IPL 2023: ಈ ಬಾರಿ RCB ಪರ ಮೇಡನ್ ಓವರ್ ಮಾಡಿದ ಏಕೈಕ ಬೌಲರ್ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
May 09, 2023 | 11:12 PM
IPL 2023 Kannada: ಕಳೆದ 11 ಪಂದ್ಯಗಳಲ್ಲಿ ಆರ್ಸಿಬಿ ಕಡೆಯಿಂದ ಮೂಡಿಬಂದಿರುವುದು ಒಂದೇ ಒಂದು ಮೇಡನ್ ಓವರ್ ಮಾತ್ರ. ಆದರೆ ಈ ಮೇಡನ್ ಓವರ್ ಎಸೆದ ಬೌಲರ್ ಇದೀಗ ಆರ್ಸಿಬಿ ತಂಡದ ಭಾಗವಾಗಿಲ್ಲ ಎಂಬುದು ವಿಶೇಷ.
1 / 6
IPL 2023: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 11 ಪಂದ್ಯಗಳನ್ನಾಡಿದೆ. ಇದರಲ್ಲಿ 5 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 6 ಪಂದ್ಯಗಳಲ್ಲಿ ಸೋಲನುಭವಿಸಿದೆ.
2 / 6
ಈ ಸೋಲುಗಳಿಗೆ ಬಹುಮುಖ್ಯ ಕಾರಣ ಆರ್ಸಿಬಿ ತಂಡದ ಕಳಪೆ ಬೌಲಿಂಗ್ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಸಲ ಆರ್ಸಿಬಿ ಪರ ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿದರೆ ಉಳಿದ ಬೌಲರ್ಗಳಿಂದ ಪರಿಣಾಮಕಾರಿ ಪ್ರದರ್ಶನ ಮೂಡಿಬಂದಿಲ್ಲ.
3 / 6
ಇದಕ್ಕೆ ಸಾಕ್ಷಿಯೇ ಕಳೆದ 11 ಪಂದ್ಯಗಳಲ್ಲಿ ಆರ್ಸಿಬಿ ಕಡೆಯಿಂದ ಮೂಡಿಬಂದಿರುವುದು ಒಂದೇ ಒಂದು ಮೇಡನ್ ಓವರ್ ಮಾತ್ರ. ಆದರೆ ಈ ಮೇಡನ್ ಓವರ್ ಎಸೆದ ಬೌಲರ್ ಇದೀಗ ಆರ್ಸಿಬಿ ತಂಡದ ಭಾಗವಾಗಿಲ್ಲ ಎಂಬುದು ವಿಶೇಷ.
4 / 6
ಹೌದು, ಈ ಸಲ ಆರ್ಸಿಬಿ ಪರ ಏಕೈಕ ಮೇಡನ್ ಓವರ್ ಎಸೆದಿದ್ದು ಡೇವಿಡ್ ವಿಲ್ಲಿ. 4 ಪಂದ್ಯಗಳನ್ನಾಡಿರುವ ವಿಲ್ಲಿ ಒಟ್ಟು 90 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 105 ರನ್ ನೀಡುವ ಮೂಲಕ 3 ವಿಕೆಟ್ ಕಬಳಿಸಿದ್ದರು.
5 / 6
ಇದೇ ವೇಳೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಮೇಡನ್ ಓವರ್ ಮಾಡಿದ್ದರು. ಆ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದ ವಿಲ್ಲಿ 4 ಓವರ್ಗಳಲ್ಲಿ ಕೇವಲ 16 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದರು.
6 / 6
ಆದರೆ ಬೆಂಗಳೂರಿನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಡೇವಿಡ್ ವಿಲ್ಲಿ ಅರ್ಧದಲ್ಲೇ ಐಪಿಎಲ್ ತೊರೆದಿದ್ದಾರೆ. ಅಲ್ಲದೆ ಸದ್ಯ ಇಂಗ್ಲೆಂಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.