Updated on: Mar 16, 2022 | 6:12 PM
ಕೆಲ ದಿನಗಳ ಹಿಂದೆಯಷ್ಟೇ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಟೀಮ್ ಇಂಡಿಯಾ ಪರ ದಾಖಲೆ ಬರೆದಿದ್ದರು. ಇದರೊಂದಿಗೆ ಟೀಮ್ ಇಂಡಿಯಾ ಫಾಸ್ಟೆಸ್ಟ್ ಬ್ಯಾಟ್ಸ್ಮನ್ಗಳ ಪಟ್ಟಿಗೂ ರಿಷಭ್ ಪಂತ್ ಹೆಸರು ಸೇರ್ಪಡೆಯಾಯಿತು.
ಅಂದರೆ ಟೆಸ್ಟ್ನಲ್ಲಿ ರಿಷಭ್ ಪಂತ್ ವೇಗದ ಅರ್ಧಶತಕ ಬಾರಿಸಿದರೆ, ಟಿ20 ಹಾಗೂ ಏಕದಿನ ಕ್ರಿಕೆಟ್ನಲ್ಲಿ ಬೇರೆ ಇಬ್ಬರು ಆಟಗಾರರು ವೇಗವಾಗಿ ಅರ್ಧಶತಕ ಬಾರಿಸಿ ಟೀಮ್ ಇಂಡಿಯಾ ಪರ ದಾಖಲೆ ಬರೆದಿಟ್ಟಿದ್ದಾರೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರರು ಯಾರೆಲ್ಲಾ ನೋಡೋಣ...
ಟೆಸ್ಟ್ ಕ್ರಿಕೆಟ್ನಲ್ಲಿ ರಿಷಭ್ ಪಂತ್: ಬೆಂಗಳೂರಿನಲ್ಲಿ ನಡೆದ ಶ್ರೀಲಂಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು.
ಏಕದಿನ ಕ್ರಿಕೆಟ್ನಲ್ಲಿ ಅಜಿತ್ ಅಗರ್ಕರ್: ಅಗರ್ಕರ್ 2000 ಇಸವಿಯಲ್ಲಿ ಜಿಂಬಾಬ್ವೆ ವಿರುದ್ದ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. 21 ವರ್ಷಗಳ ಕಳೆದರೂ ಈ ದಾಖಲೆಯನ್ನು ಇನ್ನೂ ಯಾರೂ ಕೂಡ ಮುರಿದಿಲ್ಲ ಎಂಬುದು ವಿಶೇಷ.
ಟಿ20 ಕ್ರಿಕೆಟ್ನಲ್ಲಿ ಯುವರಾಜ್ ಸಿಂಗ್: ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ವಿಶೇಷ ಎಂದರೆ ಇದೇ ಅರ್ಧಶತಕದಲ್ಲಿ ಯುವಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು.