IPL 2023: 7 ಭರ್ಜರಿ ಸಿಕ್ಸ್, 2 ಫೋರ್​: ಮೊದಲ ಪಂದ್ಯದಲ್ಲೇ ದಾಖಲೆ ಬರೆದ ಮೇಯರ್ಸ್

| Updated By: ಝಾಹಿರ್ ಯೂಸುಫ್

Updated on: Apr 02, 2023 | 2:53 PM

IPL 2023 Kannada News: ಇದೇ ಮೊದಲ ಬಾರಿಗೆ ಐಪಿಎಲ್​ ಪಂದ್ಯವಾಡಿದ ಮೇಯರ್ಸ್ ಕೇವಲ 38 ಎಸೆತಗಳಲ್ಲಿ 73 ರನ್ ಸಿಡಿಸುವ ಮೂಲಕ ಶುಭಾರಂಭ ಮಾಡಿದ್ದಾರೆ.

1 / 6
IPL 2023: ಇಂಡಿಯನ್ ಪ್ರೀಮಿಯರ್ ಲೀಗ್​ನ 3ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮೇಯರ್ಸ್ ಕೆಕೆಆರ್ ತಂಡದ ಬೌಲರ್​ಗಳ ಬೆಂಡೆತ್ತಿದರು.

2 / 6
ಈ ಆಕ್ರಮಣಕಾರಿ ಬ್ಯಾಟಿಂಗ್ ನಡುವೆ ಕೈಲ್ ಮೇಯರ್ಸ್ 7 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ ಸಿಡಿಸಿದ್ದರು. ಅಲ್ಲದೆ ಕೇವಲ 38 ಎಸೆತಗಳಲ್ಲಿ 73 ರನ್​ ಬಾರಿಸಿ ಅಕ್ಷರ್ ಪಟೇಲ್​ಗೆ ವಿಕೆಟ್ ಒಪ್ಪಿಸಿದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಕೈಲ್ ಮೇಯರ್ಸ್ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

3 / 6
ಹೌದು, ಐಪಿಎಲ್​​ನ ಚೊಚ್ಚಲ ಪಂದ್ಯದಲ್ಲಿ ಅತ್ಯಧಿಕ ರನ್​ ಬಾರಿಸಿದ 4ನೇ ಬ್ಯಾಟರ್ ಎಂಬ ದಾಖಲೆ ಇದೀಗ ಕೈಲ್​ ಮೇಯರ್ಸ್ ಪಾಲಾಗಿದೆ. ಅಲ್ಲದೆ 2008 ರ ಐಪಿಎಲ್​ ಬಳಿಕ ಪಾದರ್ಪಣೆ ಮಾಡಿದ ಪಂದ್ಯದಲ್ಲಿ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಆಟಗಾರ ಎನಿಸಿಕೊಂಡಿದ್ದಾರೆ.

4 / 6
ಇನ್ನು ಐಪಿಎಲ್​ನ ಪಾದರ್ಪಣೆ ಪಂದ್ಯದಲ್ಲಿ ಅತ್ಯಧಿಕ ರನ್​ಗಳಿಸಿದ ದಾಖಲೆ ಬ್ರೆಂಡನ್ ಮೆಕಲಂ ಹೆಸರಿನಲ್ಲಿದೆ. 2008 ರ ಐಪಿಎಲ್​ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಕೆಕೆಆರ್ ಪರ ಕಣಕ್ಕಿಳಿದಿದ್ದ ಮೆಕಲಂ ಅಜೇಯ 158 ರನ್ ಬಾರಿಸಿದ ಅಬ್ಬರಿಸಿದ್ದರು. ಇದಾದ ಬಳಿಕ 2008 ರಲ್ಲೇ ಮೈಕಲ್ ಹಸ್ಸಿ (116), ಶಾನ್ ಮಾರ್ಷ್ (84) ಚೊಚ್ಚಲ ಪಂದ್ಯದಲ್ಲೇ ಸ್ಪೋಟಕ ಇನಿಂಗ್ಸ್ ಆಡಿದ್ದರು.

5 / 6
ಆದರೆ 2008 ರ ಐಪಿಎಲ್ ನಂತರ ಬೇರೆ ಯಾವುದೇ ಬ್ಯಾಟರ್​ನಿಂದ ಪಾದರ್ಪಣೆ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್ ಮೂಡಿಬಂದಿರಲಿಲ್ಲ. ಇದೀಗ ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೈಲ್ ಮೇಯರ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

6 / 6
ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್​ ಪಂದ್ಯವಾಡಿದ ಮೇಯರ್ಸ್ ಕೇವಲ 38 ಎಸೆತಗಳಲ್ಲಿ 73 ರನ್ ಸಿಡಿಸುವ ಮೂಲಕ ಶುಭಾರಂಭ ಮಾಡಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ವೆಸ್ಟ್ ಇಂಡೀಸ್ ದಾಂಡಿಗನಿಂದ ಮತ್ತಷ್ಟು ಸ್ಪೋಟಕ ಇನಿಂಗ್ಸ್ ನಿರೀಕ್ಷಿಸಬಹುದು.