IPL 2023: ಐಪಿಎಲ್ನಲ್ಲಿ ವಿಶೇಷ ದಾಖಲೆ ಬರೆದ ಫಾಫ್ ಡುಪ್ಲೆಸಿಸ್
TV9 Web | Updated By: ಝಾಹಿರ್ ಯೂಸುಫ್
Updated on:
May 14, 2023 | 5:07 PM
IPL 2023 Kannada: ಐಪಿಎಲ್ನಲ್ಲಿ ಈ ಸಾಧನೆ ಮಾಡಿದ 4ನೇ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಕೂಡ ಡುಪ್ಲೆಸಿಸ್ ಬರೆದರು. ಐಪಿಎಲ್ನಲ್ಲಿ 4 ಸಾವಿರ ರನ್ಗಳಿಸಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
1 / 7
IPL 2023: ಐಪಿಎಲ್ನ 60ನೇ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
2 / 7
ಈ ಪಂದ್ಯದಲ್ಲಿ 21 ರನ್ ಪೂರೈಸುವುದರೊಂದಿಗೆ ಫಾಫ್ ಡುಪ್ಲೆಸಿಸ್ ಐಪಿಎಲ್ನಲ್ಲಿ 4 ಸಾವಿರ ರನ್ ಪೂರೈಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ 14ನೇ ಆಟಗಾರ ಎನಿಸಿಕೊಂಡರು.
3 / 7
ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ ಈ ಸಾಧನೆ ಮಾಡಿದ 4ನೇ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಕೂಡ ಡುಪ್ಲೆಸಿಸ್ ಬರೆದರು. ಐಪಿಎಲ್ನಲ್ಲಿ 4 ಸಾವಿರ ರನ್ಗಳಿಸಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
4 / 7
1- ಡೇವಿಡ್ ವಾರ್ನರ್: ಐಪಿಎಲ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ವಿದೇಶಿ ಆಟಗಾರ ಎಂಬ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. 174 ಇನಿಂಗ್ಸ್ಗಳಲ್ಲಿ 6265 ರನ್ ಕಲೆಹಾಕುವ ಮೂಲಕ ವಾರ್ನರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
5 / 7
2- ಎಬಿ ಡಿವಿಲಿಯರ್ಸ್: ಐಪಿಎಲ್ನಲ್ಲಿ ಒಟ್ಟು 170 ಇನಿಂಗ್ಸ್ ಆಡಿರುವ ಎಬಿಡಿ ಒಟ್ಟು 5162 ರನ್ ಕಲೆಹಾಕಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
6 / 7
3- ಕ್ರಿಸ್ ಗೇಲ್: ಸ್ಪೋಟಕ ಬ್ಯಾಟರ್ ಕ್ರಿಸ್ ಗೇಲ್ 141 ಇನಿಂಗ್ಸ್ಗಳಲ್ಲಿ ಒಟ್ಟು 4965 ರನ್ ಬಾರಿಸಿ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
7 / 7
4- ಫಾಫ್ ಡುಪ್ಲೆಸಿಸ್: 121 ಇನಿಂಗ್ಸ್ ಆಡಿರುವ ಫಾಫ್ ಡುಪ್ಲೆಸಿಸ್ ಒಟ್ಟು 4020 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ 4 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ 4ನೇ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.