IPL 2023 Auction: ಇಬ್ಬರು ಕನ್ನಡಿಗರು; ಮಿನಿ ಹರಾಜಿನಲ್ಲಿ ಅಧಿಕ ಬೆಲೆ ಪಡೆದ 5 ಭಾರತೀಯ ಆಟಗಾರರಿವರು
TV9 Web | Updated By: ಪೃಥ್ವಿಶಂಕರ
Updated on:
Dec 24, 2022 | 10:49 AM
IPL 2023 Auction: ಈ ಬಾರಿಯ ಮಿನಿ ಹರಾಜಿನಲ್ಲಿ ನಿರೀಕ್ಷೆಯಂತೆ ವಿದೇಶಿ ಆಟಗಾರರ ಮೇಲೆ ಭಾರಿ ಹೂಡಿಕೆ ಮಾಡಲಾಗಿದೆ. ಅದರಲ್ಲೂ ಇಂಗ್ಲೆಂಡ್ ತಂಡದ ಆಲ್ರೌಂಡರ್ಗಳನ್ನು ಎಲ್ಲಾ ಫ್ರಾಂಚೈಸಿಗಳು ಮುಗಿಬಿದ್ದು ಖರೀದಿಸಿದ್ದು ಆಯ್ತು.
1 / 6
ಈ ಬಾರಿಯ ಮಿನಿ ಹರಾಜಿನಲ್ಲಿ ನಿರೀಕ್ಷೆಯಂತೆ ವಿದೇಶಿ ಆಟಗಾರರ ಮೇಲೆ ಭಾರಿ ಹೂಡಿಕೆ ಮಾಡಲಾಗಿದೆ. ಅದರಲ್ಲೂ ಇಂಗ್ಲೆಂಡ್ ತಂಡದ ಆಲ್ರೌಂಡರ್ಗಳನ್ನು ಎಲ್ಲಾ ಫ್ರಾಂಚೈಸಿಗಳು ಮುಗಿಬಿದ್ದು ಖರೀದಿಸಿದ್ದು ಆಯ್ತು. ಆದರೆ ಈ ನಡುವೆ ಭಾರತೀಯ ಆಟಗಾರರಿಗೂ ಹೇಳಿ ಕೊಳ್ಳುವಷ್ಟಿಲ್ಲದಿದ್ದರೂ ನಿರೀಕ್ಷೆಗೂ ಮೀರಿದ ಸಂಭಾವನೆ ನೀಡಲಾಗಿದೆ. ಅಂತಹ ಕೆಲವು ಆಟಗಾರರ ಪಟ್ಟಿ ಇಲ್ಲಿದೆ.
2 / 6
ಕಳೆದ ಸೀಸನ್ನಲ್ಲಿ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಆದರೆ, ಈ ಬಾರಿ ಅವರು ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ. ಅಗರ್ವಾಲ್ ಅವರನ್ನು ಬರೋಬ್ಬರಿ 8.25 ಕೋಟಿ ರೂ. ನೀಡಿ ಹೈದರಾಬಾದ್ ಖರೀದಿಸಿದೆ. ಈ ಮೂಲಕ ಮಿನಿ ಹರಾಜಿನಲ್ಲಿ ಹರಾಜಿನಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಮಯಾಂಕ್ ಭಾಜನರಾಗಿದ್ದಾರೆ.
3 / 6
ಕಳೆದ ಬಾರಿ ಕೋಲ್ಕತ್ತಾ ಪರ ಆಡಿದ್ದ ಶಿವಂ ಮಾವಿ. ಮುಂದಿನ ಆವೃತ್ತಿಯಿಂದ ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆಟಗಾರನನ್ನು ಹಾಲಿ ಚಾಂಪಿಯನ್ ತಂಡ 6 ಕೋಟಿ ನೀಡಿ ಖರೀದಿಸಿತು. ಇದರೊಂದಿಗೆ ಮಾವಿ, ಭಾರತದ ದುಬಾರಿ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
4 / 6
ದೆಹಲಿ ಕ್ಯಾಪಿಟಲ್ಸ್ 5.5 ಕೋಟಿ ರೂ. ನೀಡಿ ವೇಗಿ ಮುಖೇಶ್ ಕುಮಾರ್ ಅವರನ್ನು ಖರೀದಿಸಿತು. ಇದರೊಂದಿಗೆ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.
5 / 6
ಈ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಆಲ್‌ರೌಂಡರ್ ವಿವ್ರಾಂತ್ ಶರ್ಮಾ 4ನೇ ಸ್ಥಾನದಲ್ಲಿದ್ದು, ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ 2.60 ಕೋಟಿ ರೂ. ನೀಡಿ ಖರೀದಿಸಿತು.
6 / 6
ಐಪಿಎಲ್‌ನಲ್ಲಿ ಮೊದಲ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನೀಶ್ ಪಾಂಡೆ ಈಗ ಡೆಲ್ಲಿ ತಂಡದ ಭಾಗವಾಗಿದ್ದಾರೆ. ಇವರಿಗಾಗಿ ದೆಹಲಿ 2.40 ಕೋಟಿ ರೂಪಾಯಿ ಖರ್ಚು ಮಾಡಿದೆ.
Published On - 10:49 am, Sat, 24 December 22