IPL 2023: ಹರಾಜಿನಲ್ಲಿ ಕೋಟಿ ಕೋಟಿ ಪಡೆದು ಆಟದಲ್ಲಿ ಮಂಕಾದ ಕೋಟಿ ವೀರರಿವರು

Updated on: May 17, 2023 | 6:37 PM

IPL 2023: ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ದುಬಾರಿ ಆಟಗಾರರೆನಿಸಿಕೊಂಡವರು ಕಳಪೆ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳು ಮತ್ತು ಫ್ರಾಂಚೈಸಿಗಳನ್ನು ನಿರಾಶೆಗೊಳಿಸಿದ್ದಾರೆ.

1 / 7
ಈ ಬಾರಿಯ ಐಪಿಎಲ್​ನಲ್ಲಿ ಅತ್ಯಂತ ದುಬಾರಿ ಆಟಗಾರರೆನಿಸಿಕೊಂಡವರು ಕಳಪೆ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳು ಮತ್ತು ಫ್ರಾಂಚೈಸಿಗಳನ್ನು ನಿರಾಶೆಗೊಳಿಸಿದ್ದಾರೆ. ಇದರಲ್ಲಿ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಸ್ಯಾಮ್ ಕರನ್‌ನಿಂದ ಹಿಡಿದು ಕೆಎಲ್ ರಾಹುಲ್‌ವರೆಗಿನ ದೊಡ್ಡ ಹೆಸರುಗಳು ಸೇರಿವೆ. ಈ ಸ್ಟಾರ್ ಆಟಗಾರರು ಕೋಟಿ ಕೋಟಿ ಸಂಭಾವನೆ ಪಡೆದರು ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ.

2 / 7
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿರುವ ಸ್ಯಾಮ್ ಕರನ್ ಈ ವರ್ಷ ಪಂಜಾಬ್ ಕಿಂಗ್ಸ್‌ ಪರ 12 ಪಂದ್ಯಗಳನ್ನಾಡಿದ್ದು 129.34 ಸ್ಟ್ರೈಕ್ ರೇಟ್ ಮತ್ತು 24 ರ ಸರಾಸರಿಯಲ್ಲಿ ಕೇವಲ 216 ರನ್ ಬಾರಿಸಿದ್ದಾರೆ. ಇದರೊಂದಿಗೆ ಬೌಲಿಂಗ್​​ನಲ್ಲಿ ಕೇವಲ ಏಳು ವಿಕೆಟ್‌ ಮಾತ್ರ ಪಡೆದಿದ್ದಾರೆ. ಪಂಜಾಬ್ ಕಿಂಗ್ಸ್ ಮಿನಿ ಹರಾಜಿನಲ್ಲಿ ಈ ಆಟಗಾರನನ್ನು ಬರೋಬ್ಬರಿ ದಾಖಲೆಯ 18.5 ಕೋಟಿಗೆ ಖರೀದಿಸಿತ್ತು.

3 / 7
ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 17.5 ಕೋಟಿ ರೂ.ಗೆ ಖರೀದಿಸಿತ್ತು.  ಅವರನ್ನು ಪೊಲಾರ್ಡ್ ಅವರ ಬದಲಿ ಆಟಗಾರ ಎಂದು ಪರಿಗಣಿಸಲಾಗಿತ್ತು. ಆದರೆ ಇದುವರೆಗೆ ಆಡಿದ ಪಂದ್ಯಗಳಲ್ಲಿ ಅವರಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.  12 ಪಂದ್ಯಗಳಲ್ಲಿ ಗ್ರೀನ್ 148 ಸ್ಟ್ರೈಕ್ ರೇಟ್‌ನಲ್ಲಿ 39.57 ರ ಸರಾಸರಿಯಲ್ಲಿ 277 ರನ್ ಗಳಿಸಿದ್ದಾರೆ ಮತ್ತು ಕೇವಲ ಆರು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದಾರೆ.

4 / 7
ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಹೆಸರೂ ಸೇರಿದೆ.  ಅವರನ್ನು ಲಕ್ನೋ ತಂಡ 17 ಕೋಟಿಗೆ ತಂಡಕ್ಕೆ ಸೇರಿಸಿಕೊಂಡಿದ್ದು, ತಂಡದ ನಾಯಕತ್ವವನ್ನೂ ಹಸ್ತಾಂತರಿಸಿತ್ತು. ಆದರೆ ಇಂಜುರಿಯಿಂದಾಗಿ ರಾಹುಲ್ ಲೀಗ್​ನಿಂದಲೇ ಹೊರಬಿದಿದ್ದಾರೆ. ಸದ್ಯ ಐಪಿಎಲ್ 2023 ರಲ್ಲಿ, ರಾಹುಲ್ 9 ಪಂದ್ಯಗಳಲ್ಲಿ 34.25 ಸರಾಸರಿ ಮತ್ತು 113 ಸ್ಟ್ರೈಕ್ ರೇಟ್‌ನಲ್ಲಿ 274 ರನ್ ಬಾರಿಸಿದ್ದರು.

5 / 7
ಐಪಿಎಲ್ 2023 ರ ಹರಾಜಿನಲ್ಲಿ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 16.25 ಕೋಟಿ ಬೆಲೆಗೆ ಖರೀದಿಸಿದೆ. ಆದರೆ ತಂಡದ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ಸ್ಟೋಕ್ಸ್ ವಿಫಲರಾಗಿದ್ದಾರೆ.  ಸ್ಟೋಕ್ಸ್ ಈ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದು, ಗುಜರಾತ್ ವಿರುದ್ಧ 7 ಮತ್ತು ಲಕ್ನೋ ವಿರುದ್ಧ 8 ರನ್ ಬಾರಿಸಿದ್ದರು.  ಲಕ್ನೋ ವಿರುದ್ಧ ಬೌಲಿಂಗ್ ಮಾಡಿದ್ದ ಸ್ಟೋಕ್ಸ್ ಒಂದು ಓವರ್‌ನಲ್ಲಿ 18 ರನ್ ಬಿಟ್ಟುಕೊಟ್ಟರು.  ಸದ್ಯ ಅವರು ಗಾಯಗೊಂಡಿದ್ದು, ಪ್ಲೇ ಆಫ್ ಸುತ್ತಿಗೆ ಮುನ್ನ ಇಂಗ್ಲೆಂಡ್‌ಗೆ ಮರಳಲಿದ್ದಾರೆ.

6 / 7
ಲಕ್ನೋ ಸೂಪರ್ ಜೈಂಟ್ಸ್ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ನಿಕೋಲಸ್ ಪೂರನ್​ರನ್ನು 16 ಕೋಟಿ ರೂ. ನೀಡಿ ಖರೀದಿಸಿತ್ತು.  ಪೂರನ್ ಆಡಿರುವ 11 ಪಂದ್ಯಗಳಲ್ಲಿ 24.80 ಸರಾಸರಿಯಲ್ಲಿ 248 ರನ್ ಬಾರಿಸಿದ್ದಾರೆ. ಆರ್​ಸಿಬಿ ವಿರುದ್ಧ ಅವರು 19 ಎಸೆತಗಳಲ್ಲಿ 62 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್‌ ಆಡಿದ್ದರು. ಇದರ ಹೊರತಾಗಿಯೂ ಅವರು ತಂಡದ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ.

7 / 7
ಈ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತ್ತು.  ಕೆಕೆಆರ್ ವಿರುದ್ಧ ಬ್ರೂಕ್ ಅವರ ಶತಕವನ್ನು ಹೊರತುಪಡಿಸಿ, ಅವರ ಪ್ರದರ್ಶನವು ನಿರಾಶಾದಾಯಕವಾಗಿದೆ. ಇದುವರೆಗೆ ಆಡಿದ 9 ಪಂದ್ಯಗಳಲ್ಲಿ ಹ್ಯಾರಿ 121.64 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 163 ರನ್ ಬಾರಿಸಿದ್ದಾರೆ.