Gujarat Titans Jersey 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತನ್ನ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಗುಜರಾತ್ ಟೈಟಾನ್ಸ್ ತಂಡವು ಕಳೆದ ಬಾರಿಯ ಜೆರ್ಸಿಯನ್ನು ಮರುವಿನ್ಯಾಸಗೊಳಿಸಲಾಗಿದೆ. ಇಲ್ಲಿ ತಂಡದ ಲೋಗೋದ ಮೇಲೆ ಒಂದು ಬಾರಿಯ ಚಾಂಪಿಯನ್ ಪಟ್ಟಕ್ಕೇರಿರುವುದನ್ನು ಪ್ರತಿನಿಧಿಸುವಂತೆ ಸ್ಟಾರ್ ನೀಡಲಾಗಿದೆ.
ಹಾಗೆಯೇ ಜೆರ್ಸಿಯ ಕಾಲರ್ ವಿನ್ಯಾಸ ಬದಲಿಸಲಾಗಿದ್ದು, ಇದರ ಹೊರತಾಗಿ ತಂಡದ ಸಮವಸ್ತ್ರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿಲ್ಲ.
ಮಾರ್ಚ್ 31 ರಿಂದ ಶುರುವಾಗಲಿರುವ ಐಪಿಎಲ್ ಸೀಸನ್ 16 ರ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್ , ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ಜೋಶ್ ಲಿಟಲ್, ಉರ್ವಿಲ್ ಪಟೇಲ್, ಶಿವಂ ಮಾವಿ, ಕೆಎಸ್ ಭರತ್, ಓಡಿಯನ್ ಸ್ಮಿತ್ , ಕೇನ್ ವಿಲಿಯಮ್ಸನ್.