IPL 2023: CSK ಅಬ್ಬರಕ್ಕೆ RCB ದಾಖಲೆ ಧೂಳೀಪಟ

Edited By:

Updated on: Apr 30, 2023 | 7:23 PM

IPL 2023 Kannada: ಐಪಿಎಲ್​ನ 41ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ಪರ ಡೆವೊನ್ ಕಾನ್ವೆ 52 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್​ನೊಂದಿಗೆ ಅಜೇಯ 92 ರನ್ ಬಾರಿಸಿದರು.

1 / 6
IPL 2023: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಬ್ಬರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದಿದೆ. ಅದು ಕೂಡ ತನ್ನ ಸಾಂಪ್ರದಾಯಿಕ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

IPL 2023: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಅಬ್ಬರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್​ನಲ್ಲಿ ಹೊಸ ಇತಿಹಾಸ ಬರೆದಿದೆ. ಅದು ಕೂಡ ತನ್ನ ಸಾಂಪ್ರದಾಯಿಕ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

2 / 6

ಐಪಿಎಲ್​ನ 41ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ಪರ ಡೆವೊನ್ ಕಾನ್ವೆ 52 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 16 ಫೋರ್​ನೊಂದಿಗೆ ಅಜೇಯ 92 ರನ್ ಬಾರಿಸಿದರು. ಪರಿಣಾಮ ಸಿಎಸ್​ಕೆ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು. ಇದರೊಂದಿಗೆ ಸಿಎಸ್​ಕೆ ತಂಡವು ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

3 / 6

ಹೌದು, ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಬಾರಿ 200 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್​ಗಳಿಸಿದ ವಿಶೇಷ ದಾಖಲೆಯೊಂದು ಆರ್​ಸಿಬಿ ಹೆಸರಿನಲ್ಲಿತ್ತು. ಆರ್​ಸಿಬಿ ಕಳೆದ 15 ಐಪಿಎಲ್​ ಸೀಸನ್​ಗಳಲ್ಲಿ ಒಟ್ಟು 22 ಬಾರಿ 200+ ಸ್ಕೋರ್​ಗಳಿಸಿತ್ತು.

4 / 6

ಅಲ್ಲದೆ ಈ ಬಾರಿ CSK ಹಾಗೂ LSG ವಿರುದ್ಧದ ಪಂದ್ಯಗಳಲ್ಲಿ 200 ಪ್ಲಸ್ ರನ್​ ಕಲೆಹಾಕುವ ಮೂಲಕ ಈ ದಾಖಲೆಯನ್ನು 24 ಕ್ಕೆ ಏರಿಸಿದ್ದರು. ಆದರೀಗ ಸಿಎಸ್​ಕೆ ತಂಡವು ಒಂದೇ ಸೀಸನ್​ನಲ್ಲಿ 4ನೇ ಬಾರಿ 200 ರನ್​ ಕಲೆಹಾಕಿ ಆರ್​ಸಿಬಿ ತಂಡದ ದಾಖಲೆಯನ್ನು ಹಿಂದಿಕ್ಕಿದೆ.

5 / 6

ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು LSG, RCB, KKR ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ 200 ಹಾಗೂ ಅದಕ್ಕಿಂತ ಹೆಚ್ಚಿನ ಸ್ಕೋರ್ ಕಲೆಹಾಕಿದೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಒಟ್ಟು 27 ಬಾರಿ 200 ರನ್​ ಕಲೆಹಾಕಿ ಆರ್​ಸಿಬಿ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

6 / 6

ಸದ್ಯ ಐಪಿಎಲ್​ನಲ್ಲಿ ಅತ್ಯಧಿಕ ಬಾರಿ 200 ರನ್​ಗಳಿಸಿದ ತಂಡಗಳ ಪಟ್ಟಿಯಲ್ಲಿ CSK (27) ತಂಡ ಅಗ್ರಸ್ಥಾನದಲ್ಲಿದ್ದರೆ, RCB (24) ದ್ವಿತೀಯ ಸ್ಥಾನದಲ್ಲಿದೆ. ಇನ್ನು KKR (19) ಹಾಗೂ PBKS (19) ತಂಡಗಳು ನಂತರದ ಸ್ಥಾನದಲ್ಲಿದೆ.

TV9 Web

TV9 Kannada

Read More
Loading...
Unable to load recommendations.
Follow Us