Updated on: Dec 26, 2022 | 10:03 PM
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 405 ಆಟಗಾರರು ಕಾಣಿಸಿಕೊಂಡಿದ್ದರು. ಆದರೆ ಈ ಆಟಗಾರರಲ್ಲಿ ಅವಕಾಶ ಸಿಕ್ಕಿದ್ದು ಕೇವಲ 80 ಆಟಗಾರರಿಗೆ ಮಾತ್ರ. ಅಂದರೆ ಈ ಬಾರಿ ಬರೋಬ್ಬರಿ 325 ಆಟಗಾರರು ಅವಕಾಶ ವಂಚಿತರಾಗಿದ್ದಾರೆ. ಇದಾಗ್ಯೂ ಕೆಲ ಯುವ ಆಟಗಾರರಿಗೆ ಅದೃಷ್ಟ ಖುಲಾಯಿಸಿದೆ.
ಅದರಲ್ಲೂ ಕಳೆದ ಸೀಸನ್ನಲ್ಲಿ ನೆಟ್ ಬೌಲರ್ಗಳಾಗಿ ಕಾಣಿಸಿಕೊಂಡಿದ್ದ ಕೆಲ ಆಟಗಾರರು ಈ ಬಾರಿ ಕೋಟಿ ಬೆಲೆಗೆ ಹರಾಜಾಗಿರುವುದು ವಿಶೇಷ. ಹಾಗಿದ್ರೆ ಐಪಿಎಲ್ 2022 ರಲ್ಲಿ ನೆಟ್ ಬೌಲರ್ ಈ ಬಾರಿ ಅದೃಷ್ಟ ಖುಲಾಯಿಸಿಕೊಂಡ ಆಟಗಾರರು ಯಾರೆಲ್ಲಾ ಎಂದು ನೋಡೋಣ...
1- ಜೋಶ್ವ ಲಿಟಲ್: ಐರ್ಲೆಂಡ್ ತಂಡದ ಯುವ ಎಡಗೈ ವೇಗಿ ಜೋಶ್ವ ಲಿಟಲ್ ಐಪಿಎಲ್ ಸೀಸನ್ 15 ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೆಟ್ ಬೌಲರ್ ಆಗಿದ್ದರು. ಈ ಬಾರಿ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡ ಯುವ ವೇಗಿಯನ್ನು ಗುಜರಾತ್ ಟೈಟಾನ್ಸ್ ತಂಡವು ಬರೋಬ್ಬರಿ 4.40 ಕೋಟಿಗೆ ಖರೀದಿಸಿರುವುದು ವಿಶೇಷ.
2- ಕುಲ್ವಂತ್ ಖೆಜ್ರೋಲಿಯಾ: ಈ ಹಿಂದೆ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಬಳಗದಲ್ಲಿ ಕಾಣಿಸಿಕೊಂಡಿದ್ದ ಕುಲ್ವಂತ್ ಖೆಜ್ರೋಲಿಯಾ ಅವರನ್ನು ಈ ಬಾರಿ ಕೆಕೆಆರ್ ಫ್ರಾಂಚೈಸಿಯು 20 ಲಕ್ಷ ರೂ.ಗೆ ಖರೀದಿಸಿದೆ.
3- ಮೋಹಿತ್ ಶರ್ಮಾ: ಟೀಮ್ ಇಂಡಿಯಾ ವೇಗಿ ಮೋಹಿತ್ ಶರ್ಮಾ ಅವರನ್ನು ಕಳೆದ ಸೀಸನ್ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ ಅವರು ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ವಿಶೇಷ ಎಂದರೆ ಈ ಬಾರಿ ಮೋಹಿತ್ ಶರ್ಮಾ ಅವರನ್ನು ಗುಜರಾತ್ ಟೈಟಾನ್ಸ್ ತಂಡವೇ 50 ಲಕ್ಷ ರೂ. ನೀಡಿ ಖರೀದಿಸಿದೆ.
4- ಮುಖೇಶ್ ಕುಮಾರ್: ಐಪಿಎಲ್ 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೆಟ್ ಬೌಲರ್ ಆಗಿದ್ದ ಮುಖೇಶ್ ಕುಮಾರ್ ಅವರಿಗೆ ಈ ಬಾರಿ ಅದೃಷ್ಟ ಖುಲಾಯಿಸಿದೆ. ಬರೋಬ್ಬರಿ 5.75 ಕೋಟಿ ರೂ. ನೀಡಿ ಮುಖೇಶ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯೇ ಖರೀದಿಸಿರುವುದು ವಿಶೇಷ. (ಚಿತ್ರದಲ್ಲಿ ಬಲದಲ್ಲಿರುವುದು ಮುಖೇಶ್ ಕುಮಾರ್)
5- ನಿಶಾಂತ್ ಸಿಂಧು: ಕಳೆದ ಸೀಸನ್ ಐಪಿಎಲ್ನಲ್ಲಿ ಸಿಎಸ್ಕೆ ತಂಡದ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ನಿಶಾಂತ್ ಸಿಂಧು ಅವರಿಗೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೇ ಮಣೆಹಾಕಿದೆ. 60 ಲಕ್ಷ ರೂ. ನೀಡುವ ಮೂಲಕ ಯುವ ಆಟಗಾರನ್ನು ಸಿಎಸ್ಕೆ ತಂಡ ಖರೀದಿಸಿದೆ.