IPL 2023: 10 ತಂಡಗಳು ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಬಹುದು? ಇಲ್ಲಿದೆ ಡಿಟೇಲ್ಸ್
TV9 Web | Updated By: ಝಾಹಿರ್ ಯೂಸುಫ್
Updated on:
Dec 04, 2022 | 10:10 PM
IPL 2023 Auction: ಈ ಪಟ್ಟಿಯಿಂದ ಕೆಲ ಸ್ಟಾರ್ ಆಟಗಾರರನ್ನು ಖರೀದಿಸಲು 10 ಫ್ರಾಂಚೈಸಿಗಳ ನಡುವೆ ಪೈಪೋಟಿ ಕಂಡು ಬರಲಿದೆ. ಅವರಲ್ಲಿ ಪ್ರತಿ ತಂಡಗಳ ಟಾರ್ಗೆಟ್ ಯಾರಾಗಲಿದ್ದಾರೆ ಎಂದು ನೋಡುವುದಾದರೆ...
1 / 12
IPL 2023 Auction: ಐಪಿಎಲ್ ಸೀಸನ್ 16 ಮಿನಿ ಹರಾಜಿಗಾಗಿ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 23 ರಂದು ನಡೆಯಲಿರುವ ಬಿಡ್ಡಿಂಗ್ಗಾಗಿ ಒಟ್ಟು 991 ಆಟಗಾರರು ಹೆಸರು ನೀಡಿದ್ದಾರೆ. ಇವರಲ್ಲಿ 185 ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರಿದ್ದಾರೆ.
2 / 12
ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ 19 ಭಾರತೀಯ ಆಟಗಾರರು ಹಾಗೂ 166 ವಿದೇಶಿ ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಈ ಪಟ್ಟಿಯಿಂದ ಕೆಲ ಸ್ಟಾರ್ ಆಟಗಾರರನ್ನು ಖರೀದಿಸಲು 10 ಫ್ರಾಂಚೈಸಿಗಳ ನಡುವೆ ಪೈಪೋಟಿ ಕಂಡು ಬರಲಿದೆ. ಅವರಲ್ಲಿ ಪ್ರತಿ ತಂಡಗಳ ಟಾರ್ಗೆಟ್ ಯಾರಾಗಲಿದ್ದಾರೆ ಎಂದು ನೋಡುವುದಾದರೆ...
3 / 12
1. ಬೆನ್ ಸ್ಟೋಕ್ಸ್: ಇಂಗ್ಲೆಂಡ್ ಆಲ್ರೌಂಡರ್ ಖರೀದಿಗೆ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ ಪೈಪೋಟಿ ನಡೆಸುವ ಸಾಧ್ಯತೆ ಹೆಚ್ಚು. ಏಕೆಂದರೆ ಈಗಾಗಲೇ ಎಸ್ಆರ್ಹೆಚ್ ತಂಡವು ಕೇನ್ ವಿಲಿಯಮ್ಸನ್ ಅವರನ್ನು ರಿಲೀಸ್ ಮಾಡಿದೆ. ಹೀಗಾಗಿ ಬೆನ್ ಸ್ಟೋಕ್ಸ್ರನ್ನು ಖರೀದಿಸಿ ಹೊಸ ನಾಯಕನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.
4 / 12
2. ಕ್ಯಾಮರೂನ್ ಗ್ರೀನ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಾರ್ಗೆಟ್ ಲೀಸ್ಟ್ನಲ್ಲಿ ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಇರುವುದನ್ನು ಕೋಚ್ ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ. ಹೀಗಾಗಿ ಗ್ರೀನ್ ಖರೀದಿಗೆ ಡೆಲ್ಲಿ ತಂಡವು ಇನ್ನಿಲ್ಲದ ಪ್ರಯತ್ನ ನಡೆಸಲಿದೆ.
5 / 12
3. ಸ್ಯಾಮ್ ಕರನ್: ಪಂಜಾಬ್ ಕಿಂಗ್ಸ್ ತಂಡವು ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಖರೀದಿಗೆ ಹೆಚ್ಚಿನ ಆಸಕ್ತಿ ಹೊಂದಿದೆ. ಏಕೆಂದರೆ ಕಳೆದ ಬಾರಿ ಆಯ್ಕೆಯಾದ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರ ಜೊತೆಗಾರನಾಗಿರುವ ಸ್ಯಾಮ್ ಕರನ್ಗೂ ಮಣೆಹಾಕುವ ಸಾಧ್ಯತೆ ಹೆಚ್ಚಿದೆ.
6 / 12
4. ಕೇನ್ ವಿಲಿಯಮ್ಸನ್: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸದ್ಯ ಅವಶ್ಯಕತೆ ಇರುವುದು ಧೋನಿಯ ಉತ್ತರಾಧಿಕಾರಿ ಎಂದರೆ ತಪ್ಪಾಗಲಾರದು. ಹೀಗಾಗಿಯೇ ನ್ಯೂಜಿಲೆಂಡ್ ತಂಡದ ಕೂಲ್ ಕ್ಯಾಪ್ಟನ್ ಎನಿಸಿಕೊಂಡಿರುವ ಕೇನ್ ವಿಲಿಯಮ್ಸನ್ ಅವರನ್ನು ಸಿಎಸ್ಕೆ ಟಾರ್ಗೆಟ್ ಮಾಡಬಹುದು.
7 / 12
5. ಮಯಾಂಕ್ ಅಗರ್ವಾಲ್: ಲಕ್ನೋ ಸೂಪರ್ ಜೈಂಟ್ಸ್ ತಂಡವು ನಾಯಕ ಕೆಎಲ್ ರಾಹುಲ್ ಅವರ ಆಪ್ತ ಮಯಾಂಕ್ ಅಗರ್ವಾಲ್ ಖರೀದಿಗೆ ಮುಂದಾಗಬಹುದು. ಏಕೆಂದರೆ ಈ ಜೋಡಿಯು ಅತ್ಯುತ್ತಮ ಆರಂಭಿಕ ಜೋಡಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಲಕ್ನೋ ತಂಡವು ಮಯಾಂಕ್ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸಲಿದೆ.
8 / 12
6. ಮನೀಶ್ ಪಾಂಡೆ: ರಾಜಸ್ಥಾನ್ ರಾಯಲ್ಸ್ ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ, ಮಧ್ಯಮ ಕ್ರಮಾಂಕ ಬಲಿಷ್ಠವಾಗಿಲ್ಲ. ಹೀಗಾಗಿ ಎಸ್ಆರ್ಹೆಚ್ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟರ್ ಮನೀಷ್ ಪಾಂಡೆಗೆ ರಾಜಸ್ಥಾನ್ ರಾಯಲ್ಸ್ ಮಣೆಹಾಕಬಹುದು.
9 / 12
7. ರೀಸ್ ಟೋಪ್ಲಿ: ಗುಜರಾತ್ ಟೈಟಾನ್ಸ್ ತಂಡವು ಲಾಕಿ ಫರ್ಗುಸನ್ ಅವರನ್ನು ಕೆಕೆಆರ್ ತಂಡಕ್ಕೆ ನೀಡಿದೆ. ಹೀಗಾಗಿ ಅವರ ಬದಲಿ ವಿದೇಶಿ ಆಟಗಾರನನ್ನು ಖರೀದಿಸುವುದು ಖಚಿತ. ಅದರಲ್ಲೂ ಇಂಗ್ಲೆಂಡ್ನ ಎಡಗೈ ವೇಗಿ ರೀಸ್ ಟೋಪ್ಲಿ ಗುಜರಾತ್ ಟೈಟಾನ್ಸ್ ತಂಡ ಟಾರ್ಗೆಟ್ ಲೀಸ್ಟ್ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
10 / 12
8. ಶಿವಂ ಮಾವಿ: ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ನಲ್ಲಿ ಮಿಂಚಿದರೂ, ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಈ ಬಾರಿ ಜಸ್ಪ್ರೀತ್ ಬುಮ್ರಾ ಹಾಗೂ ಜೋಫ್ರಾ ಆರ್ಚರ್ ಜೊತೆಯಾಗುತ್ತಿದ್ದಾರೆ. ಇವರ ಜೊತೆಗೆ ಮತ್ತೋರ್ವ ಭಾರತೀಯ ವೇಗಿಯ ಅವಶ್ಯಕತೆ ಮುಂಬೈಗಿದೆ. ಹೀಗಾಗಿ 140 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಶಿವಂ ಮಾವಿಗೆ ಮುಂಬೈ ಮಣೆಹಾಕಬಹುದು.
11 / 12
9. ನಾರಾಯಣ್ ಜಗದೀಸನ್: ಈ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ 8 ಪಂದ್ಯಗಳಿಂದ ನಾರಾಯಣ್ ಜಗದೀಸನ್ ಕಲೆಹಾಕಿದ್ದು ಬರೋಬ್ಬರಿ 830 ರನ್ಗಳು. ಇತ್ತ ಕೆಕೆಆರ್ ತಂಡವು ವಿಕೆಟ್ ಕೀಪರ್ ಬ್ಯಾಟರ್ನ ಖರೀದಿಯನ್ನು ಎದುರು ನೋಡುತ್ತಿದೆ. ಅವರ ಮುಂದಿರುವ ಅತ್ಯುತ್ತಮ ಆಯ್ಕೆಯೆಂದರೆ ನಾರಾಯಣ್ ಜಗದೀಸನ್. ಹೀಗಾಗಿ ಚೆನ್ನೈ ಆಟಗಾರ ಕೆಕೆಆರ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.
12 / 12
10. ವಾಸುಕಿ ಕೌಶಿಕ್: ಕರ್ನಾಟಕದ ವೇಗಿ ವಿ. ಕೌಶಿಕ್ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ 9 ಪಂದ್ಯಗಳಿಂದ 18 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇತ್ತ ಮೊಹಮ್ಮದ್ ಸಿರಾಜ್ ಹೊರತುಪಡಿಸಿ ಮತ್ತೋರ್ವ ಭಾರತೀಯ ವೇಗಿಯ ಹುಡುಕಾಟದಲ್ಲಿರುವ ಆರ್ಸಿಬಿ ವಾಸುಕಿ ಕೌಶಿಕ್ ಅವರ ಖರೀದಿಗೆ ಮುಂದಾಗಬಹುದು. ಏಕೆಂದರೆ ಈ ಬಾರಿ ಬೆಂಗಳೂರಿನಲ್ಲೂ ಪಂದ್ಯಗಳು ನಡೆಯಲಿದ್ದು, ಅದಕ್ಕಾಗಿ ಸ್ಥಳೀಯ ಬೌಲರ್ನ ಅವಶ್ಯಕತೆ ಆರ್ಸಿಬಿ ತಂಡಕ್ಕಿದೆ.