IPL 2023: ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಹರ್ಭಜನ್ ಸಿಂಗ್

| Updated By: ಝಾಹಿರ್ ಯೂಸುಫ್

Updated on: May 13, 2023 | 11:23 PM

IPL 2023 Kannada: ಪ್ರಸ್ತುತ ಸನ್ನಿವೇಶದಲ್ಲಿ ನಾಲ್ಕು ತಂಡಗಳನ್ನು ಹೆಸರಿಸುವುದು ಕಷ್ಟಕರ. ಇದಾಗ್ಯೂ ಈಗಿನ ಪಾಯಿಂಟ್ಸ್​ ಟೇಬಲ್​ ಲೆಕ್ಕಾಚಾರದಂತೆ ಈ ಕೆಳಗಿನ 4 ತಂಡಗಳು ಪ್ಲೇಆಫ್​ಗೆ ಪ್ರವೇಶಿಸಲಿದೆ.

1 / 8
IPL 2023: ಐಪಿಎಲ್ ಸೀಸನ್ 16 ರ ಪ್ಲೇಆಫ್ ರೇಸ್ ರೋಚಕ ಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಬಹುತೇಕ ತಂಡಗಳ 12 ಪಂದ್ಯಗಳು ಮುಗಿದರೂ ಯಾವುದೇ ತಂಡ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿಲ್ಲ. ಹೀಗಾಗಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ತಂಡ ಯಾವುದೆಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಈ ಕುತೂಹಲವನ್ನು ತಣಿಸುವಂತಹ ಉತ್ತರ ನೀಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಹರ್ಭಜನ್ ಸಿಂಗ್.

2 / 8
ಈ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಪ್ರಸ್ತುತ ಸನ್ನಿವೇಶದಲ್ಲಿ ನಾಲ್ಕು ತಂಡಗಳನ್ನು ಹೆಸರಿಸುವುದು ಕಷ್ಟಕರ. ಇದಾಗ್ಯೂ ಈಗಿನ ಪಾಯಿಂಟ್ಸ್​ ಟೇಬಲ್​ ಲೆಕ್ಕಾಚಾರದಂತೆ ಈ ಕೆಳಗಿನ 4 ತಂಡಗಳು ಪ್ಲೇಆಫ್​ಗೆ ಪ್ರವೇಶಿಸಲಿದೆ ಎಂದಿದ್ದಾರೆ.

3 / 8
1- ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಈ ಬಾರಿ ಕೂಡ ಪ್ಲೇಆಫ್ ಪ್ರವೇಶಿಸಲಿದೆ. ಈಗಾಗಲೇ 12 ಪಾಯಿಂಟ್ಸ್ ಹೊಂದಿರುವ ಜಿಟಿ ತಂಡವು ಅಂತಿಮ ಸುತ್ತಿಗೆ ಪ್ರವೇಶಿಸುವುದರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ ಹರ್ಭಜನ್ ಸಿಂಗ್.

4 / 8
2- ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ ನೇತೃತ್ವದ ಸಿಎಸ್​ಕೆ ತಂಡ ಕೂಡ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ಚೆನ್ನೈ ಕೂಡ ಪ್ಲೇಆಫ್ ಆಡಲಿದೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

5 / 8
3- ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಪ್ಲೇಆಫ್ ಆಡಲಿದೆ. ಪ್ರಸ್ತುತ ಅವರು ಪಾಯಿಂಟ್ಸ್​ ಟೇಬಲ್​ನಲ್ಲಿ ಕೆಳಗಿದ್ದರೂ, ಅಂತಿಮವಾಗಿ ಟಾಪ್-4 ಗೆ ಎಂಟ್ರಿ ಕೊಡಲಿದೆ ಎಂದು ಹರ್ಭಜನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

6 / 8
4- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡ ಕೂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಅಗ್ರ ನಾಲ್ಕರಲ್ಲಿ ಆರ್​ಸಿಬಿ 4ನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಸಲಿದೆ ಎಂದು ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

7 / 8
ಹರ್ಭಜನ್ ಸಿಂಗ್ ಹೆಸರಿಸಿರುವ ಈ ನಾಲ್ಕು ತಂಡಗಳ ಪ್ರಸ್ತುತ ಪಾಯಿಂಟ್ಸ್​ ಟೇಬಲ್​ನಲ್ಲಿನ (46 ಪಂದ್ಯಗಳ ಬಳಿಕ) ಸ್ಥಾನಗಳನ್ನು ನೋಡುವುದಾದರೆ...

8 / 8
ಗುಜರಾತ್ ಟೈಟಾನ್ಸ್ ತಂಡವು 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಸಿಎಸ್​ಕೆ ತಂಡವು 15 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಹಾಗೆಯೇ 10 ಅಂಕಗಳೊಂದಿಗೆ ಆರ್​ಸಿಬಿ ತಂಡವು 6ನೇ ಸ್ಥಾನ ಅಲಂಕರಿಸಿದೆ. ಇವುಗಳಲ್ಲಿ ಯಾವ ತಂಡಗಳು ಪ್ಲೇಆಫ್ ಪ್ರವೇಶಿಸಲಿದೆ ಕಾದು ನೋಡಬೇಕಿದೆ.

Published On - 11:22 pm, Sat, 13 May 23