AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSL ನಲ್ಲಿ ಲಕ್ಷ ಪಡೆದ ಆಟಗಾರ IPL ನಲ್ಲಿ ಕೋಟ್ಯಧಿಪತಿ

IPL 2023, Harry Brook: ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅಬ್ಬರಿಸಿದ್ದರು. ಇಂಗ್ಲೆಂಡ್ ಪರ ಕೇವಲ 4 ಟೆಸ್ಟ್​ ಪಂದ್ಯಗಳಲ್ಲಿ 6 ಇನಿಂಗ್ಸ್ ಆಡಿರುವ 23 ರ ಹರೆಯದ ಬಲಗೈ ಬ್ಯಾಟರ್ ಕೇವಲ 521 ಎಸೆತಗಳನ್ನು ಎದುರಿಸಿ 480 ರನ್​ ಬಾರಿಸಿದ್ದಾರೆ.

TV9 Web
| Edited By: |

Updated on:Dec 25, 2022 | 6:33 PM

Share
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ ಐಪಿಎಲ್​ನಲ್ಲಿ ಅವಕಾಶ ಪಡೆಯುವ ಮೂಲಕ ಶ್ರೀಮಂತರಾಗಿರುವ ಆಟಗಾರರು ಒಬ್ಬಿಬ್ಬರಲ್ಲ. ಅನೇಕ ಆಟಗಾರರು ಐಪಿಎಲ್ ಮೂಲಕವೇ ಜೀವನ ಕಟ್ಟಿಕೊಂಡಿದ್ದಾರೆ. ಅದರಲ್ಲೂ ವಿದೇಶಿ ಆಟಗಾರರು ಕೂಡ ಐಪಿಎಲ್​ ಮೂಲಕವೇ ಆದಾಯಗಳಿಸಲು ಮುಂದಾಗುತ್ತಿದ್ದಾರೆ. ಹೀಗಾಗಿಯೇ ಈ ಬಾರಿ ಕೂಡ ಐಪಿಎಲ್ ಹರಾಜಿಗಾಗಿ 277 ವಿದೇಶಿ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರಲ್ಲಿ ಕೆಲವೇ ಕೆಲವು ಆಟಗಾರರ ಅದೃಷ್ಟು ಖುಲಾಯಿಸಿದೆ.

1 / 6
ಹೀಗೆ ಚೊಚ್ಚಲ ಎಂಟ್ರಿಯೊಂದಿಗೆ ಅದೃಷ್ಟ ಖುಲಾಯಿಸಿದ ಆಟಗಾರನ ಹೆಸರು ಹ್ಯಾರಿ ಬ್ರೂಕ್. ಇಂಗ್ಲೆಂಡ್​ನ ಈ ಹೊಡಿಬಡಿ ದಾಂಡಿಗನನ್ನು ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿಯು ಬರೋಬ್ಬರಿ 13.25 ಕೋಟಿ ರೂ.ಗೆ ಖರೀದಿಸಿದೆ.

2 / 6
ಆದರೆ ಹ್ಯಾರಿ ಬ್ರೂಕ್ ಲೀಗ್​ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಆದರೆ PSL ನಲ್ಲಿ ಸಿಗುತ್ತಿರುವ ಮೊತ್ತಕ್ಕಿಂತ 30 ಪಟ್ಟು ಹೆಚ್ಚು ಮೊತ್ತವನ್ನು ಒಂದೇ ಒಂದು ಐಪಿಎಲ್ ಬಿಡ್ಡಿಂಗ್ ಮೂಲಕ ಸಂಪಾದಿಸಿರುವುದು ಇಲ್ಲಿ ವಿಶೇಷ.

3 / 6
ಅಂದರೆ ಕಳೆದ ಕೆಲ ಸೀಸನ್​ಗಳಿಂದ ಪಾಕಿಸ್ತಾನ್ ಸೂಪರ್ ಲೀಗ್​ ಆಡುತ್ತಿರುವ ಹ್ಯಾರಿ ಬ್ರೂಕ್​ಗೆ ಪ್ರಸ್ತುತ ಸಿಗುತ್ತಿರುವುದು 50 ಸಾವಿರ ಡಾಲರ್. ಅಂದರೆ ಸುಮಾರು 41 ಲಕ್ಷ ರೂ. ಆದರೆ ಚೊಚ್ಚಲ ಬಾರಿಗೆ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡ ಬ್ರೂಕ್ ಕೋಟ್ಯಧಿಪತಿಯಾಗಿ ಹೊರಹೊಮ್ಮಿದ್ದಾರೆ.

4 / 6
ಈ ಬಾರಿಯ ಮಿನಿ ಹರಾಜಿನಲ್ಲಿ ಹ್ಯಾರಿ ಬ್ರೂಕ್​ರನ್ನು ಬರೋಬ್ಬರಿ 13 ಕೋಟಿ 25 ಲಕ್ಷ ರೂ. ನೀಡಿ ಎಸ್​ಆರ್​​ಹೆಚ್​ ತಂಡ ಖರೀದಿಸಿದೆ. ಅಂದರೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಸಿಗುವ ಮೊತ್ತಕ್ಕಿಂತ 12 ಕೋಟಿ 84 ಲಕ್ಷ ರೂ. ಅನ್ನು ಒಂದೇ ಸೀಸನ್​ ಮೂಲಕ ಬ್ರೂಕ್ ಪಡೆದುಕೊಂಡಿದ್ದಾರೆ. ಇದೇ ಕಾರಣದಿಂದಾಗಿಯೇ ಐಪಿಎಲ್​ ಅನ್ನು ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್ ಎನ್ನಲಾಗುತ್ತದೆ.

5 / 6
ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ಬ್ರೂಕ್ ಇತ್ತೀಚೆಗೆ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಅಬ್ಬರಿಸಿದ್ದರು. ಇಂಗ್ಲೆಂಡ್ ಪರ ಕೇವಲ 4 ಟೆಸ್ಟ್​ ಪಂದ್ಯಗಳಲ್ಲಿ 6 ಇನಿಂಗ್ಸ್ ಆಡಿರುವ 23 ರ ಹರೆಯದ ಬಲಗೈ ಬ್ಯಾಟರ್ ಕೇವಲ 521 ಎಸೆತಗಳನ್ನು ಎದುರಿಸಿ 480 ರನ್​ ಬಾರಿಸಿದ್ದಾರೆ. ಈ ವೇಳೆ 12 ಸಿಕ್ಸ್ ಹಾಗೂ 55 ಫೋರ್ ಸಿಡಿಸಿದ್ದರು. ಈ ಸ್ಪೋಟಕ ಇನಿಂಗ್ಸ್​ ಪರಿಣಾಮ ಇದೀಗ ಹ್ಯಾರಿ ಬ್ರೂಕ್​ಗೆ ಚೊಚ್ಚಲ ಬಾರಿ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿದೆ.

6 / 6

Published On - 6:31 pm, Sun, 25 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ