IPL 2023: ಐಪಿಎಲ್ ಫೈನಲ್ಗೂ ಮುನ್ನ ಎಂಎಸ್ ಧೋನಿಗೆ ಬ್ಯಾನ್ ಭೀತಿ..?
TV9 Web | Updated By: ಝಾಹಿರ್ ಯೂಸುಫ್
Updated on:
May 25, 2023 | 8:34 PM
IPL 2023 Kannada: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು 172 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ 157 ರನ್ಗಳಿಗೆ ಆಲೌಟ್ ಆಗುವ ಮೂಲಕ 15 ರನ್ಗಳಿಂದ ಸೋಲೊಪ್ಪಿಕೊಂಡಿತು.
1 / 9
IPL 2023: ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತೋರಿಸಿದ ಅತೀ ಬುದ್ಧಿವಂತಿಕೆ ಇದೀಗ ತಿರುಗುಬಾಣವಾಗುವ ಸಾಧ್ಯತೆಯಿದೆ. ಏಕೆಂದರೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿರುವುದನ್ನು ಇದೀಗ ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದೆ.
2 / 9
ಗುಜರಾತ್ ಟೈಟಾನ್ಸ್ ಇನಿಂಗ್ಸ್ನ 16ನೇ ಓವರ್ ಅನ್ನು ಧೋನಿ ಯುವ ವೇಗಿ ಮಥೀಶ ಪತಿರಾಣಗೆ ನೀಡಿದ್ದರು. ಆದರ ಅದಾಗಲೇ ಮೈದಾನದಿಂದ 9 ನಿಮಿಷಗಳ ಕಾಲ ಹೊರಗಿದ್ದ ಪತಿರಾಣ ಅವರನ್ನು ಅಂಪೈರ್ ತಡೆದರು.
3 / 9
ನಿಯಮಗಳ ಪ್ರಕಾರ ಆಟಗಾರರೊಬ್ಬರು ಮೈದಾನದಿಂದ ಹೊರಗುಳಿದ ಸಮಯದಷ್ಟೇ ಸಮಯ ಮೈದಾನದಲ್ಲಿರಬೇಕಾಗುತ್ತದೆ. ಅಂದರೆ ಮಾತ್ರ ಅವರು ಬೌಲಿಂಗ್ಗೆ ಅರ್ಹರಾಗಿರುತ್ತಾರೆ. ಆದರೆ ಪತಿರಾಣ ಬೌಲಿಂಗ್ ಮಾಡಲು ಬಂದಾಗ ಕೇವಲ 4 ನಿಮಿಷಗಳಾಗಿತ್ತು. ಈ ನಿಯಮವನ್ನು ಅಂಪೈರ್ ಧೋನಿಗೆ ವಿವರಿಸಿದ್ದರು.
4 / 9
ಆದರೆ ಅತೀ ಬುದ್ಧಿವಂತಿಕೆ ಪ್ರದರ್ಶಿಸಿದ ಮಹೇಂದ್ರ ಸಿಂಗ್ ಧೋನಿ ಲೆಗ್ ಅಂಪೈರ್ ಹಾಗೂ ಸ್ಟ್ರೈಟ್ ಅಂಪೈರ್ಗಳ ಜೊತೆ ನಿಯಮಗಳ ಬಗ್ಗೆ ಚರ್ಚಿಸಿದರು. ಈ ಚರ್ಚೆಯ ಮೂಲಕ 4 ನಿಮಿಷಗಳ ಆಟವನ್ನು ವ್ಯರ್ಥ ಮಾಡಿದ್ದರು. ಇದರೊಂದಿಗೆ ಮಥೀಶ ಪತಿರಾಣ ಅವರು ಫೀಲ್ಡ್ನಲ್ಲಿರಬೇಕಾದ ಸಮಯ ಕೂಡ ಪೂರ್ಣಗೊಂಡಿತು.
5 / 9
ಅಲ್ಲದೆ ಅಂಪೈರ್ ಹೇಳಿದ ನಿಯಮದ ಪ್ರಕಾರವೇ ಪತಿರಾಣ ಅವರಿಂದ ಧೋನಿ ಬೌಲಿಂಗ್ ಮಾಡಿಸಿದ್ದರು. ಆದರೆ ಧೋನಿಯ ಈ ನಡೆಯ ಬಗ್ಗೆ ಕಾಮೆಂಟೇಟರ್ಗಳಾ ಸೈಮನ್ ಡೌಲ್, ಸುನಿಲ್ ಗಾವಸ್ಕರ್, ಹರ್ಷ ಬೋಗ್ಲೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರೊಂದಿಗೆ ಇದು ಈಗ ಚರ್ಚಾ ವಿಷಯವಾಗಿದೆ.
6 / 9
ಅತ್ತ ಮ್ಯಾಚ್ ರೆಫರಿ ಕೂಡ ಅಂಪೈರ್ ಜೊತೆಗಿನ ಧೋನಿಯ ವಾಗ್ವಾದವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸಿ ಧೋನಿಯ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
7 / 9
ಇತ್ತ 4 ನಿಮಿಷಗಳ ಆಟವನ್ನು ವ್ಯರ್ಥ ಮಾಡಿದ ಆರೋಪದ ಜೊತೆಗೆ ಧೋನಿ ಸ್ಲೋ ಓವರ್ ರೇಟ್ ಶಿಕ್ಷೆಗೂ ಗುರಿಯಾಗಿದ್ದಾರೆ. ಅಂದರೆ ಸಿಎಸ್ಕೆ ತಂಡವು ನಿಗದಿತ ಸಮಯದೊಳಗೆ 20 ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಇದಕ್ಕೂ ಕೂಡ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.
8 / 9
ಅತ್ತ ಲೀಗ್ ಹಂತದಲ್ಲಿ ಸ್ಲೋ ಓವರ್ಗೆ ದಂಡಕ್ಕೆ ಗುರಿಯಾಗಿದ್ದ ಧೋನಿ ಇದೀಗ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ. ಇದರ ಜೊತೆಗೆ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡಿ ಸಮಯ ವ್ಯರ್ಥ ಮಾಡಿದ ಆರೋಪಕ್ಕೂ ಕೂಡ ಗುರಿಯಾಗಿದ್ದಾರೆ.
9 / 9
ಹೀಗಾಗಿ ಮಹೇಂದ್ರ ಸಿಂಗ್ ಧೋನಿಗೆ ದಂಡ ವಿಧಿಸಲಾಗುತ್ತದೆಯೇ ಅಥವಾ ನಿಷೇಧ ಹೇರಲಾಗುತ್ತದೆಯೇ ಎಂಬುದು ಈಗ ಕುತೂಹಲಕಾರಿ ವಿಷಯ. ಒಂದು ವೇಳೆ 1 ಪಂದ್ಯಕ್ಕೆ ನಿಷೇಧ ಹೇರಿದರೆ ಧೋನಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಾಗುವುದಿಲ್ಲ. ಹಾಗಾಗಿ ಮ್ಯಾಚ್ ರೆಫರಿ ತೀರ್ಮಾನ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 7:22 pm, Wed, 24 May 23