IPL 2023: ಹೇಗಿರಲಿದೆ ಐಪಿಎಲ್ ಮಿನಿ ಹರಾಜು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
TV9 Web | Updated By: ಝಾಹಿರ್ ಯೂಸುಫ್
Updated on:
Dec 22, 2022 | 7:45 PM
IPL 2023 Auction: ಕಳೆದ ಸೀಸನ್ನಲ್ಲಿ ಆರ್ಸಿಬಿ ತಂಡವು ತನ್ನೆಲ್ಲಾ ಹರಾಜು ಮೊತ್ತ ವ್ಯಯಿಸಿ ಕೇವಲ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್ಸಿಬಿ ತಂಡದಲ್ಲಿ ಮೂವರು ಆಟಗಾರರು ಅವಕಾಶ ವಂಚಿತರಾಗಿದ್ದರು.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿನ್ನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 405 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಆದರೆ ಈ ಆಟಗಾರರಲ್ಲಿ ಅವಕಾಶ ಸಿಗುವುದು ಕೇವಲ 87 ಪ್ಲೇಯರ್ಸ್ಗೆ ಮಾತ್ರ.
2 / 7
ಅಂದರೆ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಮಾತ್ರ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ- RCB ತಂಡವು ಈ ಬಾರಿ 19 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಉಳಿದಿರುವುದು ಕೇವಲ 6 ಸ್ಥಾನಗಳು ಮಾತ್ರ. ಹೀಗಾಗಿ RCB ತಂಡಕ್ಕೆ 6 ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಲಿದೆ.
3 / 7
ಇಲ್ಲಿ ಪ್ರತಿ ತಂಡಗಳಲ್ಲೂ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್ ನಿಯಮದ ಪ್ರಕಾರ 1 ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಒಂದು ವೇಳೆ ಕೆಲ ತಂಡಗಳು ತನ್ನೆಲ್ಲಾ ಹರಾಜು ಮೊತ್ತವನ್ನು ವ್ಯಯಿಸಿ ಒಟ್ಟು 22 ಅಥವಾ 23 ಆಟಗಾರರನ್ನು ಮಾತ್ರ ಖರೀದಿಸಿದರೆ, 77 ಆಟಗಾರರಿಗೆ ಅವಕಾಶ ಸಿಗುವುದು ಕೂಡ ಅನುಮಾನ. ಉದಾಹರಣೆಗೆ...
4 / 7
ಉದಾಹರಣೆಗೆ 2021 ರ ಸೀಸನ್ ಹರಾಜಿನಲ್ಲಿ ಆರ್ಸಿಬಿ ತಂಡವು ತನ್ನೆಲ್ಲಾ ಮೊತ್ತ ವ್ಯಯಿಸಿ ಕೇವಲ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್ಸಿಬಿ ತಂಡದಲ್ಲಿ ಮೂವರು ಆಟಗಾರರು ಅವಕಾಶ ವಂಚಿತರಾಗಿದ್ದರು. ಅಂದರೆ ಇಲ್ಲಿ ಒಂದು ತಂಡದಲ್ಲಿ 18 ಕ್ಕಿಂತ ಕಡಿಮೆ ಆಟಗಾರರನ್ನು ಹೊಂದುವಂತಿಲ್ಲ. ಹಾಗೆಯೇ 25 ಆಟಗಾರರನ್ನು ಖರೀದಿಸುವುದು ಕೂಡ ಕಡ್ಡಾಯವಲ್ಲ.
5 / 7
ಇನ್ನು ಈ ಬಾರಿ ಹರಾಜಿಗಾಗಿ ಒಟ್ಟು 19 ಸೆಟ್ಗಳನ್ನು ರೂಪಿಸಲಾಗಿದೆ. ಇದರಲ್ಲಿ ಮೊದಲ ಸುತ್ತಿನಲ್ಲಿ 5 ಸೆಟ್ಗಳ ಆಟಗಾರರಿಗಾಗಿ ಹರಾಜು ನಡೆಯಲಿದೆ. ಅಂದರೆ ಸ್ಟಾರ್ ಬ್ಯಾಟ್ಸ್ಮನ್, ಸ್ಟಾರ್ ಆಲ್ರೌಂಡರ್ಸ್, ಸ್ಟಾರ್ ಬೌಲರ್ಸ್ ಹಾಗೂ ವಿಕೆಟ್ ಕೀಪರ್ಗಳನ್ನು ಒಳಗೊಂಡಂತೆ ಐದು ಸೆಟ್ಗಳನ್ನಾಗಿ ವಿಂಗಡಿಸಲಾಗಿದೆ. ಈ ಆಟಗಾರರ ಹರಾಜು ಮುಗಿದ ಬಳಿಕವಷ್ಟೇ ಉಳಿದ ಪ್ಲೇಯರ್ಸ್ ಬಿಡ್ಡಿಂಗ್ ನಡೆಯಲಿದೆ.
6 / 7
ಈ ಬಾರಿಯ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರುವ 333 ಆಟಗಾರರಲ್ಲಿ 214 ಭಾರತೀಯ ಆಟಗಾರರಿದ್ದರೆ, 119 ವಿದೇಶಿ ಆಟಗಾರರಿದ್ದಾರೆ. ಆದರೆ ಖಾಲಿ ಇರುವ ಸ್ಲಾಟ್ಗಳು ಕೇವಲ 77 ಮಾತ್ರ. ಹೀಗಾಗಿ 256 ಆಟಗಾರರು ಅವಕಾಶ ವಂಚಿತರಾಗಲಿರುವುದು ಖಚಿತ ಎನ್ನಬಹುದು.
7 / 7
ಅಂದಹಾಗೆ ಐಪಿಎಲ್ ಸೀಸನ್ 17 ಮಿನಿ ಹರಾಜು ಮಂಗಳವಾರ (ಡಿಸೆಂಬರ್ 19) ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಜಿಯೋ ಸಿನೆಮಾ ಆ್ಯಪ್ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.
Published On - 7:24 pm, Thu, 22 December 22