IPL 2022: ಎಲ್ಲರೂ ರಿಲೀಸ್: ಹೊಸ ತಂಡ ಕಟ್ಟುವ ಇರಾದೆಯಲ್ಲಿ ಪಂಜಾಬ್ ಕಿಂಗ್ಸ್

| Updated By: ಝಾಹಿರ್ ಯೂಸುಫ್

Updated on: Nov 27, 2021 | 9:20 PM

Punjab Kings: ಕೆಎಲ್ ರಾಹುಲ್ (ನಾಯಕ), ಅರ್ಷದೀಪ್ ಸಿಂಗ್, ದರ್ಶನ್ ನಲ್ಕಂಡೆ, ದೀಪಕ್ ಹೂಡಾ, ಹರ್‌ಪ್ರೀತ್ ಬ್ರಾರ್, ಇಶಾನ್ ಪೊರೆಲ್, ಜಲಜ್ ಸಕ್ಸೇನಾ, ಮನ್‌ದೀಪ್ ಸಿಂಗ್, ಮಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ಪ್ರಭುಸಿಮ್ರಾನ್ ಸಿಂಗ್

1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಮೆಗಾ ಹರಾಜಿಗೆ ಇನ್ನು ತಿಂಗಳು ಮಾತ್ರ ಉಳಿದಿವೆ. ಅದಕ್ಕೂ ಮುನ್ನ 8  ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 30 ರಂದು ಪ್ರಕಟಿಸಬೇಕಿದೆ. ಇಲ್ಲಿ ಹಳೆಯ ಫ್ರಾಂಚೈಸಿಗಳು ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಆದರೆ ಪಂಜಾಬ್ ಕಿಂಗ್ಸ್​ ತಂಡವು ಯಾವುದೇ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ ಎಂದು ವರದಿಯಾಗಿದೆ.

2 / 6
ಅಂದರೆ ಪಂಜಾಬ್ ಕಿಂಗ್ಸ್​ ತಂಡವು ಪ್ರಸ್ತುತ ಇರುವ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಲಿದೆ. ಆ ಬಳಿಕ ಹೊಸ ತಂಡವನ್ನು ಕಟ್ಟಲು ಪ್ಲ್ಯಾನ್ ರೂಪಿಸಿದೆ. ಏಕೆಂದರೆ ಪಂಜಾಬ್ ತಂಡವು 2014 ರ ಬಳಿಕ ಪ್ಲೇಆಫ್ ಪ್ರವೇಶಿಸಿಲ್ಲ. ಹೀಗಾಗಿ ಹೊಸ ತಂಡದೊಂದಿಗೆ ಹೊಸ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

3 / 6
 ಅದರಂತೆ ಮುಂದಿನ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು 90 ಕೋಟಿ ಮೊತ್ತದೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಸ್ಟಾರ್ ಆಟಗಾರರನ್ನು ನೇರವಾಗಿ ಖರೀದಿಸಲು ಬಯಸಿದೆ. ಇನ್ನು ಕಳೆದ ಸೀಸನ್​ನಲ್ಲಿ ನಾಯಕ ಕೆಎಲ್ ರಾಹುಲ್ ಅವರನ್ನು ಹೊರತುಪಡಿಸಿ ಪಂಜಾಬ್ ಕಿಂಗ್ಸ್ ತಂಡದ ಯಾವೊಬ್ಬ ಆಟಗಾರ ಕೂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ.

4 / 6
ಹೀಗಾಗಿ ಪಂಜಾಬ್ ಕಿಂಗ್ಸ್​ ಕೆಎಲ್ ರಾಹುಲ್ ಅವರನ್ನು ಉಳಿಸಕೊಳ್ಳಲು ಮುಂದಾಗಿತ್ತು. ಆದರೆ ಪಂಜಾಬ್ ತಂಡದಲ್ಲೇ ಕೆಎಲ್ ರಾಹುಲ್  ಮುಂದುವರೆಯಲು ಇಚ್ಛಿಸಿಲ್ಲ. ಅದರಂತೆ ರಾಹುಲ್ ಮೆಗಾ ಹರಾಜಿಗೆ ಹೆಸರು ನೀಡಲಿದ್ದಾರೆ. ಕೆಲ ಮೂಲಗಳ ಮಾಹಿತಿ ಪ್ರಕಾರ ಕೆಎಲ್ ರಾಹುಲ್ ಹೊಸ ಫ್ರಾಂಚೈಸಿ ಲಕ್ನೋ ಪರ ಆಡಲಿದ್ದಾರೆ ಎಂದು ತಿಳಿದು ಬಂದಿದೆ.

5 / 6
ಇನ್ನೊಂದೆಡೆ ಪಂಜಾಬ್ ಕಿಂಗ್ಸ್​ ತಂಡದಲ್ಲಿ ಅನ್​ಕ್ಯಾಪ್ಡ್​ ಪ್ಲೇಯರ್ಸ್​ ಆಗಿ ಅರ್ಷದೀಪ್ ಸಿಂಗ್ ಹಾಗೂ ರವಿ ಬಿಷ್ಣೋಯ್ ಇದ್ದು, ಇಬ್ಬರು ಉತ್ತಮ ಪ್ರದರ್ಶನ ನೀಡಿದ್ದಾರೆ. ಇಬ್ಬರಲ್ಲಿ ಒಬ್ಬರನ್ನು ಕೇವಲ 4 ಕೋಟಿಗೆ ತಂಡದಲ್ಲೇ ಉಳಿಸಿಕೊಳ್ಳುವ ಆಯ್ಕೆ ಕೂಡ ಇದೆ. ಹೀಗಾಗಿ ಅಂತಿಮ ಕ್ಷಣದಲ್ಲಿ ಪಂಜಾಬ್ ಕಿಂಗ್ಸ್​ ನಿರ್ಧಾರ ಬದಲಿಸಿದರೂ ಅಚ್ಚರಿಪಡಬೇಕಿಲ್ಲ.

6 / 6
ಕಳೆದ ಬಾರಿಯ ಪಂಜಾಬ್ ಕಿಂಗ್ಸ್​ ತಂಡ ಹೀಗಿದೆ: ಕೆಎಲ್ ರಾಹುಲ್ (ನಾಯಕ), ಅರ್ಷದೀಪ್ ಸಿಂಗ್, ದರ್ಶನ್ ನಲ್ಕಂಡೆ, ದೀಪಕ್ ಹೂಡಾ, ಹರ್‌ಪ್ರೀತ್ ಬ್ರಾರ್, ಇಶಾನ್ ಪೊರೆಲ್, ಜಲಜ್ ಸಕ್ಸೇನಾ, ಮನ್‌ದೀಪ್ ಸಿಂಗ್, ಮಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ಪ್ರಭುಸಿಮ್ರಾನ್ ಸಿಂಗ್, ರವಿ ಬಿಷ್ಣೋಯ್, ಸರ್ಫರಾಜ್ ಖಾನ್, ಸೌರಭ್ ಕುಮಾರ್, ಶಾರುಖ್ ಖಾನ್ , ಉತ್ಕರ್ಷ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಫ್ಯಾಬಿಯನ್ ಅಲೆನ್, ನಾಥನ್ ಎಲ್ಲಿಸ್, ಮೊಯಿಸಸ್ ಹೆನ್ರಿಕ್ಸ್, ಐಡೆನ್ ಮಾರ್ಕ್ರಾಮ್, ಆದಿಲ್ ರಶೀದ್ ಮತ್ತು ಕ್ರಿಸ್ ಜೋರ್ಡಾನ್.