IPL 2023: ಸ್ಟಾರ್ ಆಲ್​ರೌಂಡರ್​ ತಂಡದಲ್ಲಿದ್ದರೂ ಕಣಕ್ಕಿಳಿಸದ RCB

| Updated By: ಝಾಹಿರ್ ಯೂಸುಫ್

Updated on: Apr 27, 2023 | 10:17 PM

IPL 2023 Kannada: ಅಗ್ರ ಕ್ರಮಾಂಕದ ಬ್ಯಾಟರ್​ಗಳಾದ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಉತ್ತಮ ಪ್ರದರ್ಶನ ನೀಡಿದರೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಸಂಪೂರ್ಣ ವಿಫಲರಾಗುತ್ತಿದ್ದಾರೆ.

1 / 9
IPL 2023: RCB ತಂಡವು ಐಪಿಎಲ್​ನಲ್ಲಿ ಈಗಾಗಲೇ 8 ಪಂದ್ಯಗಳನ್ನಾಡಿದೆ. ಈ ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿದರೆ, ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಲ್ಲಿ ಆರ್​ಸಿಬಿ ಸೋಲಿಗೆ ಮುಖ್ಯ ಕಾರಣವಾಗಿರುವುದು ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯ.

2 / 9
ಅಗ್ರ ಕ್ರಮಾಂಕದ ಬ್ಯಾಟರ್​ಗಳಾದ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಉತ್ತಮ ಪ್ರದರ್ಶನ ನೀಡಿದರೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಸಂಪೂರ್ಣ ವಿಫಲರಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಆಡಿರುವ 8 ಪಂದ್ಯಗಳಲ್ಲಿ ಆರ್​ಸಿಬಿ ತಂಡ ಮಿಡಲ್ ಆರ್ಡರ್ ಬ್ಯಾಟರ್​ಗಳು ಕಲೆಹಾಕಿದ ರನ್​ಗಳು.

3 / 9
ಇಲ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಮಹಿಪಾಲ್ ಲೋಮ್ರೊರ್ ಇದುವರೆಗೆ ಕೇವಲ 75 ರನ್​ ಕಲೆಹಾಕಿದರೆ, ಫಿನಿಶರ್ ಎನಿಸಿಕೊಂಡಿರುವ ದಿನೇಶ್ ಕಾರ್ತಿಕ್ ಇದುವರೆಗೆ 83 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹಾಗೆಯೇ ಆಲ್​ರೌಂಡರ್​ ಶಹಬಾಝ್ ಅಹ್ಮದ್ ಕೇವಲ 42 ರನ್ ಗಳಿಸಿದ್ದಾರೆ. ಇನ್ನು  ಸುಯಶ್ ಪ್ರಭುದೇಸಾಯಿ ಇದುವರೆಗೆ ಕಲೆಹಾಕಿರುವುದು ಕೇವಲ 29 ರನ್ ಮಾತ್ರ. ಇದಲ್ಲದೆ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದಿರುವ ಅನೂಜ್ ರಾವತ್ 3 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 16 ರನ್ ಅಷ್ಟೇ.

4 / 9
ಇನ್ನು 5 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವನಿಂದು ಹಸರಂಗ ಕಡೆಯಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಏಕೆಂದರೆ ಹಸರಂಗ ಬೌಲಿಂಗ್​ನಲ್ಲಿ 6 ವಿಕೆಟ್ ಪಡೆದರೆ, ಬ್ಯಾಟಿಂಗ್​ನಲ್ಲಿ ಕೇವಲ 13 ರನ್​ ಮಾತ್ರ ಕಲೆಹಾಕಿದ್ದಾರೆ. ಅಂದರೆ ಆಲ್​ರೌಂಡರ್ ಪ್ರದರ್ಶನ ನೀಡುವಲ್ಲಿ ಲಂಕಾ ಸ್ಪಿನ್ನರ್ ಸಂಪೂರ್ಣ ವಿಫಲರಾಗಿದ್ದಾರೆ ಎನ್ನಬಹುದು.

5 / 9
ಇತ್ತ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಆಟಗಾರನಾಗಿ ಮೈಕೆಲ್ ಬ್ರೇಸ್​ವೆಲ್ ಇದ್ದರೂ ಆರ್​ಸಿಬಿ ಅವಕಾಶ ನೀಡಿಲ್ಲ ಎಂಬುದೇ ಅಚ್ಚರಿ. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ಬ್ರೇಸ್​ವೆಲ್ 2 ವಿಕೆಟ್ ಪಡೆದಿದ್ದರು. ಅಲ್ಲದೆ ಒಂದು ಬಾರಿ ಬ್ಯಾಟ್ ಬೀಸಿ 19 ರನ್​ ಗಳಿಸಿದ್ದರು.

6 / 9
ಆದರೆ ವನಿಂದು ಹಸರಂಗ ಆಗಮನದ ಬೆನ್ನಲ್ಲೇ ಮೈಕೆಲ್ ಬ್ರೇಸ್​ವೆಲ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಲಾಯಿತು. ಇತ್ತ ಆರ್​ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಸತತ ವೈಫಲ್ಯ ಹೊಂದುತ್ತಿದ್ದರೂ, ಅತ್ಯುತ್ತಮ ಸ್ಪೋಟಕ ಬ್ಯಾಟ್ಸ್​ಮನ್ ಎನಿಸಿಕೊಂಡಿರುವ ಬ್ರೇಸ್​ವೆಲ್​ಗೆ ಮಾತ್ರ ಅವಕಾಶ ನೀಡಿರಲಿಲ್ಲ.

7 / 9
ಅದರಲ್ಲೂ ಚಿನ್ನಸ್ವಾಮಿ ಮೈದಾನವು ಬ್ಯಾಟ್ಸ್​ಮನ್​ಗಳ ಸ್ವರ್ಗ. ಇಲ್ಲೂ ಕೂಡ ಆರ್​ಸಿಬಿ ವನಿಂದು ಹಸರಂಗ ಹಾಗೂ ಡೇವಿಡ್ ವಿಲ್ಲಿಯನ್ನು ಕಣಕ್ಕಿಳಿಸಿ ಹೊಡಿಬಡಿ ದಾಂಡಿಗ ಎನಿಸಿಕೊಂಡಿರುವ ಬ್ರೇಸ್​ವೆಲ್​ರನ್ನು ಹೊರಗಿಟ್ಟಿರುವುದೇ ಅಚ್ಚರಿ.

8 / 9
ಇಲ್ಲಿ ಆರ್​ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ವಿಫಲರಾಗುತ್ತಿದ್ದ ಕಾರಣ ಬ್ಯಾಟಿಂಗ್ ಆಲ್​ರೌಂಡರ್ ಎನಿಸಿಕೊಂಡಿರುವ ಬ್ರೇಸ್​ವೆಲ್ ಉತ್ತಮ ಆಯ್ಕೆಯಾಗಿದ್ದರು. ಅಲ್ಲದೆ ಅವರನ್ನು ಪಾರ್ಟ್ ಟೈಮ್ ಬೌಲರ್ ಆಗಿಯೂ ಕೂಡ ಬಳಸಿಕೊಳ್ಳಬಹುದಿತ್ತು. ಅಷ್ಟೇ ಅಲ್ಲದೆ ಮ್ಯಾಕ್ಸ್​ವೆಲ್ ಅವರನ್ನು ಸಹ ಹೆಚ್ಚುವರಿ ಸ್ಪಿನ್ನರ್ ಆಗಿ ಬಳಸಿಕೊಳ್ಳುವ ಉತ್ತಮ ಅವಕಾಶವಿತ್ತು.

9 / 9
ಇದಾಗ್ಯೂ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಇಬ್ಬರು ಬೌಲಿಂಗ್ ಆಲ್​ರೌಂಡರ್​ಗಳನ್ನು ಕಣಕ್ಕಿಳಿಸಿ ಚೇಸಿಂಗ್​ಗೆ ಮುಂದಾಗಿರುವುದೇ ಅಚ್ಚರಿ. ಒಟ್ಟಿನಲ್ಲಿ ಮೈಕೆಲ್ ಬ್ರೇಸ್​ವೆಲ್​ನಂತಹ ಸ್ಪೋಟಕ ಬ್ಯಾಟರ್ ತಂಡದಲ್ಲಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸರಿಯಾಗಿ ಬಳಸಿಕೊಳ್ಳದಿರುವುದು ವಿಪರ್ಯಾಸವೇ ಸರಿ.

Published On - 10:10 pm, Thu, 27 April 23