Updated on: Mar 16, 2022 | 2:37 PM
ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ತಂಡದ ಟಾಪ್ 10ರೊಳಗೆ ಸ್ಥಾನ ಗಳಿಸಿದ್ದಾರೆ. ಬೆಂಗಳೂರು ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದ ಬುಮ್ರಾ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.
ಮಾರ್ನಸ್ ಲ್ಯಾಬುಸ್ಚಾಗ್ನೆ ಬ್ಯಾಟ್ಸ್‌ಮನ್‌ಗಳಲ್ಲಿ ನಂಬರ್ 1 ಟೆಸ್ಟ್ ಬ್ಯಾಟ್ಸ್‌ಮನ್ ಆಗಿ ಮುಂದುವರೆದಿದ್ದಾರೆ. ರೋಹಿತ್ ಶರ್ಮಾ ಆರನೇ ಸ್ಥಾನದಲ್ಲಿದ್ದು, ಭಾರತ ಪರ ಮೊದಲ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಟಾಪ್ 10 ರಿಂದ ಹೊರಗುಳಿಯಬಹುದು. ಆದರೆ 4 ಸ್ಥಾನ ಕಳೆದುಕೊಂಡಿದ್ದು, ಇತ್ತೀಚಿನ ಶ್ರೇಯಾಂಕದಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ರಿಷಬ್ ಪಂತ್ 10ನೇ ಸ್ಥಾನದಲ್ಲಿದ್ದಾರೆ.
ಭಾರತ ವಿರುದ್ಧದ ಬೆಂಗಳೂರು ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ ನಂ.5 ನೇ ಸ್ಥಾನ ತಲುಪಿದ್ದು, ವಿರಾಟ್ ಕೊಹ್ಲಿ ಬದಲಿಗೆ ದಿಮುತ್ ಸ್ಥಾನ ಪಡೆದಿದ್ದಾರೆ.