Riyan Parag: 12 ಸಿಕ್ಸ್, 12 ಫೋರ್: ರಿಯಾನ್ ಪರಾಗ್ ಸಿಡಿಲಬ್ಬರದ ಶತಕ..!

TV9kannada Web Team

TV9kannada Web Team | Edited By: Zahir PY

Updated on: Nov 28, 2022 | 10:54 PM

Riyan Parag: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ ರಿಯಾನ್ ಪರಾಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Nov 28, 2022 | 10:54 PM
ವಿಜಯ್ ಹಜಾರೆ ಟೂರ್ನಿಯ ಮೂರನೇ ಕ್ವಾರ್ಟರ್​ ಫೈನಲ್​ನಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಅಸ್ಸಾಂ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ರುವಾರಿ ರಿಯಾನ್ ಪರಾಗ್.

1 / 6
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಸ್ಸಾಂ ತಂಡದ ನಾಯಕ ಕುನಾಲ್ ಸೈಕಿಯಾ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜಮ್ಮು-ಕಾಶ್ಮೀರದ ಶುಭಂ ಖುಜುರಿಯಾ (120) ಹಾಗೂ ಹೆನಾನ್ ನಜೀರ್ (124) ಭರ್ಜರಿ ಶತಕಗಳನ್ನು ಸಿಡಿಸಿದರು. ಅಲ್ಲದೆ 50 ಓವರ್​ಗಳಲ್ಲಿ ಜಮ್ಮು-ಕಾಶ್ಮೀರ ತಂಡವು 7 ವಿಕೆಟ್​ ನಷ್ಟಕ್ಕೆ 350 ರನ್​ ಕಲೆಹಾಕಿತು.

2 / 6
ಈ ಬೃಹತ್ ಗುರಿ ಬೆನ್ನತ್ತಿದ ಅಸ್ಸಾಂ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಶವ್ ದಾಸ್ (114) ಶತಕ ಬಾರಿಸುವ ಮೂಲಕ ಆಸರೆಯಾದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಯಾನ್ ಪರಾಗ್ ಅಕ್ಷರಶಃ ಅಬ್ಬರಿಸಿದರು.

3 / 6
ಮೂರನೇ ವಿಕೆಟ್‌ಗೆ ರಿಶವ್ ಅವರೊಂದಿಗೆ 217 ಎಸೆತಗಳಲ್ಲಿ 277 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಡುವ ಭರವಸೆ ಮೂಡಿಸಿದರು. ಅಷ್ಟೇ ಅಲ್ಲದೆ ಕೇವಲ 116 ಎಸೆತಗಳಲ್ಲಿ 12 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳನ್ನು ಸಿಡಿಸುವ ಮೂಲಕ ರಿಯಾನ್ ಪರಾಗ್ 174 ರನ್​ ಚಚ್ಚಿದರು.

4 / 6
ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ರಿಯಾನ್ ಪರಾಗ್ (174) ವಿಕೆಟ್ ಒಪ್ಪಿಸಿದರು. ಆದರೆ ಅಷ್ಟರಲ್ಲಾಗಲೇ 42.2 ಓವರ್​ಗಳಲ್ಲಿ ತಂಡದ ಮೊತ್ತವನ್ನು 322 ಕ್ಕೆ ತಂದು ನಿಲ್ಲಿಸಿದ್ದರು. ಅಂತಿಮ 8 ಓವರ್​ಗಳಲ್ಲಿ ಸುಲಭ ಗುರಿ ಪಡೆದ ಅಸ್ಸಾಂ ತಂಡವು 46.1 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 354 ರನ್​ ಕಲೆಹಾಕಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

5 / 6
ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದ ರಿಯಾನ್ ಪರಾಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಸದ್ಯ ಭರ್ಜರಿ ಗೆಲುವಿನೊಂದಿಗೆ ಸೆಮಿಫೈನಲ್​ಗೆ ಎಂಟ್ರಿ ಕೊಟ್ಟಿರುವ ಅಸ್ಸಾಂ ತಂಡವು ನಿರ್ಣಾಯಕ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

6 / 6

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada