Updated on: May 26, 2022 | 5:50 PM
IPL 2022: ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಅಬ್ಬರಿಸಿ ಬೊಬ್ಬರಿಯುವ ಮೂಲಕ ರಜತ್ ಪಾಟಿದಾರ್ ಶತಕ ಸಿಡಿಸಿ ಮಿಂಚಿದ್ದರು. ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ್ದ ಪಾಟಿದಾರ್ ಆರ್ಸಿಬಿ ತಂಡದ ಮೊತ್ತ 200 ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂತಿಮವಾಗಿ 112 ರನ್ಗಳಿಸಿ ಅಜೇಯರಾಗಿ ಉಳಿದರು. ರಜತ್ ಪಾಟಿದಾರ್ ಅವರ ಈ ಭರ್ಜರಿ ಬ್ಯಾಟಿಂಗ್ನಿಂದಾಗಿ ಲಕ್ನೋ ವಿರುದ್ದ ಆರ್ಸಿಬಿ 14 ರನ್ಗಳಿಂದ ಜಯ ಸಾಧಿಸಿತ್ತು.
ವಿಶೇಷ ಎಂದರೆ ರಜತ್ ಪಾಟಿದಾರ್ ಅವರ ಈ ಭರ್ಜರಿ ಶತಕದೊಂದಿಗೆ ಆರ್ಸಿಬಿ ತಂಡ ಕೂಡ ದಾಖಲೆಯೊಂದನ್ನು ಬರೆದಿದೆ. ಹೌದು, ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ತಂಡ ಎಂಬ ದಾಖಲೆ ಇದೀಗ ಆರ್ಸಿಬಿ ಪಾಲಾಗಿದೆ. ಅಂದರೆ 15 ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಆಟಗಾರರು ಬಾರಿಸಿದಷ್ಟು ಶತಕ ಯಾವುದೇ ತಂಡ ಬಾರಿಸಿಲ್ಲ. ಹಾಗಿದ್ರೆ ಯಾವ ತಂಡದ ಆಟಗಾರರು ಎಷ್ಟು ಶತಕಗಳನ್ನು ಬಾರಿಸಿದ್ದಾರೆ ನೋಡೋಣ...
ರಾಯಲ್ ಚಾಲೆಂಜರ್ಸ್ ಬೆಂಗಳೂರು: 15 ಶತಕಗಳು
ಪಂಜಾಬ್ ಕಿಂಗ್ಸ್: 13 ಶತಕಗಳು
ರಾಜಸ್ಥಾನ್ ರಾಯಲ್ಸ್: 12 ಶತಕಗಳು
ಡೆಲ್ಲಿ ಕ್ಯಾಪಿಟಲ್ಸ್: 10 ಶತಕಗಳು
ಚೆನ್ನೈ ಸೂಪರ್ ಕಿಂಗ್ಸ್: 9 ಶತಕಗಳು
ಮುಂಬೈ ಇಂಡಿಯನ್ಸ್: 4 ಶತಕಗಳು
ಸನ್ರೈಸರ್ಸ್ ಹೈದರಾಬಾದ್: 4 ಶತಕಗಳು
ಲಕ್ನೋ ಸೂಪರ್ ಜೈಂಟ್ಸ್- 3 ಶತಕ
ಕೊಲ್ಕತ್ತಾ ನೈಟ್ ರೈಡರ್ಸ್: 1 ಶತಕ
ಗುಜರಾತ್ ಟೈಟಾನ್ಸ್- 0