IPL 2023: ಸಿಕ್ಸ್​ಗಳ ಸುರಿಮಳೆಗೈದ CSK: ಆದ್ರೂ RCB ದಾಖಲೆ ಮುರಿಯಲಾಗಲಿಲ್ಲ..!

|

Updated on: Apr 24, 2023 | 7:39 PM

IPL 2023 Kannada: ರಹಾನೆಗೆ ಸಾಥ್ ನೀಡಿದ ಶಿವಂ ದುಬೆ ಕೂಡ 5 ಸಿಕ್ಸ್​ಗಳನ್ನು ಬಾರಿಸಿದ್ದರು. ಕೊನೆಯ ಹಂತದಲ್ಲಿ 2 ಸಿಕ್ಸ್ ಬಾರಿಸುವ ಮೂಲಕ ಜಡೇಜಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

1 / 7
IPL 2023: ಐಪಿಎಲ್​ನ 33ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಿಎಸ್​ಕೆ ಬ್ಯಾಟರ್​ಗಳು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಿಕ್ಸ್​ಗಳ ಸುರಿಮಳೆಯಾಗಿತ್ತು.

2 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ಪರ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ಡೆವೊನ್ ಕಾನ್ವೆ ತಲಾ 3 ಸಿಕ್ಸ್ ಸಿಡಿಸಿದ್ದರು.

3 / 7
ಆ ಬಳಿಕ ಬಂದ ಅಜಿಂಕ್ಯ ರಹಾನೆ ಸ್ಪೋಟಕ ಬ್ಯಾಟಿಂಗ್​ನೊಂದಿಗೆ 5 ಭರ್ಜರಿ ಸಿಕ್ಸ್ ಸಿಡಿಸಿ ಅಬ್ಬರಿಸಿದ್ದರು.

4 / 7
ಇನ್ನು ರಹಾನೆಗೆ ಸಾಥ್ ನೀಡಿದ ಶಿವಂ ದುಬೆ ಕೂಡ 5 ಸಿಕ್ಸ್​ಗಳನ್ನು ಬಾರಿಸಿದ್ದರು. ಕೊನೆಯ ಹಂತದಲ್ಲಿ 2 ಸಿಕ್ಸ್ ಬಾರಿಸುವ ಮೂಲಕ ಜಡೇಜಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರೊಂದಿಗೆ ಸಿಎಸ್​ಕೆ ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 235 ಕ್ಕೆ ಬಂದು ನಿಂತಿತು.

5 / 7
ವಿಶೇಷ ಎಂದರೆ ಸಿಎಸ್​ಕೆ ತಂಡದ ಈ ಭರ್ಜರಿ ಇನಿಂಗ್ಸ್​ನಲ್ಲಿ ಒಟ್ಟು 18 ಸಿಕ್ಸ್​ಗಳು ಮೂಡಿಬಂದಿದ್ದವು. ಇದು ಐಪಿಎಲ್​ನಲ್ಲಿ ಇನಿಂಗ್ಸ್​ವೊಂದರಲ್ಲಿ ಸಿಎಸ್​ಕೆ ತಂಡ ಬಾರಿಸಿದ ಅತ್ಯಧಿಕ ಸಿಕ್ಸ್​ ದಾಖಲೆಯಾಗಿದೆ.

6 / 7
ಇದಾಗ್ಯೂ ಐಪಿಎಲ್​ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಆರ್​ಸಿಬಿ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಬರೋಬ್ಬರಿ 21 ಸಿಕ್ಸ್​ಗಳನ್ನು ಬಾರಿಸಿತ್ತು.

7 / 7
ಇದು ಐಪಿಎಲ್​ ಇತಿಹಾಸದಲ್ಲೇ ಇನಿಂಗ್ಸ್​ವೊಂದರಲ್ಲಿ ಮೂಡಿಬಂದ ಅತ್ಯಧಿಕ ಸಿಕ್ಸ್​ಗಳ ದಾಖಲೆಯಾಗಿದೆ. ಅಂದರೆ ಐಪಿಎಲ್​ನ ಇನಿಂಗ್ಸ್​ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಇನ್ನೂ ಕೂಡ ಆರ್​ಸಿಬಿ (21 ಸಿಕ್ಸ್) ತಂಡದ ಹೆಸರಿನಲ್ಲಿದೆ.

Published On - 3:57 pm, Mon, 24 April 23