IPL 2023: ಐಪಿಎಲ್​ನಲ್ಲಿ ವಿಶೇಷ ದಾಖಲೆ ನಿರ್ಮಾಣ..!

| Updated By: ಝಾಹಿರ್ ಯೂಸುಫ್

Updated on: Apr 17, 2023 | 6:30 PM

IPL 2023 Kannada: ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ವೆಂಕಟೇಶ್ ಅಯ್ಯರ್ ಕೆಕೆಆರ್ ಪರ ಸೆಂಚುರಿಸಿ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡರು.

1 / 7
IPL 2023 MI vs KKR: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 22ನೇ ಪಂದ್ಯವು ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು. ಅದರಲ್ಲೂ ಈ ಪಂದ್ಯದ ಮೂಲಕ ಐಪಿಎಲ್ ಇತಿಹಾಸದಲ್ಲೇ ವಿಭಿನ್ನ ದಾಖಲೆಯೊಂದು ನಿರ್ಮಾಣವಾಗಿದ್ದು ವಿಶೇಷ.

2 / 7
ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ವೆಂಕಟೇಶ್ ಅಯ್ಯರ್ ಕೆಕೆಆರ್ ಪರ ಸೆಂಚುರಿಸಿ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡರು. ಅದರಲ್ಲೂ 15 ವರ್ಷಗಳ ಬಳಿಕ ಕೊಲ್ಕತ್ತಾ ಪರ ಶತಕ ಮೂಡಿಬಂದಿರುವುದು ವಿಶೇಷ.

3 / 7
ಇನ್ನು ಈ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದರು. ಇದರೊಂದಿಗೆ ಐಪಿಎಲ್​ ಆಡಿದ ಮೊದಲ ಅಪ್ಪ-ಮಗ ಎಂಬ ಕೀರ್ತಿಗೆ ಸಚಿನ್ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್ ಭಾಜನರಾದರು.

4 / 7
ವಿಶೇಷ ಎಂದರೆ ಈ ತಂದೆ-ಮಗ ಇಬ್ಬರೂ ಮುಂಬೈ ಇಂಡಿಯನ್ಸ್ ಪರವೇ ಪಾದಾರ್ಪಣೆ ಮಾಡಿರುವುದು ಮತ್ತೊಂದು ವಿಶೇಷ. ಇದರೊಂದಿಗೆ ಐಪಿಎಲ್​ನಲ್ಲಿ ಕಾಣಿಸಿಕೊಂಡ ಮೊದಲ ಅಪ್ಪ-ಮಗ ಜೋಡಿಯಾಗಿ ಸಚಿನ್-ಅರ್ಜುನ್ ಗುರುತಿಸಿಕೊಂಡಿದ್ದಾರೆ.

5 / 7
ಇನ್ನು ಈ ಪಂದ್ಯದ ಮೂಲಕ ಮುಂಬೈ ಇಂಡಿಯನ್ಸ್ ಪರ ಡುವಾನ್ ಯಾನ್ಸೆನ್ ಕಣಕ್ಕಿಳಿದಿದ್ದರು. ಇದರೊಂದಿಗೆ ಐಪಿಎಲ್​ ಆಡಿದ ಮೊದಲ ಅವಳಿ ಸಹೋದರರು ಎಂಬ ದಾಖಲೆ ಯಾನ್ಸೆನ್ ಬ್ರದರ್ಸ್ ಪಾಲಾಯಿತು.

6 / 7
ಅಂದರೆ ಎಸ್​ಆರ್​ಹೆಚ್​ ಪರ ಆಡುತ್ತಿರುವ ಸೌತ್ ಆಫ್ರಿಕಾ ವೇಗಿ ಮಾರ್ಕೊ ಯಾನ್ಸೆನ್ ಅವರ ಸಹೋದರ ಡುವಾನ್ ಯಾನ್ಸೆನ್ ಇದೀಗ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ.

7 / 7
ಐಪಿಎಲ್​ನಲ್ಲಿ ಯೂಸುಫ್ ಪಠಾಣ್-ಇರ್ಫಾನ್ ಪಠಾಣ್, ಹಾರ್ದಿಕ್-ಕೃನಾಲ್, ಮೈಕೆಲ್ ಹಸ್ಸಿ-ಡೇವಿಡ್ ಹಸ್ಸಿ...ಹೀಗೆ ಹಲವು ಸಹೋದರರು ಕಣಕ್ಕಿಳಿದಿದ್ದರೂ, ಇದೇ ಮೊದಲ ಬಾರಿಗೆ ಇಬ್ಬರು ಅವಳಿ-ಜವಳಿ ಸಹೋದರರು ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಐಪಿಎಲ್ ಆಡಿದ ಮೊದಲ ಅವಳಿಗಳು ಎಂಬ ಹೆಗ್ಗಳಿಕೆ ಯಾನ್ಸೆನ್ ಬ್ರದರ್ಸ್ ಪಾಲಾಗಿದೆ.