IPL 2022: ಐಪಿಎಲ್ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!
TV9 Web | Updated By: ಝಾಹಿರ್ ಯೂಸುಫ್
Updated on:
Mar 20, 2022 | 6:46 PM
IPL 2022: ಇಷ್ಟೆಲ್ಲಾ ಅನುಭವ ಹೊಂದಿದ್ದರೂ, ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರೂ ಇದೀಗ ನೆಟ್ ಬೌಲರ್ ಆಗಿ ಕಾಣಿಸಿಕೊಂಡ ಮೋಹಿತ್ ಶರ್ಮಾ ಅವರನ್ನು ಕಂಡು ಕ್ರಿಕೆಟ್ ಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
1 / 7
ಐಪಿಎಲ್ನಲ್ಲಿ ಮಿಂಚಿ ಮರೆಯಾಗಿರುವ ಅನೇಕ ಆಟಗಾರರಿದ್ದಾರೆ. ಈ ಪಟ್ಟಿಯಲ್ಲಿ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ಮೋಹಿತ್ ಶರ್ಮಾ. ನೀವು ಸಿಎಸ್ಕೆ ತಂಡದ ಅಭಿಮಾನಿಯಾಗಿದ್ದರೆ ಈ ಹೆಸರು ನಿಮಗೆ ಚಿರಪರಿಚಿತ. ಏಕೆಂದರೆ ಮೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಖಾಯಂ ಸದಸ್ಯರಾಗಿ ಗುರುತಿಸಿಕೊಂಡಿದ್ದರು.
2 / 7
ಅದರಲ್ಲೂ 2014 ರಲ್ಲಿ ಸಿಎಸ್ಕೆ ತಂಡ ಪ್ಲೇಆಫ್ ಪ್ರವೇಶಿಸುವಲ್ಲಿ ಪ್ರಮುಖ ಕಾರಣ ಮೋಹಿತ್ ಶರ್ಮಾ. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಮೋಹಿತ್ ಶರ್ಮಾ 16 ಪಂದ್ಯಗಳಿಂದ 23 ವಿಕೆಟ್ ಉರುಳಿಸಿ ಮಿಂಚಿದ್ದರು. ಆ ಸೀಸನ್ನಲ್ಲಿ ಅತೀ ಹೆಚ್ಚು ವಿಕೆಟ್ ಉರುಳಿಸಿದ ದಾಖಲೆ ಬರೆದ ಮೋಹಿತ್ ಶರ್ಮಾ ಪರ್ಪಲ್ ಕ್ಯಾಪ್ ವಿನ್ನರ್ ಕೂಡ ಆಗಿದ್ದರು.
3 / 7
2013 ರಿಂದ 2020 ರವರೆಗೆ ಐಪಿಎಲ್ ಆಡಿದ್ದ ಮೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ 33 ವರ್ಷದ ವೇಗಿಗೆ ಐಪಿಎಲ್ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಚಾನ್ಸ್ ಸಿಕ್ಕಿದೆ, ಆದರೆ ಆಟಗಾರನಾಗಿ ಅಲ್ಲ ಎಂಬುದು ವಿಶೇಷ.
4 / 7
ಹೌದು, ಮೋಹಿತ್ ಶರ್ಮಾ ಐಪಿಎಲ್ ತಂಡದ ಭಾಗವಾಗಿದ್ದಾರೆ. ಅದು ಕೂಡ ನೆಟ್ ಬೌಲರ್ ಆಗಿ ಎಂಬುದೇ ಅಚ್ಚರಿ. ಅಂದರೆ 86 ಐಪಿಎಲ್ ಪಂದ್ಯಗಳಿಂದ 92 ವಿಕೆಟ್ ಪಡೆದಿರುವ ಮೋಹಿತ್ ಶರ್ಮಾ ಗುಜರಾತ್ ಟೈಟನ್ಸ್ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಿಟಿ ತಂಡದ ಆಟಗಾರರ ಅಭ್ಯಾಸಕ್ಕಾಗಿ ಬೌಲಿಂಗ್ ಮಾಡಲಿದ್ದಾರೆ.
5 / 7
ಇನ್ನು ಮೋಹಿತ್ ಶರ್ಮಾ ಟೀಮ್ ಇಂಡಿಯಾ ಪರ ಕೂಡ ಆಡಿದ್ದರು. 26 ಏಕದಿನ ಹಾಗೂ 8 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಮೋಹಿತ್ ಶರ್ಮಾ ಒಟ್ಟು 37 ವಿಕೆಟ್ ಕಬಳಿಸಿದ್ದಾರೆ.
6 / 7
ಇಷ್ಟೆಲ್ಲಾ ಅನುಭವ ಹೊಂದಿದ್ದರೂ, ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರೂ ಇದೀಗ ನೆಟ್ ಬೌಲರ್ ಆಗಿ ಕಾಣಿಸಿಕೊಂಡ ಮೋಹಿತ್ ಶರ್ಮಾ ಅವರನ್ನು ಕಂಡು ಕ್ರಿಕೆಟ್ ಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
7 / 7
ಮೋಹಿತ್ ಶರ್ಮಾ