಸ್ಗಳಲ್ಲಿ 30+ ಪ್ಲಸ್ ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಶ್ರೀಲಂಕಾ ವಿರುದ್ದದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಇದುವರೆಗೆ 6 ಇನ್ನಿಂಗ್ಸ್‌ಗಳಲ್ಲಿ 31*, 53, 40, 39, 34* ಮತ್ತು 64 ರನ್ ಗಳಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಹಾಗೂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ದಾಖಲೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಇಂಗ್ಲೆಂಡ್‌ನ ಜೋ ರೂಟ್, ಪಾಕಿಸ್ತಾನದ ಫಖರ್ ಜಮಾನ್, ನೆದರ್‌ಲ್ಯಾಂಡ್‌ನ ರಿಯಾನ್ ಡಸ್ ಕೇಟ್ ಮತ್ತು ಆಸ್ಟ್ರೇಲಿಯಾದ ಟಾಮ್ ಕೂಪರ್ ತಮ್ಮ ಮೊದಲ ಐದು ಇನಿಂಗ್ಸ್ಗಳಲ್ಲಿ 30+ ರನ್ಗಳಿಸುವ ಮೂಲಕ ದಾಖಲೆ ಬರೆದಿದ್ದರು. ಇದೀಗ 6 ಇನಿಂಗ್ಸ್ಗಳಲ್ಲಿ 30 ಪ್ಲಸ್ ರನ್ ಬಾರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.



















