IPL 2023: RCB ಅಭಿಮಾನಿಗಳಿಗೆ ದಿನೇಶ್ ಕಾರ್ತಿಕ್ ಭಾವನಾತ್ಮಕ ಸಂದೇಶ

| Updated By: ಝಾಹಿರ್ ಯೂಸುಫ್

Updated on: May 24, 2023 | 8:30 PM

IPL 2023 Kannada: ಈ ಬಾರಿ 13 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ದಿನೇಶ್ ಕಾರ್ತಿಕ್ ಕಲೆಹಾಕಿದ್ದು ಕೇವಲ 140 ರನ್ ಮಾತ್ರ. ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಡಿಕೆಯನ್ನು ಮುಂದಿನ ಸೀಸನ್​ಗಾಗಿ ಆರ್​ಸಿಬಿ ಉಳಿಸಿಕೊಳ್ಳುವುದು ಅನುಮಾನ.

1 / 7
IPL 2023: ಪ್ರತಿ ಸೀಸನ್​ನಂತೆ ಈ ಬಾರಿ ಕೂಡ ಆರ್​ಸಿಬಿ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಆಡಿದ 14 ಪಂದ್ಯಗಳಲ್ಲಿ ಕೇವಲ 7 ರಲ್ಲಿ ಮಾತ್ರ ಜಯ ಸಾಧಿಸಿದ ಫಾಫ್ ಡುಪ್ಲೆಸಿಸ್ ಪಡೆ ಲೀಗ್ ಹಂತದಲ್ಲೇ ಹೊರಬಿದ್ದಿದೆ.

2 / 7
ಒಂದು ತಂಡವಾಗಿ ಆಡುವಲ್ಲಿ ಸಂಪೂರ್ಣ ವಿಫಲರಾಗಿದ್ದ ಆರ್​ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಪ್ರಚಂಡ ಪ್ರದರ್ಶನ ನೀಡಿದ್ದರು.

3 / 7
ಈ ನಾಲ್ವರ ಸಾಂಘಿಕ ಹೋರಾಟದಿಂದಲೇ ಆರ್​ಸಿಬಿ ಕಪ್ ಗೆಲ್ಲುವ ಕನಸನ್ನು ಬಿತ್ತಿದ್ದರು. ಆದರೆ ಉಳಿದ ಆಟಗಾರರ ಕಳಪೆ ಪ್ರದರ್ಶನವು ಆರ್​ಸಿಬಿ ಪಾಲಿಗೆ ಮುಳುವಾಯಿತು. ಇದುವೇ ಕೆಲ ಪಂದ್ಯಗಳಲ್ಲಿ ಸೋಲಿಗೂ ಪ್ರಮುಖ ಕಾರಣವಾಯಿತು.

4 / 7
ಅದರಲ್ಲೂ ತಂಡದಲ್ಲಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶ್ ಆಗುವ ಮುನ್ನವೇ ಔಟ್ ಆಗಿ ಪೆವಿಲಿಯನ್ ಸೇರುತ್ತಿದ್ದರು. ಇದು ಕೂಡ ಆರ್​ಸಿಬಿ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿತು.

5 / 7
ಇದೀಗ ಟೂರ್ನಿಯಿಂದ ಹೊರಬಿದ್ದ ನೋವಿನಲ್ಲಿರುವ ಆರ್​ಸಿಬಿ ಅಭಿಮಾನಿಗಳಿಗೆ ದಿನೇಶ್ ಕಾರ್ತಿಕ್ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

6 / 7
ಈ ಕುರಿತು ಟ್ವಿಟರ್​ನಲ್ಲಿ ಬರೆದುಕೊಂಡಿರುವ ಡಿಕೆ, ನಮಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಿಲ್ಲ. ಹೀಗಾಗಿ ಫಲಿತಾಂಶ ಕೂಡ ನಮ್ಮ ಪರವಾಗಿರಲಿಲ್ಲ. ಇದಾಗ್ಯೂ ನಮ್ಮ ಕನಸನ್ನು ಬೆನ್ನತ್ತುವುದು ಮುಂದುವರೆಯಲಿದೆ. ನಮ್ಮೆಲ್ಲಾ ಏಳು-ಬೀಳುಗಳಲ್ಲಿ ಜೊತೆಗಿದ್ದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಮಗೆ ನೀವೇ ಸರ್ವಸ್ವ ಎಂದು ದಿನೇಶ್ ಕಾರ್ತಿಕ್ ಬರೆದುಕೊಂಡಿದ್ದಾರೆ.

7 / 7
ಅಂದಹಾಗೆ ಈ ಬಾರಿ 13 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ದಿನೇಶ್ ಕಾರ್ತಿಕ್ ಕಲೆಹಾಕಿದ್ದು ಕೇವಲ 140 ರನ್ ಮಾತ್ರ. ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಡಿಕೆಯನ್ನು ಮುಂದಿನ ಸೀಸನ್​ಗಾಗಿ ಆರ್​ಸಿಬಿ ಉಳಿಸಿಕೊಳ್ಳುವುದು ಅನುಮಾನ.