- Kannada News Photo gallery Cricket photos Rohit Sharma Captaincy Record: Are Hitman’s powers on the wane kannada News zp
Rohit Sharma: ನಾಯಕನಾದ ಮೇಲೆ ರೋಹಿತ್ ಶರ್ಮಾ ಅಟ್ಟರ್ ಫ್ಲಾಪ್: ಇಲ್ಲಿದೆ ಅಂಕಿ ಅಂಶಗಳು
Rohit Sharma Captaincy Record: ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 2022 ರಲ್ಲಿ ರನ್ಗಳಿಸಲು ಪರದಾಡಿರುವುದು ಸ್ಪಷ್ಟ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.
Updated on: Dec 05, 2022 | 9:23 PM

ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕರಾಗಿ ಒಂದು ವರ್ಷವಾಗಿದೆ. ಈ ವರ್ಷದಲ್ಲಿ ಹಿಟ್ಮ್ಯಾನ್ 2 ಟೆಸ್ಟ್, 7 ಏಕದಿನ ಹಾಗೂ 29 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಈ ವೇಳೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಪಾಸಾದರು ಬ್ಯಾಟಿಂಗ್ನಲ್ಲಿ ಫೇಲಾಗಿದ್ದಾರೆ. ಏಕೆಂದರೆ ನಾಯಕನಾದ ಬಳಿಕ ಹಿಟ್ಮ್ಯಾನ್ ಬ್ಯಾಟ್ನ ಸದ್ದಡಗಿದೆ. ಈ ಹಿಂದೆ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ರೋಹಿತ್ ಶರ್ಮಾ 2022 ರಲ್ಲಿ ರನ್ಗಳಿಸಲು ಪರದಾಡಿರುವುದು ಸ್ಪಷ್ಟ. ಇದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

ಟೆಸ್ಟ್ ಕ್ರಿಕೆಟ್: ರೋಹಿತ್ ಶರ್ಮಾ ಈ ವರ್ಷ 2 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಎರಡು ಪಂದ್ಯಗಳ ಮೂಲಕ ಹಿಟ್ಮ್ಯಾನ್ ಕಲೆಹಾಕಿದ್ದು ಕೇವಲ 90 ರನ್ ಮಾತ್ರ. ಅಂದರೆ ನಾಯಕರಾಗಿ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ಈ ವರ್ಷ ಒಂದೇ ಒಂದು ಅರ್ಧಶತಕ ಕೂಡ ಬಾರಿಸಿಲ್ಲ.

ಟಿ20 ಕ್ರಿಕೆಟ್: ಈ ವರ್ಷ 29 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಕಲೆಹಾಕಿರುವುದು 656 ರನ್ಗಳು. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಅಂದರೆ ಇಲ್ಲಿ ರೋಹಿತ್ ಶರ್ಮಾ ಪಂದ್ಯವೊಂದರಲ್ಲಿ ಕಲೆಹಾಕಿದ ರನ್ ಸರಾಸರಿ ಕೇವಲ 24.29 ಅಷ್ಟೇ.

ಏಕದಿನ ಕ್ರಿಕೆಟ್: 2022 ರಲ್ಲಿ ಇದುವರೆಗೆ 7 ಏಕದಿನ ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿರುವ ಹಿಟ್ಮ್ಯಾನ್ ಗಳಿಸಿದ್ದು ಕೇವಲ 198 ರನ್ಗಳು. ಅಂದರೆ ಪ್ರತಿ ಪಂದ್ಯದ ರನ್ ಸರಾಸರಿ ಇರುವುದು ಕೇವಲ 33 ಮಾತ್ರ.

ಅದುವೇ ನಾಯಕನಾಗುವ ಮೊದಲು ರೋಹಿತ್ ಶರ್ಮಾ ಟೆಸ್ಟ್ನಲ್ಲಿ 46 ರ ಸರಾಸರಿಯಲ್ಲಿ 3047 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 47.85 ರ ಸರಾಸರಿಯಲ್ಲಿ 8662 ರನ್ ಬಾರಿಸಿದ್ದಾರೆ. ಇನ್ನು ಟಿ20 ಯಲ್ಲಿ 30 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ಗಳಿಸುತ್ತಾ ಬಂದಿದ್ದಾರೆ.

ಆದರೆ ನಾಯಕರಾದ ಬಳಿಕ ಮೂರು ಮಾದರಿಯಲ್ಲೂ ಹಿಟ್ಮ್ಯಾನ್ ಅವರ ರನ್ ಸರಾಸರಿ ಹಾಗೂ ರನ್ಗಳಿಕೆಯು ತೀವ್ರ ಕುಸಿತಕ್ಕೊಳಗಾಗಿದೆ. ಅಂದರೆ ಇಲ್ಲಿ ಕ್ಯಾಪ್ಟನ್ಆದ ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ಅಟ್ಟರ್ ಫ್ಲಾಪ್ ಆಗಿರುವುದು ಸ್ಪಷ್ಟ.
