IPL 2023: 2 ಭರ್ಜರಿ ಸಿಕ್ಸ್​ನೊಂದಿಗೆ ಹೊಸ ಮೈಲುಗಲ್ಲು ದಾಟಿದ ಎಂಎಸ್ ಧೋನಿ

| Updated By: ಝಾಹಿರ್ ಯೂಸುಫ್

Updated on: Apr 04, 2023 | 3:04 PM

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್​ನ ಇತಿಹಾಸದಲ್ಲೇ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

1 / 11
IPL 2023: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 12 ರನ್​ ಕಲೆಹಾಕುವ ಮೂಲಕ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಐಪಿಎಲ್​ ಟಾಪ್ ರನ್​ ಸರದಾರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ.

2 / 11
ಈ ಪಂದ್ಯದಲ್ಲಿ 20ನೇ ಓವರ್​ನಲ್ಲಿ ಕಣಕ್ಕಿಳಿದ ಧೋನಿ ಮಾರ್ಕ್​ವುಡ್ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಭರ್ಜರಿ ಸಿಕ್ಸ್​ ಸಿಡಿಸಿದ್ದರು. ಇದರೊಂದಿಗೆ ಐಪಿಎಲ್​ನಲ್ಲಿ 5 ಸಾವಿರ ರನ್ ಪೂರೈಸಿದ ವಿಶೇಷ ಸಾಧಕರ ಪಟ್ಟಿಗೆ ಧೋನಿ ಸೇರ್ಪಡೆಯಾದರು.

3 / 11
ಅಲ್ಲದೆ ಈ ಸಾಧನೆ ಮಾಡಿದ 5ನೇ ಭಾರತೀಯ ಹಾಗೂ 7ನೇ ಬ್ಯಾಟರ್ ಎನಿಸಿಕೊಂಡರು. ಐಪಿಎಲ್​ನಲ್ಲಿ ಒಟ್ಟು 208 ಇನಿಂಗ್ಸ್ ಆಡಿರುವ ಧೋನಿ 39.09 ರ ಸರಾಸರಿಯಲ್ಲಿ 5004 ರನ್​ ಕಲೆಹಾಕಿದ್ದಾರೆ. ಈ ವೇಳೆ 24	 ಅರ್ಧಶತಕಗಳನ್ನು ಕೂಡ ಬಾರಿಸಿದ್ದರು.

4 / 11
ಇನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಿಂಗ್ ಕೊಹ್ಲಿ 224 ಐಪಿಎಲ್ ಪಂದ್ಯಗಳಲ್ಲಿ 6706 ರನ್​ಗಳಿಸಿ ಐಪಿಎಲ್​ನ ರನ್​ ಸರದಾರ ಎನಿಸಿಕೊಂಡಿದ್ದಾರೆ.

5 / 11
ಹಾಗೆಯೇ 2ನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದು, ಒಟ್ಟು 199 ಐಪಿಎಲ್ ಪಂದ್ಯಗಳಲ್ಲಿ 6086 ರನ್​ಗಳಿಸಿದ್ದಾರೆ.

6 / 11
ಅದೇ ರೀತಿ ರೋಹಿತ್ ಶರ್ಮಾ 221 ಐಪಿಎಲ್ ಪಂದ್ಯಗಳಿಂದ 5764 ರನ್ ಕಲೆಹಾಕಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

7 / 11
ಇನ್ನು 155 ಐಪಿಎಲ್‌ ಪಂದ್ಯಗಳಲ್ಲಿ 5668 ರನ್ ಕಲೆಹಾಕಿರುವ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.

8 / 11
ಐಪಿಎಲ್​ನಲ್ಲಿ ಒಟ್ಟು 205 ಪಂದ್ಯಗಳನ್ನಾಡಿರುವ ಸುರೇಶ್ ರೈನಾ 5528 ರನ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

9 / 11
ಅದೇ ರೀತಿ ಮಾಜಿ ಆರ್​ಸಿಬಿ ಆಟಗಾರ ಎಬಿ ಡಿವಿಲಿಯರ್ಸ್ 184 ಐಪಿಎಲ್ ಪಂದ್ಯಗಳಿಂದ 5162 ರನ್​ಗಳಿಸಿ ಈ ಪಟ್ಟಿಯಲ್ಲಿ ಆರನೇ ಸ್ಥಾನ ಅಲಂಕರಿಸಿದ್ದಾರೆ.

10 / 11
ಇದೀಗ 236 ಪಂದ್ಯಗಳಲ್ಲಿ 208 ಇನಿಂಗ್ಸ್ ಆಡಿರುವ ಮಹೇಂದ್ರ ಸಿಂಗ್ ಧೋನಿ 5004 ರನ್​ ಪೂರೈಸಿದ್ದು, ಈ ಮೂಲಕ ಐಪಿಎಲ್​ನಲ್ಲಿ ಐದು ಸಾವಿರ ಕಲೆಹಾಕಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

11 / 11
ಇದಲ್ಲದೆ ಐಪಿಎಲ್​ನಲ್ಲಿ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. 236 ಐಪಿಎಲ್​ ಪಂದ್ಯಗಳ ಮೂಲಕ 131 ಕ್ಯಾಚ್ ಹಾಗೂ 39 ಸ್ಟಂಪಿಂಗ್ ಮಾಡಿರುವ ಧೋನಿ ಒಟ್ಟು 170 ಆಟಗಾರರ ಔಟ್​ಗೆ ಕಾರಣರಾಗಿದ್ದಾರೆ. ಅಲ್ಲದೆ ಐಪಿಎಲ್​ನ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ಧೋನಿ (41 ವರ್ಷ) ಪಾತ್ರರಾಗಿದ್ದಾರೆ.