IPL 2022 Auction: ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ 17 ವರ್ಷದ ಆಟಗಾರ..!

| Updated By: ಝಾಹಿರ್ ಯೂಸುಫ್

Updated on: Feb 01, 2022 | 8:19 PM

IPL 2022 Mega Auction: ಇಂಗ್ಲೆಂಡ್​ನ 24, ನ್ಯೂಜಿಲೆಂಡ್​ನ 24, ಶ್ರೀಲಂಕಾದ 23 ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಈ ಬಾರಿ ಅಫ್ಘಾನಿಸ್ತಾನದ 17 ಆಟಗಾರರು ಕೂಡ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

1 / 7
 ಐಪಿಎಲ್ ಮೆಗಾ ಹರಾಜಿನ ಸಿದ್ಧತೆ ಶುರುವಾಗಿದೆ. ಇದೀಗ ಹರಾಜಿನಲ್ಲಿ ಭಾಗವಹಿಸಲಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಂತೆ ಐಪಿಎಲ್ ಸೀಸನ್ 15 ಮೆಗಾ ಹರಾಜಿನಲ್ಲಿ ಒಟ್ಟು 590 ಆಟಗಾರರು ಅಂತಿಮ ಕಣದಲ್ಲಿದ್ದಾರೆ. ಇದರಲ್ಲಿ 370 ಭಾರತೀಯ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.

2 / 7
ಹಾಗೆಯೇ  220 ವಿದೇಶಿ ಆಟಗಾರರನ್ನು ಮೆಗಾ ಹರಾಜಿಗೆ ಆಯ್ಕೆ ಮಾಡಲಾಗಿದೆ. ಹೀಗೆ ವಿದೇಶಿ ಆಟಗಾರರ ಪಟ್ಟಿಯಲ್ಲಿ ಅತೀ ಹೆಚ್ಚು ಸ್ಥಾನ ಪಡೆದಿರುವುದು ಆಸ್ಟ್ರೇಲಿಯಾ ಪ್ಲೇಯರ್ಸ್. ಆಸ್ಟ್ರೇಲಿಯಾದ 47 ಆಟಗಾರರು ಈ ಪಟ್ಟಿಯಲ್ಲಿದ್ದರೆ, ವೆಸ್ಟ್ ಇಂಡೀಸ್​ನ 34 ಹಾಗೂ ಸೌತ್ ಆಫ್ರಿಕಾದ 33 ಆಟಗಾರರು ಮೆಗಾ ಹರಾಜು ಪಟ್ಟಿಯಲ್ಲಿದ್ದಾರೆ.

3 / 7
ಇನ್ನು ಇಂಗ್ಲೆಂಡ್​ನ 24, ನ್ಯೂಜಿಲೆಂಡ್​ನ 24, ಶ್ರೀಲಂಕಾದ 23 ಆಟಗಾರರು ಸ್ಥಾನ ಪಡೆದಿದ್ದಾರೆ. ಹಾಗೆಯೇ ಈ ಬಾರಿ ಅಫ್ಘಾನಿಸ್ತಾನದ 17 ಆಟಗಾರರು ಕೂಡ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಮೆಗಾ ಹರಾಜಿನಲ್ಲಿ ಅತ್ಯಂತ ಕಿರಿಯ ಆಟಗಾರನಾಗಿ ಕಾಣಿಸಿಕೊಂಡಿರುವುದು ಅಫ್ಘಾನ್ ಆಟಗಾರ ಎಂಬುದು ವಿಶೇಷ.

4 / 7
 ಅಫ್ಘಾನಿಸ್ತಾನ್ ಅಂಡರ್​ 19 ತಂಡದ ಆಟಗಾರನಾಗಿರುವ ನೂರ್ ಅಹ್ಮದ್ ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 17 ವರ್ಷದ ನೂರ್ ಅಹ್ಮದ್  ಅಂಡರ್ 19 ವಿಶ್ವಕಪ್​ನಲ್ಲಿ ಆಡುತ್ತಿದ್ದು, ಇದೇ ವೇಳೆ ಒಟ್ಟು 6 ವಿಕೆಟ್ ಪಡೆದು ಮಿಂಚಿದ್ದಾರೆ. ಎಡಗೈ ಚೈನಾಮನ್ ಸ್ಪಿನ್ನರ್ ಆಗಿರುವ ನೂರ್ ಇದುವರೆಗೆ 33 ಟಿ20 ಪಂದ್ಯಗಳನ್ನು ಆಡಿದ್ದು 33 ವಿಕೆಟ್ ಕಬಳಿಸಿದ್ದಾರೆ.

5 / 7
ಈಗಾಗಲೇ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡಿರುವ 17 ವರ್ಷದ ನೂರ್ ಅಹ್ಮದ್ ಕಳೆದ ವರ್ಷ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. 30 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ನೂರ್ ಅಹ್ಮದ್​ರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

6 / 7
ಇದೀಗ ಐಪಿಎಲ್​ನಲ್ಲಿ ಮೆಗಾ ಹರಾಜು ನಡೆಯುತ್ತಿದ್ದು, ಹೀಗಾಗಿ ಚೊಚ್ಚಲ ಬಾರಿಗೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ 17 ವರ್ಷದ ಯುವ ಸ್ಪಿನ್ನರ್.

7 / 7
ನೂರ್ ಅಹ್ಮದ್

ನೂರ್ ಅಹ್ಮದ್