IPL 2023: ಕಿಂಗ್ ಕೊಹ್ಲಿಯ ವಿಶೇಷ ದಾಖಲೆ ಸರಿಗಟ್ಟಿದ ಶುಭ್​ಮನ್ ಗಿಲ್

IPL 2023 Kannada: ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದ್ದು, ಇದರಲ್ಲಿ ಗೆದ್ದರೆ ಫೈನಲ್​ಗೆ ಪ್ರವೇಶಿಸಲಿದೆ. ಹೀಗಾಗಿ ಡುಪ್ಲೆಸಿಸ್ ಅವರನ್ನು ಹಿಂದಿಕ್ಕಿ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶ ಶುಭ್​ಮನ್ ಗಿಲ್ ಮುಂದಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 24, 2023 | 10:06 PM

IPL 2023: ಐಪಿಎಲ್​ ಸೀಸನ್ 16 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 42 ರನ್​ ಬಾರಿಸುವ ಮೂಲಕ ಶುಭ್​ಮನ್ ಗಿಲ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ರನ್ ಮೆಷಿನ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

1 / 7
ಹೌದು, ಸಿಎಸ್​ಕೆ ವಿರುದ್ಧ 42 ರನ್​ ಬಾರಿಸುವುದರೊಂದಿಗೆ ಈ ಬಾರಿಯ ಐಪಿಎಲ್​ನಲ್ಲಿ ಶುಭ್​ಮನ್ 700 ರನ್​ಗಳನ್ನು ಪೂರೈಸಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಏಳು ನೂರು ರನ್ ಕಲೆಹಾಕಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

2 / 7
ಇದಕ್ಕೂ ಮುನ್ನ ಈ ಸಾಧನೆ ಮಾಡಿದ್ದು ವಿರಾಟ್ ಕೊಹ್ಲಿ. 2016 ರಲ್ಲಿ ಕಿಂಗ್ ಕೊಹ್ಲಿ ಒಟ್ಟು 973 ರನ್ ಕಲೆಹಾಕಿದ್ದರು. ಇದು ಐಪಿಎಲ್ ಸೀಸನ್​ವೊಂದರಲ್ಲಿ ಬ್ಯಾಟರ್​ರೊಬ್ಬರು ಕಲೆಹಾಕಿದ ಅತ್ಯಧಿಕ ರನ್ಸ್​ ಎಂಬುದು ವಿಶೇಷ.

3 / 7
ಇದೀಗ ಶುಭ್​ಮನ್ ಗಿಲ್ 15 ಪಂದ್ಯಗಳಲ್ಲಿ 2 ಭರ್ಜರಿ ಶತಕ ಹಾಗೂ 4 ಅರ್ಧಶತಕಗಳೊಂದಿಗೆ ಒಟ್ಟು 722 ರನ್​ ಕಲೆಹಾಕಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್​ನ ಆರೆಂಜ್ ಕ್ಯಾಪ್ ರೇಸ್​ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

4 / 7
ಈ ಬಾರಿಯ ಐಪಿಎಲ್​ನಲ್ಲಿ 14 ಪಂದ್ಯಗಳಿಂದ 730 ರನ್​ ಕಲೆಹಾಕಿರುವ ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಸದ್ಯ ಅಗ್ರಸ್ಥಾನದಲ್ಲಿದ್ದು, ಡುಪ್ಲೆಸಿಸ್ ಅವರನ್ನು ಹಿಂದಿಕ್ಕಲು ಗಿಲ್​ಗೆ ಕೇವಲ 9 ರನ್​ಗಳ ಅವಶ್ಯಕತೆಯಿದೆ.

5 / 7
ಅತ್ತ ಗುಜರಾತ್ ಟೈಟಾನ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದ್ದು, ಇದರಲ್ಲಿ ಗೆದ್ದರೆ ಫೈನಲ್​ಗೆ ಪ್ರವೇಶಿಸಲಿದೆ. ಹೀಗಾಗಿ ಡುಪ್ಲೆಸಿಸ್ ಅವರನ್ನು ಹಿಂದಿಕ್ಕಿ ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುವ ಅವಕಾಶ ಶುಭ್​ಮನ್ ಗಿಲ್ ಮುಂದಿದೆ.

6 / 7
ಅಂದಹಾಗೆ ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿದರೆ ಕಳೆದ 16 ಸೀಸನ್ ಐಪಿಎಲ್​ನಲ್ಲಿ ಭಾರತದ ಯಾವುದೇ ಬ್ಯಾಟ್ಸ್​ಮನ್ 700 ಕ್ಕಿಂತ ಹೆಚ್ಚಿನ ರನ್​ಗಳಿಸಿಲ್ಲ ಎಂಬುದು ವಿಶೇಷ.

7 / 7
Follow us
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್

ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ

ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್

ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್

ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ

ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ

ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್

ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್

ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ

ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ