ಐಪಿಎಲ್ ಸೀಸನ್ 16 ಮಿನಿ ಹರಾಜಿನಲ್ಲಿ ಆರ್ಸಿಬಿ ತಂಡವು ಕರ್ನಾಟಕದ ಯುವ ಆಟಗಾರ ಮನೋಜ್ ಭಾಂಡಗೆಯನ್ನು ಖರೀದಿಸಿದೆ. 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕ ಆಟಗಾರನನ್ನು ಬೇಸ್ ಪ್ರೈಸ್ನಲ್ಲಿ ಆರ್ಸಿಬಿ ತನ್ನದಾಗಿಸಿಕೊಂಡಿತು.
ಇದಕ್ಕೂ ಮುನ್ನ ಆರ್ಸಿಬಿ ತಂಡದಲ್ಲಿದ್ದ ಇಬ್ಬರು ಕನ್ನಡಿಗರಾದ ಅನೀಶ್ವರ್ ಗೌತಮ್ ಹಾಗೂ ಲವ್ನೀತ್ ಸಿಸೋಡಿಯಾರನ್ನು ಹರಾಜಿಗೂ ಮುನ್ನ ರಿಲೀಸ್ ಮಾಡಿತ್ತು. ಅಲ್ಲದೆ ಆರ್ಸಿಬಿ ಉಳಿಸಿಕೊಂಡಿದ್ದ 18 ಆಟಗಾರರಲ್ಲಿ ಕನ್ನಡಿಗರಿಗೆ ಸ್ಥಾನ ನೀಡಿರಲಿಲ್ಲ.
ಇದೀಗ ಕರ್ನಾಟಕದ ಎಡಗೈ ಬ್ಯಾಟರ್ ಮನೋಜ್ ಭಾಂಡಗೆಯನ್ನು ಖರೀದಿಸುವ ಮೂಲಕ ಆರ್ಸಿಬಿ ಸ್ಥಳೀಯ ಆಟಗಾರನಿಗೆ ಮಣೆ ಹಾಕಿದೆ.
ಎಡಗೈ ಬ್ಯಾಟ್ಸ್ಮನ್ ಹಾಗೂ ಬಲಗೈ ಮೀಡಿಯಂ ಫಾಸ್ಟ್ ಬೌಲರ್ ಆಗಿರುವ ಮನೋಜ್ ಭಾಂಡಗೆ 2019ರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಮೂಲಕ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
24 ವರ್ಷದ ಮನೋಜ್ ಭಾಂಡಗೆ ಇದುವರೆಗೆ 16 ಟಿ20 ಪಂದ್ಯಗಳನ್ನು ಆಡಿದ್ದು ಈ ವೇಳೆ 7 ಇನಿಂಗ್ಸ್ನಲ್ಲಿ 116 ರನ್ ಕಲೆಹಾಕಿದ್ದಾರೆ. ಹಾಗೆಯೇ 8 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.
ಸದ್ಯ ಮನೋಜ್ ಭಾಂಡಗೆಯ ಆಯ್ಕೆಯೊಂದಿಗೆ ಆರ್ಸಿಬಿ ತಂಡದ ಒಟ್ಟು ಆಟಗಾರರ ಸಂಖ್ಯೆ 23 ಕ್ಕೇರಿದೆ. ಇದಕ್ಕೂ ಮುನ್ನ ರೀಸ್ ಟೋಪ್ಲಿ, ವಿಲ್ ಜಾಕ್ಸ್, ಹಿಮಾಂಶು ಶರ್ಮಾ ಹಾಗೂ ರಜನ್ ಕುಮಾರ್ ಅವರನ್ನು ಆರ್ಸಿಬಿ ಖರೀದಿಸಿತ್ತು.
ಆರ್ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಝಲ್‌ವುಡ್, ಸಿದ್ಧಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ರಜನ್ ಕುಮಾರ್, ಮನೋಜ್ ಭಾಂಡಗೆ
Published On - 8:15 pm, Fri, 23 December 22