
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸೃಷ್ಟಿಸಿರುವಷ್ಟು ಬೇಡಿಕೆ ಅಂತರರಾಷ್ಟ್ರೀಯ ಪಂದ್ಯಗಳಿಗೂ ಇಲ್ಲ ಎಂದೇ ಹೇಳಬಹುದು. ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ 2022 ಟೂರ್ನಿ ದಾಖಲೆ ಎಂಬಂತೆ ಬರೋಬ್ಬರಿ 120ಕ್ಕೂ ಅಧಿಕ ದೇಶಗಳಲ್ಲಿ ನೇರಪ್ರಸಾರ ಕಾರಣಲಿದೆ. 24 ಡಿಸ್ನಿ ಸ್ಟಾರ್ ನೆಟ್ ವರ್ಕ್ ನಲ್ಲಿ ಲೈವ್ ಹೋಗಲಿದೆ.

ಐಪಿಎಲ್ ಅಧಿಕೃತ ಪ್ರಸಾರದ ಹಕ್ಕು ಪಡೆದುಕೊಂಡಿದ್ದು, ಸ್ಟಾರ್ ನೆಟ್ವರ್ಕ್ ವಿವಿಧ ವಾಹಿನಿಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಸ್ಟಾರ್ ನೆಟ್ವರ್ಕ್ ಹಾಗೂ ಡಿಸ್ನಿ ಹಾಟ್ಸ್ಟಾರ್ನಲ್ಲಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ ಕಾಮೆಂಟರಿ, ವಿಶ್ಲೇಷಣೆ ಪಡೆದುಕೊಳ್ಳಬಹುದು. ಐಪಿಎಲ್ ಕಾಮೆಂಟ್ರಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಅಲ್ಲದೆ ಮರಾಠಿ ಭಾಷೆಗಳಲ್ಲಿ ಲಭ್ಯವಿರಲಿದೆ.



