Updated on:Mar 09, 2023 | 3:37 PM
16ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅಲ್ಲದೆ ಈ ಮಿಲಿಯನ್ ಡಾಲರ್ ಟೂರ್ನಿಯ ಪಂದ್ಯಗಳ ವೇಳಾಪಟ್ಟಿ, ದಿನಾಂಕ ಮತ್ತು ಸ್ಥಳವನ್ನು ಕೂಡ ಪ್ರಕಟಿಸಲಾಗಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನ ಲೀಗ್ನ ಪ್ರಮುಖ 6 ತಂಡಗಳಿಗೆ ಸಂಕಷ್ಟ ಎದುರಾಗಿದೆ.
ವಾಸ್ತವವಾಗಿ, ಐಪಿಎಲ್ನ 6 ತಂಡಗಳಲ್ಲಿ ಆಡುತ್ತಿರುವ ದಕ್ಷಿಣ ಆಫ್ರಿಕಾ ಆಟಗಾರರು ಟೂರ್ನಿಯ ಮೊದಲ 5 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದಕ್ಕೆ ಕಾರಣವೂ ಇದ್ದು, 2023 ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಬೇಕೆಂದರೆ ಆಫ್ರಿಕಾ ತಂಡ, ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಯನ್ನು ಗೆಲ್ಲಲೇಬೇಕಾಗಿದೆ.
ಈ ಸರಣಿಯನ್ನು ಗೆದ್ದರೆ ಮಾತ್ರ ಆಫ್ರಿಕಾ ತಂಡ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುತ್ತದೆ. ಸೋತರೆ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಆಫ್ರಿಕಾ ಆಟಗಾರರು ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಗಾಗಿ ಐಪಿಎಲ್ನ ಆರಂಭಿಕ ಪಂದ್ಯಗಳಿಂದ ದೂರು ಉಳಿಯಲಿದ್ದಾರೆ.
ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಈ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದು, ಐಪಿಎಲ್ನಲ್ಲಿ ಆಡಲಿರುವ ದಕ್ಷಿಣ ಆಫ್ರಿಕಾದ ಆಟಗಾರರು ಐಪಿಎಲ್‌ಗಾಗಿ ಭಾರತಕ್ಕೆ ಬರುವ ಮೊದಲು ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗುವ ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಯನ್ನು ಆಡಲಿದ್ದಾರೆ. ಹೀಗಾಗಿ ಆಫ್ರಿಕಾ ಆಟಗಾರರ ಅಲಭ್ಯತೆ ಪ್ರಮುಖ 6 ತಂಡಗಳಿಗೆ ಹೊಡೆತ ನೀಡಲಿದ್ದು, ಆ 6ತಂಡಗಳು ಯಾವುವು, ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ.
ಸನ್ರೈಸರ್ಸ್ ಹೈದರಾಬಾದ್- ಏಡೆನ್ ಮಾರ್ಕ್ರಾಮ್, ಮಾರ್ಕೊ ಯಾನ್ಸನ್ ಮತ್ತು ಹೆನ್ರಿಚ್ ಕ್ಲಾಸೆನ್
ಡೆಲ್ಲಿ ಕ್ಯಾಪಿಟಲ್ಸ್- ಎನ್ರಿಕ್ ನೋಕಿಯಾ ಮತ್ತು ಲುಂಗಿ ಎನ್ಗಿಡಿ
ಮುಂಬೈ ಇಂಡಿಯನ್ಸ್- ಟ್ರಿಸ್ಟಾನ್ ಸ್ಟಬ್ಸ್ ಮತ್ತು ಡೆವಾಲ್ಡ್ ಬ್ರೆವಿಸ್
ಗುಜರಾತ್ ಟೈಟಾನ್ಸ್- ಡೇವಿಡ್ ಮಿಲ್ಲರ್
ಲಕ್ನೋ ಸೂಪರ್ ಜೈಂಟ್ಸ್- ಕ್ವಿಂಟನ್ ಡಿ ಕಾಕ್,
ಪಂಜಾಬ್ ಕಿಂಗ್ಸ್- ಕಗಿಸೋ ರಬಾಡ
Published On - 3:37 pm, Thu, 9 March 23