IPL 2023: ಯುವ ಆಟಗಾರನ ಮೇಲೆ 3 ಫ್ರಾಂಚೈಸಿಗಳ ಕಣ್ಣು..!

| Updated By: ಝಾಹಿರ್ ಯೂಸುಫ್

Updated on: Nov 28, 2022 | 10:35 PM

IPL 2023 Kannada: IPL 2023 ರ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ 300 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

1 / 6
ಐಪಿಎಲ್​ ಮಿನಿ ಹರಾಜು ಸಿದ್ಧತೆಗಳು ಶುರುವಾದ ಬೆನ್ನಲ್ಲೇ ಇದೀಗ ಕೆಲ ತಂಡಗಳು ಯುವ ಆಟಗಾರರನ್ನು ಟ್ರಯಲ್ಸ್​ಗೆ ಕರೆದಿದೆ. ಹೀಗೆ ಟ್ರಯಲ್ಸ್​ಗೆ ಹಾಜರಾದ ಆಟಗಾರರಲ್ಲಿ 24 ವರ್ಷದ ರೋಹನ್ ಕುನ್ನುಮಲ್ ಕೂಡ ಒಬ್ಬರು. ಅದು ಕೂಡ ಮೂರು ಫ್ರಾಂಚೈಸಿಗಳು ಕೇರಳದ ಯುವ ಬ್ಯಾಟ್ಸ್​ಮನ್​​ಗೆ ಬುಲಾವ್ ನೀಡಿರುವುದು ವಿಶೇಷ.

2 / 6
ಭರ್ಜರಿ ಫಾರ್ಮ್​ನಲ್ಲಿರುವ ರೋಹನ್ ಈ ವರ್ಷದ ರಣಜಿ ಟ್ರೋಫಿಯಲ್ಲಿ ಬ್ಯಾಕ್-ಟು-ಬ್ಯಾಕ್ 3 ಶತಕಗಳನ್ನು ಸಿಡಿಸಿದ್ದರು. ಹಾಗೆಯೇ ದುಲೀಪ್ ಟ್ರೋಫಿಯಲ್ಲೂ ಭರ್ಜರಿ ಶತಕ ಬಾರಿಸಿದ್ದರು. ಹೀಗಾಗಿಯೇ ಕೇರಳದ ಯುವ ಆಟಗಾರನ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿದೆ.

3 / 6
ಅದರಲ್ಲೂ ಕೇರಳ ತಂಡದ ನಾಯಕ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್  ತಂಡದ ಟ್ರಯಲ್ಸ್​ಗೆ ರೋಹನ್​ ಅವರನ್ನು ಶಿಫಾರಸ್ಸು ಮಾಡಿದ್ದಾರೆ. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳೂ ಕೂಡ ಕೇರಳದ ಯುವ ಬ್ಯಾಟ್ಸ್​ಮನ್​ನನ್ನು ಟ್ರಯಲ್ಸ್​ನಲ್ಲಿ ಪರಿಶೀಲಿಸಿದೆ.

4 / 6
ಸದ್ಯ ಮೂರು ತಂಡಗಳಲ್ಲಿ ಟ್ರಯಲ್ಸ್ ಮುಗಿಸಿರುವ ರೋಹನ್ ಅವರನ್ನು ಇನ್ನುಳಿದ ಕೆಲ ತಂಡಗಳೂ ಕೂಡ ಪರಿಶೀಲನೆಗೆ ಹಾಜರಾಗುವಂತೆ ತಿಳಿಸಿದೆ. ಆದರೆ ರಾಜ್ಯ ತಂಡದ ಪರ ಕಣಕ್ಕಿಳಿಯುತ್ತಿದ್ದ ಕಾರಣ ಎಲ್ಲಾ ಟ್ರಯಲ್ಸ್​ನಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ ರೋಹನ್ ಕುನ್ನುಮ್ಮಲ್.

5 / 6
ಸದ್ಯ ಟೀಮ್ ಇಂಡಿಯಾ ಎ ತಂಡದ ಭಾಗವಾಗಿರುವ ರೋಹನ್ ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಕೆಲ ಫ್ರಾಂಚೈಸಿಗಳು ಪ್ರಭಾವಿತರಾಗಿದ್ದು, ಅದರಲ್ಲೂ ಸಂಜು ಸ್ಯಾಮ್ಸನ್​​ ನಾಯಕತ್ವದ ರಾಜಸ್ಥಾನ್ ರಾಯಲ್ಸ್​ ಕೇರಳದ ಆಟಗಾರನನ್ನು ಹರಾಜಿನಲ್ಲಿ ಖರೀದಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

6 / 6
IPL 2023 ರ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ 300 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ 10 ತಂಡಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಮಾತ್ರ ಆಯ್ಕೆ ನಡೆಯಲಿದೆ. ಹೀಗಾಗಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಈ ಬಾರಿ ಅವಕಾಶ ಸಿಗಲಿದೆ.

Published On - 10:03 pm, Mon, 28 November 22