Updated on: Mar 17, 2022 | 3:03 PM
ಐಪಿಎಲ್ ಆರಂಭಕ್ಕೂ ಮುನ್ನ BCCI ಒಪ್ಪಂದ ಹೊಂದಿರುವ ಆಟಗಾರರು ಫಿಟ್ನೆಸ್ ಟೆಸ್ಟ್ನಲ್ಲಿ ಭಾಗವಹಿಸಬೇಕಿದೆ. ಅದರಲ್ಲೂ ಗಾಯಗೊಂಡಿರುವ ಟೀಮ್ ಇಂಡಿಯಾದ ಆಟಗಾರರು ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾಗುವುದು BCCI ಕಡ್ಡಾಯ ಮಾಡಿದೆ. ಈ ಟೆಸ್ಟ್ನಲ್ಲಿ ಪಾಸಾದವರಿಗೆ ಐಪಿಎಲ್ನಲ್ಲಿ ಅವಕಾಶ ಸಿಗಲಿದೆ. ಈಗಾಗಲೇ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ಯೋ ಯೋ ಟೆಸ್ಟ್ ಪಾಸಾಗಿ ಐಪಿಎಲ್ಗೆ ಅರ್ಹತೆ ಪಡೆದಿದ್ದಾರೆ.
ಈ ಫಿಟ್ನೆಸ್ ಟೆಸ್ಟ್ ಹಲವು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಯೋ ಯೋ ಟೆಸ್ಟ್ ಪಾಸಾಗಲೇಬೇಕು. ಯೋ ಯೋ ಟೆಸ್ಟ್ನಲ್ಲಿ 8.15 ನಿಮಿಷದೊಳಗೆ 2 ಕಿ. ಮೀಟರ್ ಓಡಬೇಕೆಂಬ ನಿಯಮವಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಫೇಲ್ ಎಂದು ಪರಿಗಣಿಸಲಾಗುತ್ತದೆ.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಪೃಥ್ವಿ ಶಾ ಯೋ ಯೋ ಟೆಸ್ಟ್ನಲ್ಲಿ ಫೇಲ್ ಆಗಿದ್ದಾರೆ. ಯೋ ಯೋ ಟೆಸ್ಟ್ನಲ್ಲಿ ಒಟ್ಟು 16.5 ಪಾಯಿಂಟ್ ಗಳಿಸಬೇಕಾಗುತ್ತದೆ. ಆದರೆ ಪೃಥ್ವಿ ಶಾ ಗಳಿಸಿದ್ದು ಕೇವಲ 15 ಪಾಯಿಂಟ್ ಮಾತ್ರ. ಹೀಗಾಗಿ ಪೃಥ್ವಿ ಶಾ ಅವರನ್ನು ಫೇಲ್ ಎಂದು ಪರಿಗಣಿಸಲಾಗಿದೆ.
ಅತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಥಾರ್ ಆಟಗಾರನಾಗಿರುವ ಪೃಥ್ವಿ ಯೋ ಯೋ ಟೆಸ್ಟ್ನಲ್ಲಿ ಫೇಲ್ ಆಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಯೋ ಯೋ ಟೆಸ್ಟ್ನಲ್ಲಿ ಫೇಲ್ ಆದರೆ ಐಪಿಎಲ್ನಲ್ಲಿ ಆಡಲು ಅವಕಾಶ ನೀಡುವುದಿಲ್ಲ. ಅಂದರೆ ಈ ಬಾರಿಯ ಐಪಿಎಲ್ನಿಂದ ಪೃಥ್ವಿ ಶಾ ಹೋರಬೀಳುವ ಸಾಧ್ಯತೆಯಿದೆ.
ಇದಗ್ಯೂ ಬಿಸಿಸಿಐ ಪೃಥ್ವಿ ಶಾಗೆ ಮತ್ತೊಂದು ಅವಕಾಶ ನೀಡಲಿದೆಯಾ ಕಾದು ನೋಡಬೇಕಿದೆ. ಒಟ್ಟಿನಲ್ಲಿ ಯೋ ಯೋ ಟೆಸ್ಟ್ ಕಡ್ಡಾಯಗೊಳಿಸುವ ಮೂಲಕ ಬಿಸಿಸಿಐ ಆಟಗಾರರ ಫಿಟ್ನೆಸ್ ಕಡೆ ಗಮನ ನೀಡಿರುವುದು ಇದೀಗ ಕೆಲ ಆಟಗಾರರ ಚಿಂತೆಯನ್ನು ಹೆಚ್ಚಿಸಿದೆ.
Published On - 2:58 pm, Thu, 17 March 22