IPL 2023: ಈ ಸೀಸನ್​​ನಲ್ಲಿ 200 ಕ್ಕೂ ಅಧಿಕ ರನ್ ಬಾರಿಸಿಯೂ ಸೋತ 5 ತಂಡಗಳಿವು

Updated on: May 04, 2023 | 6:42 PM

IPL 2023: 16ನೇ ಆವೃತ್ತಿಯ ಐಪಿಎಲ್​​ನಲ್ಲಿ ಬರೋಬ್ಬರಿ ಐದು ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿದ ನಂತರವೂ ದ್ವಿಶತಕ ಸಿಡಿಸಿದ ತಂಡ ಸೋಲೊಪ್ಪಿಕೊಂಡಿದೆ.

1 / 6
16ನೇ ಆವೃತ್ತಿಯ ಐಪಿಎಲ್​​ನಲ್ಲಿ ಬರೋಬ್ಬರಿ ಐದು ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿದ ನಂತರವೂ ದ್ವಿಶತಕ ಸಿಡಿಸಿದ ತಂಡ ಸೋಲೊಪ್ಪಿಕೊಂಡಿದೆ. ತಂಡವೊಂದು 200ಕ್ಕೂ ಹೆಚ್ಚು ರನ್ ಗಳಿಸಿ ಸೋಲನುಭವಿಸಿರುವುದು ಒಂದು ಸೀಸನ್​​ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹಿಂದೆಂದೂ ಸಂಭವಿಸಿಲ್ಲ.

16ನೇ ಆವೃತ್ತಿಯ ಐಪಿಎಲ್​​ನಲ್ಲಿ ಬರೋಬ್ಬರಿ ಐದು ಬಾರಿ 200 ಕ್ಕೂ ಹೆಚ್ಚು ರನ್ ಬಾರಿಸಿದ ನಂತರವೂ ದ್ವಿಶತಕ ಸಿಡಿಸಿದ ತಂಡ ಸೋಲೊಪ್ಪಿಕೊಂಡಿದೆ. ತಂಡವೊಂದು 200ಕ್ಕೂ ಹೆಚ್ಚು ರನ್ ಗಳಿಸಿ ಸೋಲನುಭವಿಸಿರುವುದು ಒಂದು ಸೀಸನ್​​ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಹಿಂದೆಂದೂ ಸಂಭವಿಸಿಲ್ಲ.

2 / 6

ಈ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಬಾರಿಸಿದ್ದರೂ 5 ತಂಡಗಳು ಸೋತಿವೆ. ಇತ್ತೀಚೆಗೆ ಮುಂಬೈ ವಿರುದ್ಧದ ಪಂದ್ಯದಲ್ಲಿ 214 ರನ್ ಟಾರ್ಗೆಟ್ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡ ಹೀನಾಯ ಸೋಲನುಭವಿಸಿತ್ತು. ಮುಂಬೈ ಇಂಡಿಯನ್ಸ್ ಈ ಗುರಿಯನ್ನು 7 ಎಸೆತಗಳು ಬಾಕಿ ಇರುವಂತೆಯೇ ಸಾಧಿಸಿತು.

3 / 6

ಈ ತಂಡಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಕೂಡ ಇದೇ ಮುಂಬೈ ಇಂಡಿಯನ್ಸ್ ವಿರುದ್ಧ 212 ರನ್​ಗಳ ಗುರಿ ನೀಡಿತ್ತು. ಆದರೂ ಕೂಡ ಆ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ಸೋಲಬೇಕಾಯಿತು.

4 / 6

ಇದೇ ಐಪಿಎಲ್​​ನಲ್ಲಿ ಏಪ್ರಿಲ್ 10 ರಂದು ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಆರ್​ಸಿಬಿ, ಲಕ್ನೋ ವಿರುದ್ಧ 212 ರನ್​ಗಳ ಗುರಿ ನಿಗಧಿ ಮಾಡಿತ್ತು. ಈ ಗುರಿಯನ್ನು ಲಕ್ನೋ ಕೊನೆಯ ಎಸೆತದಲ್ಲಿ ಮುಟ್ಟಿತ್ತು.

5 / 6

ಏಪ್ರಿಲ್ 9 ರಂದು ಗುಜರಾತ್ ಟೈಟಾನ್ಸ್ ತಂಡ ಕೆಕೆಆರ್ ವಿರುದ್ಧ 204 ರನ್ ಬಾರಿಸಿತ್ತಾದರೂ ಸೋಲನುಭವಿಸಿತ್ತು.

6 / 6

ಹಾಗೆಯೇ ಏಪ್ರಿಲ್ 30 ರಂದು 200 ರನ್ ಗಳಿಸಿದ್ದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ವಿರುದ್ಧ ಸೋಲೊಪ್ಪಿಕೊಂಡಿತ್ತು.

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us