IPL 2023: ಮೊದಲ ಪಂದ್ಯಕ್ಕೆ 8 ಆಟಗಾರರು ಅಲಭ್ಯ..!

| Updated By: ಝಾಹಿರ್ ಯೂಸುಫ್

Updated on: Mar 28, 2023 | 3:06 PM

IPL 2023 Kannada: ಸೌತ್ ಆಫ್ರಿಕಾದ ಆಟಗಾರರು ಐಪಿಎಲ್ ತಂಡಗಳನ್ನು ಕೂಡಿಕೊಳ್ಳುವುದು ತಡವಾಗಲಿದೆ. ಐಪಿಎಲ್​ನ 6 ತಂಡಗಳ ಒಟ್ಟು 8 ಆಟಗಾರರು ಮೊದಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

1 / 11
IPL 2023: ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಆರಂಭಕ್ಕೆ ಇನ್ನು ಕೇವಲ 2 ದಿನಗಳು ಮಾತ್ರ ಉಳಿದಿವೆ. ಮಾರ್ಚ್ 31 ರಿಂದ ಶುರುವಾಗಲಿರುವ ಐಪಿಎಲ್ ಸೀಸನ್​ 16 ರ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಕೆಲ ಆಟಗಾರರು ಗೈರಾಗಲಿದ್ದಾರೆ.

2 / 11
ಸೌತ್ ಆಫ್ರಿಕಾದ ಆಟಗಾರರು ಐಪಿಎಲ್ ತಂಡಗಳನ್ನು ಕೂಡಿಕೊಳ್ಳುವುದು ತಡವಾಗಲಿದೆ. ಐಪಿಎಲ್​ನ 6 ತಂಡಗಳ ಒಟ್ಟು 8 ಆಟಗಾರರು ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

3 / 11
ಮಾರ್ಚ್ 31 ರಿಂದ ಸೌತ್ ಆಫ್ರಿಕಾ ಹಾಗೂ ನೆದರ್​ಲ್ಯಾಂಡ್ಸ್​ ನಡುವೆ ಏಕದಿನ ಸರಣಿ ಶುರುವಾಗಲಿದ್ದು, ಈ ಸರಣಿಯು ಏಪ್ರಿಲ್ 2 ರಂದು ಕೊನೆಗೊಳ್ಳಲಿದೆ. ಆ ಬಳಿಕವಷ್ಟೇ ಸೌತ್ ಆಫ್ರಿಕಾ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

4 / 11
ಇದರಿಂದ ಸಂಕಷ್ಟಕ್ಕೆ ಸಿಲುಕಲಿರುವುದು ಸನ್​ರೈಸರ್ಸ್ ಹೈದರಾಬಾದ್ ತಂಡ. ಏಕೆಂದರೆ ಎಸ್​ಆರ್​ಹೆಚ್​ ತಂಡದಲ್ಲಿ ನಾಯಕ ಐಡೆನ್ ಮಾರ್ಕ್ರಾಮ್ ಸೇರಿದಂತೆ ಮೂವರು ಸೌತ್ ಆಫ್ರಿಕಾ ಆಟಗಾರರಿದ್ದಾರೆ. ಹೀಗಾಗಿ ತಂಡದ ಪ್ಲೇಯಿಂಗ್ ಇಲೆವೆನ್​ ಸಂಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ.

5 / 11
ಅದರಂತೆ ಐಪಿಎಲ್​ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯಲಿರುವ ಸೌತ್ ಆಫ್ರಿಕಾ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

6 / 11
ಡೇವಿಡ್ ಮಿಲ್ಲರ್- ಗುಜರಾತ್ ಟೈಟಾನ್ಸ್‌ ತಂಡದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಇತ್ತ ಗುಜರಾತ್ ಟೈಟಾನ್ಸ್ ಹಾಗೂ ಸಿಎಸ್​ಕೆ ಐಪಿಎಲ್​ನ ಉದ್ಘಾಟನಾ ಪಂದ್ಯವಾಡಲಿದ್ದು, ಈ ಪಂದ್ಯದಿಂದ ಚಾಂಪಿಯನ್ ಆಟಗಾರ ಹೊರಗುಳಿಯುತ್ತಿರುವುದು ಗುಜರಾತ್ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಬಹುದು.

7 / 11
ಕ್ವಿಂಟನ್ ಡಿಕಾಕ್- ಏಪ್ರಿಲ್ 1 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಆದರೆ ಈ ಪಂದ್ಯಕ್ಕೆ ಲಕ್ನೋ ತಂಡದ ಸ್ಟಾರ್ ಆಟಗಾರ ಕ್ವಿಂಟನ್ ಡಿಕಾಕ್ ಅಲಭ್ಯರಾಗಿದ್ದಾರೆ.

8 / 11
ಮಾರ್ಕ್ರಾಮ್, ಯಾನ್ಸನ್, ಕ್ಲಾಸೆನ್: ಸನ್​ರೈಸರ್ಸ್ ಹೈದರಾಬಾದ್ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೆ ಎಸ್​ಆರ್​ಹೆಚ್​ ತಂಡದಲ್ಲಿರುವ ಸೌತ್ ಆಫ್ರಿಕಾ ಕ್ರಿಕೆಟಿಗರಾದ ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ ಹಾಗೂ ಮಾರ್ಕೊ ಯಾನ್ಸನ್ ಅಲಭ್ಯರಾಗಿದ್ದಾರೆ.

9 / 11
ಅನ್ರಿಕ್ ನೋಕಿಯಾ: ಏಪ್ರಿಲ್ 1 ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯಾ ಅಲಭ್ಯರಾಗಿದ್ದಾರೆ.

10 / 11
ಕಗಿಸೊ ರಬಾಡ: ಏಪ್ರಿಲ್ 1 ರಂದು ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಕಗಿಸೊ ರಬಾಡ ಕೂಡ ಪಂಜಾಬ್ ಕಿಂಗ್ಸ್ ತಂಡವನ್ನು ಕೂಡಿಕೊಳ್ಳುವುದಿಲ್ಲ.

11 / 11
ಸಿಸಂದ ಮಗಲಾ: ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಚೈನ್ನೈ ಸೂಪರ್ ಕಿಂಗ್ಸ್ ತಂಡದ ಸೌತ್ ಆಫ್ರಿಕಾ ವೇಗಿ ಸಿಸಂದ ಮಗಲಾ ಕೂಡ ಅಲಭ್ಯರಾಗಲಿದ್ದಾರೆ. ಅಂದರೆ ಏಪ್ರಿಲ್ 3 ರ ನಂತರ ಸೌತ್ ಆಫ್ರಿಕಾ ಆಟಗಾರರು ಐಪಿಎಲ್​​ನಲ್ಲಿ ಕಣಕ್ಕಿಳಿಯಲಿದ್ದಾರೆ.